
Daily Archives: June 10, 2021
11 ಜಿಲ್ಲೆಗಳಲ್ಲಿ ಲಾಕ್ ಡೌನ್ ವಿಸ್ತರಣೆ
ಬೆಂಗಳೂರು, ಜೂ,10:ತಜ್ಞರ ನೀಡಿರುವ ಸಲಹೆ ಮೇರೆಗೆ ಕೊರೊನಾ ಸೋಂಕು ಹೆಚ್ಚಿರುವ 12 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದು ವರೆಲು ನಿರ್ಧರಿಸಾಗಿದೆ. ಈಗಿರುವ ನಿರ್ಭಂಧಗಳಲ್ಲಿ ಕೆಲವು ಮಾರ್ಪಾಡುಗಳನ್ನು ಸಡಿಲಿಕೆಗಳನ್ನು ಮಾಡಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ . ಸಿಎಂ ಯಡಿಯೂರಪ್ಪ ಸಭೆ ನಂತರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು,ಕೊರೊನಾ ವೈರಸ್ ಪಾಸಿಟಿವಿಟಿ ಹೆಚ್ಚಾಗಿರುವ 11 ಜಿಲ್ಲೆಗಳಲ್ಲಿ ಕಠಿಣ ಲಾಕ್‌ಡೌನ್ ವಿಸ್ತರಣೆ ಮಾಡುವುದಾಗಿ ಹೇಳಿದ್ದಾರೆ. ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಕೊಡಗು, ಚಾಮರಾಜನಗರ, ಮೈಸೂರು, ದಕ್ಷಿಣ ಕನ್ನಡ…
ಅಡ್ಡ ಹೆಸರುಗಳೆಂಬ ಸಾಮಾಜಿಕ ಸಂಕಥನಗಳು
ಅಡ್ಡ ಹೆಸರುಗಳೆಂಬ ಸಾಮಾಜಿಕ ಸಂಕಥನಗಳು ಅಡ್ಡ ಹೆಸರುಗಳು ಕಾಲು ಮತ್ತು ಕವಲುದಾರಿಗಳಂತವು.ಮನೆಯ ಪರಿಸರಕ್ಕಿಂತಲೂ ಅವು ಸಮೂಹದಿಂದಲೇ ಹುಟ್ಟಿಕೊಂಡವು..ಜನರನ್ನ ವಿಶಿಷ್ಟವಾಗಿ ವಿಶೇಷವಾಗಿ ಕಾಣುವ ಹಂಬಲಹೊತ್ತ ಇವುಗಳು ಗುಣಾನುರೂಪಿಯಾದವು.ಭಿನ್ನ ದಾರಿ ಭಿನ್ನ ಗುರಿಗಳನ್ನ ಆರಿಸಿಕೊಳ್ಳುವ ಇವುಗಳನ್ನ ವಚನಕಾರರ ಕಾಲದಿಂದಲೇ ಗುರ್ತಿಸುವ ಡಾ.ಎಂ.ಎಂ. ಕಲ್ಬುರ್ಗಿಯವರು ಹೇಳುವಂತೆ ಇವು ಅಡ್ಡ ಹೆಸರು ಎಂಬುದಕ್ಕಿಂತಲೂ ಅರ್ಧ ಹೆಸರುಗಳು ಎಂದೇ ಕರೆಯಬಹುದು.ವೃತ್ತಿಸೂಚಿ ಮತ್ತು ಗ್ರಾಮ ಸೂಚಿ ನೆಲೆಯಿಂದ ನೋಡಿದಾಗ ಇವು ಸಾಮಾಜಿಕ ಕಿರು ಕಥನಗಳೂ ಹೌದೆಂಬಂತಿವೆ. ಕತ್ಲಪ್ಪ ಮೇಷ್ಟ್ರು: ಮಂಗಳವಾರದ ಕತ್ತಲು ಆವರಿಸುತ್ತಿದ್ದಂತೆಯೇ ಚೌಡಮ್ಮನ ಅಂಗಳ…
ಮೂರುದಳದ ಕಮಲದಲ್ಲಿ ನೂರು ಧ್ವನಿಗಳ ‘ಬೇಗುದಿ’
ತುರುವನೂರು ಮಂಜುನಾಥ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ ‘ರಾಜೀನಾಮೆಯ ಹೇಳಿಕೆ ನಂತರ ಪಕ್ಷದಲ್ಲಿ ಸಂಚಲನ ಸೃಷ್ಟಿಸಿದೆ.ರಾಜಕೀಯ ತಂತ್ರಗಾರಿಕೆ ಬಲ್ಲ ಬಿಎಸ್‌ವೈ ಅವರು ಅದರ ಮೂರು ದಿನದ ಹಿಂದೆ ನಾಯಕತ್ವದ ವಿಚಾರವಾಗಿ ಯಾವುದೇ ವಿಚಾರಗಳು ಹೈಕಮಾಂಡ್ ಮುಂದಿಲ್ಲ ಎಂದಿದ್ದರು ಆದರೆ ತಮ್ಮ ಪುತ್ರ ವಿಜಯೇಂದ್ರ ದೇಹಲಿಗೆ ಹೋಗಿ ಬರುತ್ತಿದ್ದಂತೆ ‘ವರಿಷ್ಠರು ಬಯಸಿದರೆ ಯಾವುದೇ ಸಂದರ್ಭದಲ್ಲೂ ರಾಜೀನಾಮೆ ನೀಡುತ್ತೇನೆ ಎಂಬ ಹೇಳಿಕೆ ರಾಜಕೀಯ ವಲಯದಲ್ಲಿ ಒಂದು ರೀತಿ ಬಿರುಗಾಳಿ ಬೀಸಿದಂತಾಗಿತ್ತು. ಆ ಹೇಳಿಕೆ ಮೂಲಕ ತಮ್ಮನ್ನು ರಕ್ಷಿಸಿಕೊಳ್ಳುವ ಮತ್ತು ಹೈಕಮಾಂಡ್‌ಗೆ ಸಂದೇಶ…
ಮೈಸೂರು ಜಗಳ: ದೇವರೂ ಅಸಹಾಯಕ
ಮೈಸೂರು ಜಗಳ: ದೇವರೂ ಅಸಹಾಯಕ ದೇವರು ಇದ್ದಾನೋ ಇಲ್ಲವೋ ಎನ್ನುವುದು ನಾಗರಿಕ ಸಮಾಜ ಅಸ್ತಿತ್ವಕ್ಕೆ ಬಂದ ಲಾಗಾಯ್ತಿನಿಂದಲೂ ಇದೆ. ಒಂದು ಧರ್ಮ, ದೇವನೊಬ್ಬ ನಾಮ ಹಲವು ಎಂದರೆ ಇನ್ನೊಂದು ಧರ್ಮ, ಇರುವುದೊಂದೇ ದೇವರು ಎನ್ನುತ್ತದೆ. ಮತ್ತೊಂದು ಧರ್ಮ ಇನ್ನೇನನ್ನೋ ಹೇಳುತ್ತದೆ. ದೇವರು ಇದ್ದಾನೆ ಎನ್ನುವ ವರ್ಗದ ಜೊತೆಗೇ ದೇವರು ಇಲ್ಲ ಎನ್ನುವ ವರ್ಗ ಕೂಡಾ ಇದೆ. ಜಗತ್ತಿನ ಉದ್ದಗಲಕ್ಕೆ ಎಷ್ಟೆಲ್ಲ ಧರ್ಮ, ಎಷ್ಟೆಲ್ಲ ದೇವರು. ಕೊರೋನಾ ಮಾರಕ ದಾಳಿಯನ್ನು ನಾಶಮಾಡುವ ದೇವರು ಮಾತ್ರ ಯಾವ ಧರ್ಮದಲ್ಲೂ ಇಲ್ಲ;…
ಕಳೆದುಕೊಳ್ಳುವ ದುಃಖ
ಕಳೆದುಕೊಳ್ಳುವ ದುಃಖ ನನ್ನ ಹಿಂದಿನ ಅಂಕಣದಲ್ಲಿ ಕ್ರಮವಾಗಿ ಬಾಲ್ಯದ ನೆನಪುಗಳ ಸುರುಳಿ ಬಿಚ್ಚಿಡುತ್ತಿದ್ದೆ. ಆದರೆ ಈ ಕೊರೋನ ಎಂಬ ಕಾಣದ ಜೀವವು ನಾವು ಬಯಸದ, ನೆನೆಸದ, ಊಹೆ ಮಾಡದ ಘಟನೆಗಳನ್ನು ನಮ್ಮ ಬದುಕಿನ ಹಾದಿಯಲ್ಲಿ ತಂದೊಡ್ಡಿದ ಪರಿಣಾಮ ಇಂದು ನಾನು ಅದರಿಂದಾದ ಕೆಲವು ಮಾನಸಿಕ ಗೊಂದಲಗಳು, ಯೋಚನೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ನಾನು ಶಾಲೆಯಲ್ಲಿ ಪಾಠ ಮಾಡುತ್ತಿದ್ದಾಗ ಮುಖ್ಯ ಶಿಕ್ಷಕರನ್ನು ಭೇಟಿಯಾಗಬೇಕೆಂದು ಒಬ್ಬ ಮಹಿಳೆ ಶಾಲೆಯ ಹತ್ತಿರ ಬಂದಿದ್ದರು. ನಾನು ಅವರನ್ನು ಮುಖ್ಯ ಕಛೇರಿಯಲ್ಲಿ ಕೂರಿಸಿದ್ದೆ. ನಂತರ…
ಕೋವಿಡ್ ಮೂರನೆ ಅಲೆ; ಮಾರ್ಗಸೂಚಿ ಬಿಡುಗಡೆ
ನವದೆಹಲಿ,ಜೂ,10:ದೇಶದಲ್ಲಿ ನಿಧಾನಗತಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ.ಈಗ ಮೂರನೇ ಅಲೆಯ ಕುರಿತು ಸರ್ಕಾರ ಪೂರ್ವ ಸಿದ್ದತೆಗಳ ಬಗ್ಗೆ ತಯಾರಿ ನಡೆಸುತ್ತಿದೆ. ಮೂರನೇ ಅಲೆಯಲ್ಲಿ ವೈರಸ್ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಕೆಲವು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. “ಮಕ್ಕಳಲ್ಲಿ ಸೋಂಕು ಗಂಭೀರ ಸ್ವರೂಪ ಪಡೆಯುವುದಿಲ್ಲ. ಇದಕ್ಕೆ ಯಾವುದೇ ಪುರಾವೆ ಸದ್ಯಕ್ಕೆ ದೊರೆತಿಲ್ಲ” ಎಂದು ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಈಗಾಗಲೇ ಹೇಳಿದ್ದಾರೆ. ಆದರೂ ಮುಂಜಾಗ್ರತಾ ಕ್ರಮವಾಗಿ 18 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಕೊರೊನಾ ಬಂದರೆ ಏನು…
ಶನಿವಾರ ಶಿಕಾರಿಪುರಕ್ಕೆ ಸಿಎಂ ಯಡಿಯೂರಪ್ಪ ಭೇಟಿ
ಬೆಂಗಳೂರು,ಜೂ,೧೦: ವಾರಾಂತ್ಯದ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತವರು ಜಿಲ್ಲೆ ಶಿವಮೊಗ್ಗ ಮತ್ತು ಶಿಕಾರಿಪುರಕ್ಕೆ ಭೇಟಿ ನೀಡಲಿದ್ದಾರೆ ಶುಕ್ರವಾರ ಹೆಚ್‌ಎಎಲ್’ಗೆ ತೆರಳಲಿದ್ದು, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಮೊದಲಿಗೆ ಹಾಸನಕ್ಕೆ ಭೇಟಿ ನೀಡುವ ಅವರು ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲನೆ ನಡೆಸಲಿದ್ದಾರೆ. ನಂತರ ಮಧ್ಯಾಹ್ನ ೧.೩೦ರ ಸುಮಾರಿಗೆ ಶಿಕಾರಿಪುರಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿ, ರಸ್ತೆ ಮೂಲಕ ಶಿವಮೊಗ್ಗ ಜಿಲ್ಲೆಗೆ ಶನಿವಾರ ಬೇಟಿ ನೀಡಲಿದ್ದಾರೆ. ಭಾನುವಾರ ಮಧ್ಯಾಹ್ನ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಮುಂದಿನ…
ಕಟ್ಟಡ ಕುಸಿದು ಮುಂಬೈನಲ್ಲಿ ೧೧ ಸಾವು
ಮುಂಬೈ, ಜೂ, ೧೦; ನಾಲ್ಕು ಅಂತಸ್ತಿನ ಕಟ್ಟಡ ಕುಸಿದ ಪರಿಣಾಮ ೧೧ ಜನ ಮೃತಪಟ್ಟ ಘಟನೆ ಮುಂಬೈ ನಗರದ ಪಶ್ಚಿಮ ಭಾಗದ ಮಲಾಡ್ ಪ್ರದೇಶದಲ್ಲಿ ಸಂಭಿವಿಸಿದೆ ನಾಲ್ಕು ಅಂತಸ್ತಿನ ಕಟ್ಟಡ ಬುಧವಾರ ತಡರಾತ್ರಿ ಕುಸಿದು ಮತ್ತೊಂದು ಕಟ್ಟಡದ ಮೇಲೆ ಬಿದ್ದಿದೆ. ಇದುವರೆಗೂ ೧೮ ಜನರನ್ನು ರಕ್ಷಣೆ ಮಾಡಲಾಗಿದ್ದು, ೬ ಮಕ್ಕಳು ಸೇರಿದಂತೆ ೧೧ ಜನರು ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಅವಶೇಗಳಡಿ ಸಿಲುಕಿದ ಜನರಿಗಾಗಿ ಹುಡುಕಾಟವನ್ನು ನಡೆಸಲಾಗುತ್ತಿದೆ. ಘಟನೆಯಲ್ಲಿ ೬ ಜನರು ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗೆ ದಾಖಲು…
ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು
ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು. ತಿನ್ನುವ ಅಡಿಕೆ ಸಣ್ಣದು, ಬೆಲೆ ಕಡಿಮೆ. ಅದಕ್ಕಾಗಿ ಕೈ ಒಡ್ಡುವುದು, ಕದಿಯುವುದೂ ಉಂಟು. ಇದು ವ್ಯಕ್ತಿಯ ಮನಸ್ಸ್ಥಿತಿ ಯೋಗ್ಯತೆಗಳನ್ನಳೆಯುವುದು. ಯೋಗ್ಯಾಯೋಗ್ಯತೆ, ಪಾಪ ಪುಣ್ಯ, ಒಳಿತು ಕೆಡಕು, ಅಪರಾಧ – ನಿರಪರಾಧಗಳು…
