Girl in a jacket

Daily Archives: June 8, 2021

ಸಿನಿಮಾ ಕಲಾವಿದರಿಗೆ ೬.೬೦ ಕೋಟಿ ರೂ ಅನುದಾನ ಬಿಡುಗಡೆ

ಬೆಂಗಳೂರು,ಜೂ,೦೮ : ಸಿನಿಮಾ ಕ್ಷೇತ್ರವನ್ನೇ ನಂಬಿ ಜೀವಿಸುತ್ತಿದ್ದ ಸಾವಿರಾರು ಕಲಾವಿದರು ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದರು ಹೀಗಾಗಿ ಸರ್ಕಾರ ಇಂತವರ ನೆರವಿಗೆ ದಾವಿಸಿದ್ದು ಸಿನಿಮಾ ಕಲಾವಿದರಿಗೆ ೬.೬೦ ಕೋಟಿ ರೂಅನುದಾನ ಬಿಡುಗಡೆ ಮಾಡಿದೆ ಸಿನಿಮಾ-ಕಿರುತೆರೆಯ ಕಲಾವಿದರು, ತಂತ್ರಜ್ಞರಿಗೆ ತಲಾ ೩ ಸಾವಿರ ರೂಪಾಯಿಯನ್ನು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಸಿನಿಮಾ, ಕಿರುತೆರೆ ಕ್ಷೇತ್ರದ ೨೨ ಸಾವಿರ ಮಂದಿಗೆ ತಲಾ ಮೂರು ಸಾವಿರ ರೂ. ಸಿಗಲಿದೆ. ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಸೇರಿದಂತೆ ಕಲಾವಿದರ ತಂಡು ಸಿಎಂ ಯಡಿಯೂರಪ್ಪರನ್ನು…

ಮಾಜಿ ಸಚಿವ ಸಿ.ಎಂ.ಉದಾಸಿ ನಿಧನ

ಬೆಂಗಳೂರು,ಜೂ,೦೮: ಮಾಜಿ ಸಚಿವ ಹಾಗೂ ಹಾಲಿ ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕ ಸಿ.ಎಂ.ಉದಾಸಿ ನಿಧನರಾಗಿದ್ದಾರೆ. ಅವರಿಗೆ ೮೫ ವರ್ಷ ವಯಸ್ಸಾಗಿತ್ತು ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯಿಸಿರೆಳದಿದ್ದಾರೆ. ಹೃದಯ ಸಂಬಂಧಿ ಕಾಯಿಲೆಗೆ ಕಳೆದ ೧೫ ದಿನಗಳಿಂದ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಾರದ ಹಿಂದೆ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಮಂಗಳವಾರ ಬೆಳಿಗ್ಗೆ ಆರೋಗ್ಯದಲ್ಲಿ ಏರುಪೇರಾಗಿ, ಮಧ್ಯಾಹ್ನದ ವೇಳೆಗೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಅವರಿಗೆ…

ಉಳ್ಳವರು ಸಂತ್ರಸ್ತರಿಗೆ ನೆರವಾಗಿ: ಆರೂಢಭಾರತೀ ಸ್ವಾಮೀಜಿ

ಬೆಂಗಳೂರು,ಜೂ,08:ಯಾವುದೂ ಯಾರಿಗೂ ಶಾಶ್ವತವಲ್ಲ. ನಿನ್ನೆ ಇನ್ನಾರದ್ದೋ ಆಗಿದ್ದು ಇಂದು ನಮ್ಮದಾಗಿದೆ. ನಾಳೆ ಯಾರ ಪಾಲೆಂಬುದು ತಿಳಿದಿಲ್ಲ. ನಮ್ಮ ಲೆಕ್ಕಾಚಾರಗಳು ಯಥಾವತ್ತಾಗಿ ನಡೆಯುವುದಿಲ್ಲ ಎಂಬುದಕ್ಕೆ ಕೊರೊನಾ ದುಷ್ಕಾಲವೇ ಸಾಕ್ಷಿ. ಇಂದು ನಾವು ಚೆನ್ನಾಗಿರಬಹುದು. ನಾಳೆ ಏನಿದೆಯೋ? ಚೆನ್ನಾಗಿರುವಾಗಲೇ ನಮ್ಮಲ್ಲಿರುವುದನ್ನು ಇಲ್ಲದವರಿಗೆ ನೀಡೋಣ. ಇಂದು ಕೈ ಒಡ್ಡಿ ಪಡೆಯುವವನು ನಾಳೆ ನಮಗೇ ಕೈ ಎತ್ತಿ ಕೊಡುವವನಾದಾನು! ಎಂದು ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಡಾ ಆರೂಢಭಾರತೀ ಸ್ವಾಮೀಜಿ ಹೇಳಿದರು. ಅವರು ಇಂದು ಸಿದ್ಧಾರೂಢ ಮಿಷನ್, ಸಹಬಾಳ್ವೆ…

ವೃತ್ತಿಪರ ಕೋರ್ಸ್‌ಗಳಿಗೆ ಸಿಇಟಿ ಅಂಕಗಳು ಮಾತ್ರ ಪರಿಗಣನೆ-ಅಶ್ವತ್ಥ್‌ನಾರಾಯಣ

ಬೆಂಗಳೂರು,ಜೂ,೦೮:ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಈ ಬಾರಿ ಕೇವಲ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸುವ ಬಗ್ಗೆ ಸರ್ಕಾರ ತೀರ್ಮಾನಿಸಿದೆ ಎಂದು ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆ ಕಾರಣ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಎಂದರು. ಈ ಸಂಬಂಧ ಬೆಂಗಳೂರಿನಲ್ಲಿ ಇಂದು ಉನ್ನತ ಅಧಿಕಾರಿಗಳ ಜತೆಸಮಾಲೋಚನೆ ನಡೆಸಿ ನಂತರ ಅವರು ಈ ವಿಷಯವನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು ಪಿಯುಸಿ ಅಂಕಗಳ ವಿಚಾರವಾಗಿ ನೀತಿಯಲ್ಲಿ ಅಗತ್ಯ ತಿದ್ದುಪಡಿ ತರಲಾಗುವುದು.ಪದವಿ ಕಾಲೇಜುಗಳಿಗೆ, ಇತರ…

ಕೊರೊನಾ ಸೋಂಕಿತರ ಪ್ರಮಾಣ ಕಡಿಮೆ, ಸಾವಿನ ಸಂಖ್ಯೆ ಜಾಸ್ತಿ ;ವಿವರಣೆ ನೀಡಿದ ಬಿಬಿಎಂಪಿ ಆಯುಕ್ತ

ಬೆಂಗಳೂರು, ಜೂ, ೮: ಕೊರೊನಾ ಸೋಂಕಿತರ ಪ್ರಮಾಣ ದಿನೇ ದಿನೇ ಕಡಿಮೆಯಾಗುತ್ತಿದ್ದರೂ ಕುಡ ಸಾವಿನ ಸಂಖ್ಯೆ ಹೆಚ್ಚಾಗುತ್ತಿತ್ತು ಈ ಕುರಿತು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ವಿವರಣೆ ನೀಡಿದ್ದಾರೆ, ಕಳೆದ ಒಂದು ತಿಂಗಳ ಹಿಂದಿನ ಪರಿಸ್ಥಿತಿ ಅವಲೋಕಿಸಿದರೆ ಸ್ಮಶಾನದಲ್ಲಿ ಕ್ಯೂ ಕೂಡಾ ಹಿಂದಿನ ರೀತಿಯಲ್ಲಿ ಇರಲಿಲ್ಲ. ಆದರೂ, ಬೆಂಗಳೂರಿನಲ್ಲಿ ಸಾವಿನ ಸಂಖ್ಯೆಯ ಅಂಕಿಅಂಶ ಕಮ್ಮಿಯಾಗಿರಲಿಲ್ಲ. ಈ ಬಗ್ಗೆ ಬಿಬಿಎಂಪಿ ಆಯುಕ್ತರಾದ ಗೌರವ್ ಗುಪ್ತ ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದು, ಸಾರ್ವಜನಿಕರು ಗಾಬರಿ ಪಡಬೇಕಾಗಿಲ್ಲ ಎಂದು ಹೇಳಿ, ಸಾವಿನ ಸಂಖ್ಯೆ…

ಫ್ರೆಂಚ್ ಓಪನ್ ಟೆನಿಸ್; ೧೫ನೇ ಬಾರಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ನಡಾಲ್

ಪ್ಯಾರೀಸ್,ಜೂ,೦೮:ರಾಫೆಲ್ ನಡಾಲ್ ಆರಂಭಿಕ ಹಿನ್ನಡೆಯ ಹೊರತಾಗಿಯೂ ಸರಿಯಾದ ಸಮಯದಲ್ಲಿ ತಮ್ಮ ಅನುಭವವನ್ನು ಬಳಸಿಕೊಂಡು ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದ್ದಾರೆ. ಇಟಲಿಯ ಯುವ ಆಟಗಾರ ಜೆನಿಕ್ ಸಿನ್ನರ್ ೭-೫, ೬-೩, ೬-೦ ಸೆಟ್‌ಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ೧೫ನೇ ಬಾರಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಕೇವಲ ೧೯ ವರ್ಷದ ಇಟಲಿ ಆಟಗಾರ ಸಿನ್ನರ್ ಮೊದಲ ಸೆಟ್‌ನಲ್ಲೇ ನಡಾಲ್ ಅವರನ್ನು ತಬ್ಬಿಬ್ಬುಗೊಳಿಸುವಲ್ಲಿ ಯಶಸ್ವಿಯಾದರು. ವಿಶ್ವ ೧೯ನೇ ಶ್ರೇಯಾಂಕಿತ ಆಟಗಾರ ಸಿನ್ನರ್ ರಣತಂತ್ರಕ್ಕೆ ನಡಾಲ್…

ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಿಗೆ ಶಿಕ್ಷೆ ಪ್ರಕಟ

ಉಡುಪಿ, ಜೂ, ೦೮: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಆರೋಪವನ್ನು ಸಾಬೀತು ಪಡಿಸಿದ್ದು ಶಿಕ್ಷೆಯನ್ನು ಪ್ರಕಟಿಸಿದೆ ಉದ್ಯಮಿ ಭಾಸ್ಕರ್ ಶೆಟ್ಟಿಯನ್ನು ಕೊಲೆ ಮಾಡಿ ನಂತರ ಹೋಮಕುಂಡದಲ್ಲಿ ಸುಟ್ಟಿದ್ದ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಶೆಟ್ಟಿ ಹಾಗೂ ರಾಜೇಶ್ವರಿ ಗೆಳೆಯ ನಿರಂಜನ ಭಟ್‌ಗೆ ಶಿಕ್ಷೆ ಪ್ರಕಟವಾಗಿದೆ. ಉಡುಪಿ ಜಿಲ್ಲಾ ನ್ಯಾಯಾಲಯದಿಂದ ಜೂನ್ ೮ಕ್ಕೆ ಶಿಕ್ಷೆ ತೀರ್ಪು ಪ್ರಕಟ ದಿನಾಂಕ ಮುಂದೂಡಲಾಗಿತ್ತು. ಮೂರು ಪ್ರಮುಖ ಆರೋಪಿಗಳು ದೋಷಿಗಳು ಎಂದು ಕೋರ್ಟ್ ತೀರ್ಪು ನೀಡಿದೆ.…

ದೇಶದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಮತ್ತಷ್ಟು ಇಳಿಕೆ

ನವದೆಹಲಿ, ಜೂ 08:ದೇಶದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಪ್ರಕರಣಗಳು ಇಳಿಕೆಯಾಗುತ್ತಿದ್ದು ಕಳೆದ 24 ಗಂಟೆಯಲ್ಲಿ 86,498 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,89,96,473ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 2123 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 1,82,282 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ದೇಶದಲ್ಲಿ ಈವರೆಗೆ 23,61,98,726 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ.

ಅಕ್ಕಿ ಮೇಲೆ ಆಶೆ, ನೆಂಟರ ಮೇಲೆ ಪ್ರೀತಿ

ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ                                               ಸಿದ್ಧಸೂಕ್ತಿ : ಅಕ್ಕಿ ಮೇಲೆ ಆಶೆ, ನೆಂಟರ ಮೇಲೆ ಪ್ರೀತಿ. ಸಮಾರಂಭ ಸತ್ಕಾರಗಳು ಅದ್ದೂರಿಯಾಗಬೇಕು, ಹೆಚ್ಚು ಜನ ಸೇರಬೇಕು, ಅಲ್ಲಿ ತಾ ಮಿಂಚಬೇಕು, ಇದು ಜನರ ಆಶೆ. ಇದಕೆ ಶ್ರಮಪಡಬೇಕು, ಖರ್ಚು ಮಾಡಬೇಕು. ಶ್ರಮ ಪಡೆ, ಖರ್ಚು ಮಾಡೆ, ಎಂದರೆ…

Girl in a jacket