ವಿರೂಪಾಕ್ಷ ಬೀದಿಯ ಮಂಟಪಗಳ ಕುರಿತ ಬಜಾರುಗಳ ಅಧ್ಯಯನ
ವಿರೂಪಾಕ್ಷ ಬೀದಿಯ ಮಂಟಪಗಳ ಕುರಿತ ಬಜಾರುಗಳ ಅಧ್ಯಯನ ಹಂಪೆಯ ವಿರೂಪಾಕ್ಷ ದೇವಾಲಯದ ಮುಂದಿನ ಬೀದಿಯನ್ನು ವಿರೂಪಾಕ್ಷ ಬೀದಿ, ಪಂಪಾ ರಥವೀದಿ, ಹಂಪೆ ಬಜಾರು ಎಂದೆಲ್ಲಾ ಕರೆಯಲಾಗುತ್ತದೆ. ಇದು ಪಂಪಾವಿರೂಪಾಕ್ಷರ ರಥೋತ್ಸವಕ್ಕಾಗಿ ನಿರ್ಮಿಸಿದ್ದ ರಥವೀದಿ. ಈ ಬೀದಿಯ ಇಕ್ಕೆಲಗಳಲ್ಲಿ ಸಾಲುಮಂಟಪಗಳಿದ್ದು, ಇವು ಅಂದಿನ ವ್ಯಾಪಾರ-ವಾಣಿಜ್ಯದ ಮಳಿಗೆಗಳೂ ಆಗಿದ್ದವು. ಇದು ಸುಮಾರು ಒಂದು ಕಿ.ಮೀ ದೂರವಿದ್ದು, ಎದುರು ಬಸವಣ್ಣ ಮಂಟಪದವರೆಗೂ ವಿಸ್ತರಿಸಿತ್ತು. ಬೀದಿಯ ಕೊನೆಗೆ ಎಡಭಾಗದಲ್ಲಿ ವಿಸ್ತಾರವಾಗಿರುವ ಅನೇಕ ಮಂಟಪಗಳಿವೆ. ಈ ಮಂಟಪಗಳು ಹಿಂದೆ ಬಹುದೊಡ್ಡ ಮಠವೇ ಆಗಿದ್ದವು. ಈ…