ಬೆಂಗಳೂರು,ಜೂ,೧೨: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಲೇ ಇದೆ.ಈಗ ಮತ್ತೊಂದು ಸತ್ಯ ಬಯಲಾಗಿದೆ. ಸ್ಟ್ರಿಂಗ್ ಮಾಡುವ ಮೊದಲೇ ರಾಸಲೀಲೆ ವೀಡಿಯೋ ಆಗಿದ್ದರ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಹೌದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನರೇಶ್ ಮತ್ತು ಶ್ರವಣ್ ಅವರನ್ನು ವಿಚಾರಣೆಗೊಳಪಡಿಸಿದಾಗ ಈ ಸತ್ಯವನ್ನು ಬಾಯಿಬಿಟ್ಟಿದ್ದಾರೆ, ರಾಸಲೀಲೆ ವಿಡಿಯೋ ಮಾಡುವ ಸಂಬಂಧ ಯುವತಿಗೆ ಸ್ಟಿಂಗ್ ಕ್ಯಾಮರ ಕೊಡಿಸಿದ್ದು ನಾವು ಎಂದು ಶ್ರವಣ್ ಒಪ್ಪಿಕೊಂಡಿದ್ದಾನೆ.
ಅವರು ಹೇಳಿರುವ ಇಂಟರೆಸ್ಟಿಂಗ್ ವಿಚಾರ ಏನಂದ್ರೆ ಸ್ಟಿಂಗ್ ಕ್ಯಾಮರದಲ್ಲಿ ವಿಡಿಯೋ ಆಗುವ ಮೊದಲೆ ರಾಸಲೀಲೆ ವಿಡಿಯೋ ಆಗಿತ್ತಂತೆ. ಸದ್ಯ ವೈರಲ್ ಆಗಿರೋ ವಿಡಿಯೋ ಜಾರಕಿಹೋಳಿಯವರ ಮೊಬೈಲಲ್ಲೇ ಶೂಟ್ ಆಗಿದ್ದು. ಅವರೇ ತಮ್ಮ ಕ್ಯಾಮೆರಾದಲ್ಲಿ ಯುವತಿಗೆ ವಿಡಿಯೋ ಮಾಡುವಂತೆ ಹೇಳಿರುವ ಮಾತು ಸದರಲ್ಲಿದೆ. ಆ ವಿಡಿಯೋ ಜಾರಕಿಹೋಳಿ ಅವರ ಮೊಬೈಲ್ನಲ್ಲಿ ಇದೆ, ಬೇಕಿದ್ರೆ ಚೆಕ್ ಮಾಡಿ ಎಂದಿರೋ ಎಂದು ಶ್ರವಣ್ ಹೇಳಿದ್ದಾನೆ.
ಜಾರಕಿಹೋಳಿ ಯುವತಿಗೆ ಭಲವಂತವಾಗಿ ಮತ್ತು ಬೆದರಸಿ ಲೈಂಗಿಕ ಸಂಪರ್ಕ ಬೆಳಸಿದ್ದಾರೆ. ಕೇವಲ ಸದ್ಯ ವೈರಲ್ ಆಗಿರೋ ವಿಡಿಯೋ ಬಿಟ್ಟು ಇನ್ನು ಸಾಕಷ್ಟು ಯುವತಿಯರ ಜೊತೆಗಿರೋ ವಿಡಿಯೋ ಸಾಹುಕಾರ್ ಮೊಬೈಲ್ನಲ್ಲಿ ಇದೆ. ಈ ವಿಚಾರವನ್ನು ಯುವತಿಯೇ ನಮಗೆ ಹೇಳಿದ್ಳು. ಹಾಗಾಗೇ ನಾವು ಅವರನ್ನು ಸಿಲುಕಿಸುವ ಸಂಬಂಧ ಸ್ಟಿಂಗ್ ವಿಡಿಯೋ ಮಾಡಲು ಹೇಳಿದ್ವಿ ಎಂದು ಶ್ರವಣ್ ಹೇಳಿಕೆ ಕೊಟ್ಡಿದ್ದಾನೆ.
ಉದ್ದೇಶಪೂರ್ವಕವಾಗಿ ತೆಗೆಸಿದ ವಿಡಿಯೋ ನಾವೇ ನೋಡಿಲ್ಲ. ಅದು ಬಯಲಾಗಿಲ್ಲ. ಇದರ ರಾ ಫುಟೇಜ್ ಎಲ್ಲವೂ ಯುವತಿ ಮನೆಯಲ್ಲೇ ಇತ್ತು. ವಿಡಿಯೋ ನಂತರ ಘಟನೆ ಬಗ್ಗೆ ಅವರ ಮನೆಯವರಿಗೆ ತಿಳಿಸುವುದಾಗಿ ಯುವತಿಗೆ ಹೇಳಿದ್ವಿ. ಪೊಲೀಸ್ ಸಂಪರ್ಕ ಮಾಡಿ ದೂರು ನೀಡಿ ಎಂದೂ ತಿಳಿಸಿದ್ವಿ. ಆದ್ರೆ ಯುವತಿ ಹೆದರಿ ದೂರು ನೀಡಲು ಹಿಂದೇಟಾಕಿದ್ರು. ಅದಾದ ಬಳಿಕ ಅವರ ಮೊಬೈಲ್ನಲ್ಲಿದ್ದ ವಿಡಿಯೋನೇ ಹೇಗೋ ವೈರಲ್ ಆಯ್ತು. ವಿಡಿಯೋ ವೈರಲ್ ಬಳಿಕ ಯುವತಿ ಮನೆಗೆ ಜಾರಕಿಹೋಳಿ ಕಡೆಯವರು ಬಂದು ಹೋಗಿದ್ದಾರೆ. ಸಿಡಿ ವೈರಲ್ ಆದ ದಿನಕೂಡ ಯುವತಿಗೆ ಜಾರಕಿಹೋಳಿ ಕಡೆಯವರು ಕರೆ ಮಾಡಿ ಧಮ್ಕಿ ಹಾಕಿದ್ರು.
ನಿನ್ನ ಹಾಗೂ ನಿನಗೆ ಸಫೋರ್ಟ್ ಮಾಡಿದವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ರು. ಜೀವ ಭಯದಿಂದ ನಾವೂ ಊರು ಬಿಟ್ಟಿದ್ವಿ, ಹೆಚ್ಚಾಗಿ ರೈಲು-ಬಸ್ಸಿನಲ್ಲಿ ಪ್ರಯಾಣ ಮಾಡ್ತಿದ್ವಿ ಎಂದು ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಯುವತಿಗೆ ಜಾರಕಿಹೋಳಿ ಪಿಎ ನಾಗರಾಜ್ ಅವರ ಬಿಎಸ್‌ಎನ್‌ಎಲ್ ನಂಬರ್‌ನಿಂದ ಕರೆ ಬರ್ತಿತ್ತು. ಜಾರಕಿಹೋಳಿ ಅಪಾರ್ಟ್ಮೆಂಟ್ಗೆ ಮೊದಲು ಯುವತಿಯನ್ನು ಕರೆದೊಯ್ದಿದ್ದು ಇದೇ ನಾಗರಾಜ್ ಎಂದು ಅವರು ಆರೋಪಿಸಿದ್ದಾರೆ.