ನಟ್ ಯಶ್‌ನಿಂದ ೩೦೦೦ ಕಾರ್ಮಿಕರಿಗೆ ತಲಾ ೫೦೦೦ ರೂ ಪರಿಹಾರ
ಬೆಂಗಳೂರು,ಜೂ,೦೧; ಕೊರೊನಾ ಅಟ್ಟಹಾಸದಿಂದ ರಾಜ್ಯ ಸರ್ಕಾರ ಲಾಕ್‌ಡೌನ್‌ಮಾಡಿದ ಪರಿಣಾಮ ಚಿತ್ರದ್ಯೋಮ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸಾವಿರಾರು ಕಲಾವಿದರು ತಂತ್ರಜ್ಞರು,ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಸಂಕಷ್ಟದಲ್ಲಿರುವ ಮೂರು ಸಾವಿರ ಕಾರ್ಮಿಕರಿಗೆ ನಟ ಯಶ್ ತಲಾ ೫೦೦೦ ರೂಗಳನ್ನು ಘೋಷಿಸಿದ್ದಾರೆ. ಹೌದು. ಇದು ಬರೀ ಮಾತನಾಡುವ ಸಮಯವಲ್ಲ. ಸಂಕಷ್ಟದಲ್ಲಿರುವ ಸಿನಿಮಾ ಕುಟುಂಬದ ಜೊತೆ ನಿಲ್ಲುವ ಸಮಯ. ಹಾಗಾಗಿ ಚಿತ್ರರಂಗದ ೨೧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು ೩,೦೦೦ಕ್ಕೂ ಹೆಚ್ಚಿರುವ ನಮ್ಮ ಸಿನಿಮಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರ ಅಧಿಕೃತ ಖಾತೆಗಳಿಗೆ ತಲಾ ೫ ಸಾವಿರವನ್ನು ನನ್ನ…