ಅಡ್ಡ ಹೆಸರು ಎಂಬ ಸಾಮಾಜಿಕ ಕಥನಗಳು
ಅಡ್ಡ ಹೆಸರು ಎಂಬ ಸಾಮಾಜಿಕ ಕಥನಗಳು ಮಾನವ ಚರಿತ್ರೆಗಳನ್ನ ರಾಜಕೀಯ ನೆಲೆಯಲ್ಲಿ ನೋಡುವಂತೆಯೇ ಸಾಂಸ್ಕೃತಿಕ ನೆಲೆಯಲ್ಲಿಯೂ ನೋಡ ಬಹುದಾಗಿದೆ.ಭಾಷೆಯಲ್ಲಿ ಅಂಕಿತ ನಾಮಗಳು ವ್ಯಕ್ತಿ ಗುರುತನ್ನ ಹೇಳಿದರೆ ಅನ್ವರ್ಥ ನಾಮಗಳು ಆ ವ್ಯಕ್ತಿಯ ಸಾಂಸ್ಕೃತಿಕ ವಿವರಗಳನ್ನ ಸಾರುವ ಜೀವ ದ್ರವ್ಯಗಳಂತೆ ಕಾಣುತ್ತವೆ.ಅನ್ವರ್ಥ ನಾಮವನ್ನ ಅಡ್ಡ ಹೆಸರೆಂದು ಕರೆವ ಜನರ ಆಸಕ್ತಿಗಳನ್ನ ಸೂಕ್ಷ್ಮವಾಗಿ ಕೆದಕಿದಾಗ ಈ ’ಅಡ’ ಎಂಬ ನೇರವಲ್ಲದ ಹೆಸರಿಗೆ ಗ್ರಾಮ,ಬದುಕು,ವೃತ್ತಿ ಮತ್ತು ಜಾತಿ ಬೇರುಗಳ ಬಿಳಲುಗಳಿರುವುದನ್ನ ಗುರುತಿಸಬಹುದಾಗಿದೆ. ನಗರದಂತೆ ಹಳ್ಳಿಗಲ್ಲಿ ಇಣುಕುವ ಈ ಸಾಂಸ್ಕೃತಿಕ ಸಂಗತಿಗಳ…