ಯೂಟ್ಯೂಬ್‌ನಲ್ಲಿ ಹೈಕೋರ್ಟ್ ಕಲಾಪ
ಬೆಂಗಳೂರು,ಮೇ,೩೨: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೈಕೋರ್ಟ್ ಕಲಾಪವನ್ನು ಯೂಟ್ಯೂಬ್‌ನಲ್ಲಿ ನೇರಪ್ರಸಾರ ಮಾಡಲಾಯಿತು. ಜನಸಾಮಾನ್ಯರಿಗೆ ಹೈಕೋರ್ಟ್ ಕಲಾಪ ವೀಕ್ಷಿಸಲು ಅವಕಾಶ ಸಿಗಬೇಕು ಎನ್ನುವ ಆಶಯದ ಹಿನ್ನೆಲೆಯಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಈ ಮಹತ್ವದ ಕ್ರಮ ತೆಗೆದುಕೊಂಡರು. ೩೧ರ ಮಧ್ಯಾಹ್ನ ೨.೪೦ರಿಂದ ಹೈಕೋರ್ಟ್ ಕಲಾಪದ ಯುಟ್ಯೂಬ್ ನೇರ ಪ್ರಸಾರ ಆರಂಭವಾಯಿತು. ಕೋರ್ಟ್ ಹಾಲ್೧ರಲ್ಲಿ ವಿಭಾಗೀಯ ಪೀಠವು ವಿಚಾರಣೆ ನಡೆಸಿತು. ಮುಖ್ಯ ನ್ಯಾಯಮೂರ್ತಿ ಎ.ಎಸ್.ಒಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ನ್ಯಾಯಪೀಠದಲ್ಲಿದ್ದರು. ಪ್ರಾಯೋಗಿಕವಾಗಿ ಕಲಾಪವನ್ನು ಯುಟ್ಯೂಬ್‌ನಲ್ಲಿ…