ಸಿದ್ದಲಿಂಗಯ್ಯನವರ ‘ಊರುಕೇರಿ’
ಡಾ.ಶಿವಕುಮಾರ್ ಕಂಪ್ಲಿ ಸಹಾಯಕ ಪ್ರಾಧ್ಯಾಪಕರು, ದಾವಣಗೆರೆ ಪ್ರಥಮ ದರ್ಜೆ ಕಾಲೇಜು ಸಿದ್ದಲಿಂಗಯ್ಯನವರ ‘ಊರುಕೇರಿ’ ಅನ್ನ ಮತ್ತುಅರಿವಿನ ವಿಕಾಸದ ಭಿನ್ನದಾರಿಯ ಆತ್ಮಕಥನ ಮಾನವರಚರಿತ್ರೆಅನ್ನದಅನ್ವೇಷಣೆಯಿಂದಆರಂಭಗೊಂಡುಅರಿವಿನ ವಿಕಾಸದೊಂದಿಗೆಪೂರ್ಣಗೊಳ್ಳುತ್ತದೆ.ಇಲ್ಲಿ ನಾವು ಅರಿವೆಂದರೆ ಲೋಕಜ್ಞಾನವೋ ಅಲೌಕಿಕ ಜ್ಞಾನವೋ ಎಂಬ ಪ್ರಶ್ನೆಗಳನ್ನ ಕೇಳಿಕೊಳ್ಳದೆ ಪ್ರಾಣಿಬದುಕಿಗಿಂತಲೂ ಭಿನ್ನವಾದುದುಮಾನವನಜೀವನಎಂಬ ಸರಳ ಸಂಗತಿಯನ್ನಉದಾಹರಣೆಯಾನ್ನಾಗಿನೀಡಬಹುದೇನೋ.ಚರಿತ್ರೆಯ ಈ ಆವರಣದೊಳಗೆ ಎಷ್ಪೋ ಸಲ ‘ಮಾನವಜನ್ಮದೊಡ್ಡದು’ಎನ್ನುವಾಗಲೇಮಾನವರುಪ್ರಾಣಿಗಳಿಗಿಂತಲೂ ಕೀಳಾಗಿ ನಡೆದುಕೊಂಡ ವಿವರಗಳನ್ನ ಕಾಣಬಹುದು. ‘ನೀನಾರಿಗಾದೆಯೋ ಎಲೆಮಾನವ?’ಎಂದು ಪ್ರಶ್ನಿಸುವ ಗೋವಿನ ಪ್ರಶ್ನೆಯೇ ಈ ನೆಲೆಯದು.ಮನುಷ್ಯರೊಳಗೆ ಎಷ್ಟೋ ಸಲ ನಾಲಿಗೆ ಮೇಲೆಯೇನೆಲೆಗಾಣದ ಮಾತು,ಸತ್ಯವಂತಿಕೆ, ಕರುಣೆ ಮತ್ತು ಸಹಕಾರ…