ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆಯೇ ವೇಶ್ಯಾವಾಟಿಕೆ ದಂಧೆ ಕಿಂಗ್ ಪಿನ್?

Share

ಬೆಂಗಳೂರು,ಮೇ,೨೮: ರಾಮಮೂರ್ತಿ ನಗರದಲ್ಲಿ ನಡೆದ ಯುವತಿಯ ಮೇಲಿನ ಸಾಮೂಹಿಕ ಹತ್ಯಾಚಾರದ ಸಂತ್ರಸ್ತೆ ವೇಶ್ಯಾವಾಟಿಕೆ ದಂಧೆಯೇ ಕಿಂಗ್ ಪಿನ್ ಎನ್ನುವ ಸಂಶಯ ಪೊಲೀಸರಲ್ಲಿ ಕಾಡಿದ್ದು ಆ ನಿಟ್ಟಿನಲ್ಲಿ ಈಗ ತನಿಖೆ ಚುರುಕುಗೊಳಿಸಿದ್ದಾರೆ.
ಏಕೆಂದರೆ ಆ ಯುವತಿಯ ಮೇಲೆ ನಡೆದ ಸಾಮೂಹಿಕ ಹತ್ಯಾಚಾರದ ಎರಡು ವೀಡಿಯೋಗಳು ಕೂಡ ವಿಭಿನ್ನವಾಗಿದ್ದು ಇನ್ನೊಬ್ಬ ಮಹಿಳೆಯ ವಿಕೃತಿ ಮೆರೆಯುತ್ತಿದ್ದ ದೃಶ್ಯಗಳು ಒಂದು ರೀತಿ ಮನಕುಲುಕವಂತಿದೆ ಆದರೆ ಇವೆರಲ್ಲರೂ ಕೂಡ ವೇಶ್ಯಾವಾಟಿಕೆಗೆ ಬೆಂಗಳೂರಿಗೆ ಬಂದಿದ್ದು ಎನ್ನುವ ಮಹತ್ತರ ಅಂಶ ಈಗ ಬಯಲಾಗುತ್ತಿದೆ
ಸಂತ್ರಸ್ತೆ ಹಾಗೂ ಯುವತಿ ಇವರೆಲ್ಲರೂ ಒಂದೇ ತಂಡದವರು ಎನ್ನಲಾಗಿದ್ದು, ಬಾಂಗ್ಲಾದಿಂದ ಅಕ್ರಮವಾಗಿ ಬಂದಿದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ಲಭಿಸಿದೆ.
ಇವರ ಬಳಿ ನಕಲಿ ಆಧಾರ್ ಕಾರ್ಡ್ ಕೂಡ ಇದೆ ಎಂಬ ಮಾಹಿತಿ ಸಿಕ್ಕಿದೆ.
ದುಬೈನಲ್ಲಿ ೨ ವರ್ಷ ಬಾರ್ ಡ್ಯಾನ್ಸರ್‌ಆಗಿ ಕೆಲಸ ಮಾಡುತ್ತಿದ್ದ ಸಂತ್ರಸ್ತ ಯುವತಿ ೨ ವರ್ಷದ ಹಿಂದೆ ಹೈದರಾಬಾದ್‌ಗೆ ಬಂದು ಮಸಾಜ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ವೇಶ್ಯಾವಾಟಿಕೆ ಜಾಲವನ್ನು ಸಂತ್ರಸ್ತೆಯೇ ನಿರ್ವಹಿಸುತ್ತಿದ್ದು, ಹಣಕಾಸಿನ ವಿಚಾರವಾಗಿ ಸಂಘರ್ಷ ಮೂಡಿದ ಕಾರಣ ಈ ಘಟನೆ ನಡೆದಿದೆ ಎನ್ನುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ
ವಿಪರ್ಯಾಸವೆಂದರೆ ಆರೋಪಿಗಳೆಲ್ಲರನ್ನೂ ಬಾಂಗ್ಲಾದಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದೇ ಸಂತ್ರಸ್ತೆ ಎನ್ನಲಾಗುತ್ತಿದ್ದು, ಅವರಿಗೆ ಹಣ ನೀಡದೆ ಸತಾಯಿಸಿದ ಕಾರಣ ಅದು ಗಲಾಟೆಗೆ ತಿರುಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಕೇರಳದ ಕ್ಯಾಲಿಕಟ್‌ನಲ್ಲಿ ಸ್ಪಾ ತೆರೆದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಯುವತಿ ನಂತರ ಕೆಲ ಯುವತಿಯರನ್ನೂ ಅಲ್ಲಿಗೆ ಕರೆಸಿಕೊಂಡಿದ್ದರು. ಇದು ಗುಂಪಿನಲ್ಲಿ ಬಿರುಕು ಮೂಡಲು ಕಾರಣವಾಗಿದ್ದು ಬೆಂಗಳೂರಿನಲ್ಲಿದ್ದ ಯುವಕರಿಗೆ ಸಿಟ್ಟು ತರಿಸಿತ್ತು. ಅದಾದ ಮೇಲೆ ಮೇ ೧೯ರ ಸುಮಾರಿಗೆ ಆಕೆಯನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದರು ಎಂದು ಬಲ್ಲ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಗ್ಯಾಂಗ್ ರೇಪ್ ವಿಡಿಯೋವನ್ನು ಹೈದರಾಬಾದ್?ನ ಸ್ನೇಹಿತರಿಗೆ ಕಳಿಸಿದ ನಂತರ ಸಂತ್ರಸ್ತ ಯುವತಿ ಪ್ರಕರಣ ದಾಖಲಿಸುವುದಾಗಿ ಆರೋಪಿಗಳಿಗೆ ಬೆದರಿಕೆ ಹಾಕಿದ್ದರು. ಅಲ್ಲದೇ ೭ ಲಕ್ಷ ರೂ. ನೀಡಿದರೆ ಮಾತ್ರ ಪ್ರಕರಣ ದಾಖಲಿಸುವುದಿಲ್ಲ ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮೇ ೧೯ರಂದು ಚಿತ್ರೀಕರಿಸಿದ್ದ ಈ ವಿಡಿಯೋ ಬಗ್ಗೆ ಆರಂಭದಲ್ಲಿ ೨೦ ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದ ಯುವತಿ, ನಂತರ ೧೦ ಲಕ್ಷ ಕೇಳಿ ಕೊನೆಯಲ್ಲಿ ೭ಲಕ್ಷಕ್ಕೆ ಒಪ್ಪಿಕೊಂಡಿದ್ದರು ಎನ್ನಲಾಗಿದೆ. ಆ ಮೂಲಕ ಯುವತಿಯಿಂದ ಹಣ ಕೀಳಲು ಹೋದ ಯುವಕರೇ ತಪ್ಪೆಸಗಿ ಹಣ ಕಳೆದುಕೊಂಡರು ಎಂದು ಮೂಲಗಳು ಮಾಹಿತಿ ನೀಡಿವೆ.
ಈ ಘಟನೆಯ ನಂತರ ಬಾಂಗ್ಲಾ ಯುವಕರ ಗುಂಪಿನ ನಡುವೆ ಮಾರಾಮಾರಿ ನಡೆದಿದ್ದು ಮಾರತ್ತಹಳ್ಳಿಯ ಬಾಂಗ್ಲಾ ನಿವಾಸಿಗಳಿಗೆ ವಿಷಯ ತಿಳಿದಾಗ ಸುಮಾರು ೪೦ ಜನರ ಗುಂಪು ಆರೋಪಿಗಳ ಮೇಲೆ ಹಲ್ಲೆ ನಡೆದಿರುವುದು ತಿಳಿದುಬಂದಿದೆ.
ಸದ್ಯ ಸಂತ್ರಸ್ತ ಯುವತಿಯನ್ನ ಬೆಂಗಳೂರು ಪೊಲೀಸರು ಪತ್ತೆಹಚ್ಚಿ ಕೇರಳದ ಕಲ್ಲಿಕೋಟೆಯಿಂದ ಸಂತ್ರಸ್ತೆಯನ್ನು ಕರೆತರುತ್ತಿದ್ದಾರೆ ಸ್ನೇಹಿತ ಲಕ್ಷ್ಮೀಲಾಲ್ ಎಂಬುವವರ ಮನೆಯಲ್ಲಿ ಆಶ್ರಯ ಪಡೆದಿದ್ದ ಸಂತ್ರಸ್ತೆಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈ ಮೂಲಕ ಅತ್ಯಾಚಾರ ಪ್ರಕರಣಕ್ಕೆ ಮಹತ್ತರ ತಿರುವು ಸಿಗುವ ಸಾಧ್ಯತೆ ಇದ್ದು, ಬೆಂಗಳೂರಿನಿಂದ ಕೇರಳಕ್ಕೆ ತೆರಳಿರುವ ಪೊಲೀಸರ ತಂಡ ಸಂತ್ರಸ್ತ ಯುವತಿಯನ್ನು ಕರೆದುಕೊಂಡು ಬಂದು ತನಿಖೆ ಮುಂದುವರೆಸಲಿದ್ದಾರೆ.

Girl in a jacket
error: Content is protected !!