ಸೀರೆ-ಸೆರಗು ಒಂದು ಜನಪದ ನೋಟ
ಸೀರೆ-ಸೆರಗು ಒಂದು ಜನಪದ ನೋಟ ’ ಸೀರೆ’ ಎಂಬ ಪದವು ವಿಭಿನ್ನ ಸಂಸ್ಕೃತಿಗಳನ್ನ ಸಾರುವ ಪದ. ಇದು ನಾಡನ್ನ ಉತ್ತರ ದಕ್ಷಿಣಗಳೆಂದೂ,ವಿಭಜಿಸುವುದು. ಕರ್ನಾಟಕ,ಮಹಾರಾಷ್ಟ್ರ,ಕೇರಳ,ಗುಜರಾತಿ,ಬೆಂಗಾಲಿ ಎಂದು ಉಡುವ ಕ್ರಮಗಳಲ್ಲಿನ ವೈವಿಧ್ಯತೆಗಳನ್ನ ತೋರುವವುದು. ಬ್ರಹ್ಮಣರು,ಮಾರವಾಡಿಗಳು,ಮುಸ್ಲಿಮರು, ಗೌಡತೀರು,ನೌಕರಸ್ಥರು,ಕೂಲಿಗಳು,ಗೃಹಿಣಿಯರು,ವಿಧವೆಯರು,ಕಲಾವಿದರು,ಸಾಮಾನ್ಯರು ಎಂಬ ಬಹುರೂಪಗಳನ್ನ,ಅಜ್ಜಿ,ಅವ್ವ,ಮಗಳು ಎಂಬ ತಲೆ ತಲಾಂತರಗಳನ್ನ ಸಾರುವುದು. ಸೀರೆ ಬಡತನವನ್ನ ತೋರುವ ರೀತಿಯಂತೆಯೇ ಸೀರೆಗೆ ಶ್ರೀಮಂತಿಕೆಯನ್ನೂ ಸಾರುವ ಸಾಮರ್ಥ್ಯವಿದೆ. ಋತುಮತಿ ಶಾಸ್ತ್ರ,ನಿಶ್ಚಿತ ಶಾಸ್ತ್ರ,ಧಾರೆ ಶಾಸ್ತ್ರ,ಪ್ರಸ್ತ,ಸೀಮಂತ,ತೊಟ್ಟಿಲ ಸೀರೆ,ವಿಧವಾ ಸೀರೆ ಎಂಬ ರೂಪಗಳನ್ನ ಪಡೆದಿರುವಂತೆಯೇ ಇದು ದೈನಂದಿನ ಸೀರೆ,ವೃತ್ತಿ ಸೀರೆ,ವಿಶೇಷ ಸಂದರ್ಭಗಳ ಸೀರೆ ಎಂದು ಆಯ್ಕೆಯನ್ನೂ…