ಗರಡಿಮನೆ ಎಂಬ ದೇಸೀ ಬುತ್ತಿಯ ಗಂಟು…
ಗರಡಿಮನೆ ಎಂಬ ದೇಸೀ ಬುತ್ತಿಯ ಗಂಟು… ಕರೊನಾವನ್ನು ಒಳಗೊಂಡಂತೆ ಸಿಡುಬು,ಮೈಲಿ,ದಢಾರ,ಮೊದಲಾದ ಸಂಕ್ರಾಮಿಕ ರೋಗಗಳೆಲ್ಲಾ ಯಾಕೆ ನಮ್ಮ ನಾಡಿನೊಳಗೆ ಸ್ತ್ರೀ ಹೆಸರನ್ನ ಹೊತ್ತು ನಿಲ್ಲುತ್ತವೆ? ಕೊರೊನಾ ಮಹಾ ಮಾರಿ,ಕೊರೊನಾ ಹೆಮ್ಮಾರಿ ಎಂದೆಲ್ಲಾ ಕರೆಸಿಕೊಂಡಿರುವ ಇದರ ಎರಡನೇ ಅಲೆಯಲ್ಲಿ ಕೊಚ್ಚಿಹೋದವರೆಲ್ಲಾ ಬಹುತೇಕ ಯುವಕರು.ತೀವ್ರ ಅಸಡ್ಡೆ,ಹುಂಬತನ,ಅಶಿಸ್ತಿನಿಂದಾಗಿ ಇಲ್ಲವೇ ದುರಬ್ಯಾಸಗಳಿಂದಾಗಿ, ಇತರರನ್ನ ರಕ್ಷಿಸಲು ಹೆಣಗಿದಾಗ,ಸದ್ದಿಲ್ಲದೇ ಬಲಿಯಾದವರ ಬಗೆ ಬಗೆದಂತೆ ಬಹುರೂಪಿಯಾಗಿದೆ. ” ತಾಯಿ ರಕ್ಕಸಿಯಾದಂತೆ” ಕಾಣುವ ಈ ವೈರಸ್ ದಾಳಿಯು ಈಗ ಹೆಚ್ಚು ಮಧ್ಯಮ ವರ್ಗ ಮತ್ತು ಶ್ರೀಮಂತ ವರ್ಗಗಳನ್ನ ಬಾಧಿಸುತ್ತಿರುವುದರ ಹಿನ್ನೆಲೆಯೇನು?…