ಬೆಂಗಳೂರು,ಅ.06: ಮುಂಬೈನಿಂದ ಕಡಿಮೆ ಹಣಕ್ಕೆ ಮಕ್ಕಳನ್ನು ಖರೀದಿಸಿ ತಂದು ಬೆಂಗಳೂರಿನಲ್ಲಿ ಮಕ್ಕಳಿಲ್ಲದ ಪೋಷಕರಿಗೆ ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುತ್ತಿದ್ದ ಮಕ್ಕಳ ಮಾರಾಟ ಜಾಲವನ್ನ ಪೋಲಸರು ಭೇದಿಸಿದ್ದಾರೆ.
ಮಕ್ಕಳ ಮಾರಾಟ ದಂಧೆಗೆ ಗರ್ಭಿಣಿ ಮಹಿಳೆಯರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊಡುವ ತಾಯಿ ಕಾರ್ಡ್ ನ್ನೇ ನಕಲು ಮಾಡಿ ದುರ್ಬಳಕೆ ಮಾಡಿಕೊಂಡಿರುವ ಆಘಾತಕಾರಿ ಸಂಗತಿ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಚಾಮರಾಜಪೇಟೆಯ ಸಿರ್ಸಿ ವೃತ್ತದಲ್ಲಿರುವ ಹೆರಿಗೆ ಆಸ್ಪತ್ರೆಯಲ್ಲಿ ಕಳ್ಳತನವಾಗಿದ್ದ ಮಗುವಿನ ಜಾಡು ಹಿಡಿದು ತನಿಖೆ ನಡೆಸಿದ ಪೊಲಿಸ್ ಸಬ್ಇನ್ಸ್ಪೆಕ್ಟರ್ ಶ್ರೀನಿವಾಸ್ ಬಾಂಬೆಯಿಂದ ಬೆಂಗಳೂರು ವರೆಗೂ ಹಬ್ಬಿರುವ ಮಕ್ಕಳ ಮಾರಾಟ ಜಾಲವನ್ನೇ ಪತ್ತೆ ಮಾಡಿದ್ದಾರೆ. ಈ ಹಿಂದೆ ತಲಘಟ್ಟಪುರ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ದಂಧೆಯ ಕಿಂಗ್ ಪಿನ್ ಮನೆಯಲ್ಲಿ ಶೋಧ ನಡೆಸಿದಾಗ 20 ಕ್ಕೂ ಹೆಚ್ಚು ತಾಯಿಕಾರ್ಡ್ ನಕಲು ಮಾಡಲಾಗಿದೆ. ಕೆಂಗೇರಿಯ ಖಾಸಗಿ ಆಸ್ಪತ್ರೆಯಲ್ಲಿ ತಾಯಿ ಕಾರ್ಡ್ ನಕಲು ಮಾಡಿರುವ ಆಘಾತಕಾರಿ ಸಂಗತಿಯನ್ನು ಬಯಲಿಗೆ ಎಳೆದಿದ್ದಾರೆ.
ಮಾಹಿತಿ ಆಧರಿಸಿ ವಿಶೇಷ ತನಿಖಾ ತಂಡ ನಡೆಸಿದಾಗ ಐವಿಎಫ್ ಕೇಂದ್ರಗಳಲ್ಲಿ ಬಡ ಮಹಿಳೆಯರಿಗೆ ಆಶ್ರಯ ನೀಡಿ ಮಕ್ಕಳಿಗೆ ಜನ್ಮ ಕೊಡುವ ಜಾಲದ ಮಾಹಿತಿ ಸಿಕ್ಕಿದ್ದು, ಅದರ ಆಧಾರದ ಮೇಲೆ ತನಿಖೆ ನಡೆಸಿದಾಗ ಬಡ ಪೋಷಕರ ಬಳಿ ಮಕ್ಕಳನ್ನು ಖರೀದಿಸಿ ಅವನ್ನು ಬಾಡಿಗೆ ತಾಯಂದಿರ ಹೊಟ್ಟೆಯಲ್ಲಿ ಜನಿಸಿದ ಮಕ್ಕಳು ಎಂಬಂತೆ ಬಿಂಬಿಸಿ ಮಾರಾಟ ಮಾಡುತ್ತಿದ್ದರು. ಇದಕ್ಕಾಗಿ ತಾಯಿ ಕಾರ್ಡ್ ನ್ನು ನಕಲು ಮಾಡುತ್ತಿದ್ದರು ಎಂದು ದಕ್ಷಿಣ ವಿಭಾದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ಹದಿನಾಲ್ಕು ಮಕ್ಕಳು ಸಿಡಬ್ಲೂಸಿ ವಶಕ್ಕೆ:
30 ವರ್ಷದಿಂದ ನೆಮ್ಮದಿ ಇರಲಿಲ್ಲ: ಜೈಲಿನಲ್ಲಿಯೇ ನೆಮ್ಮದಿ ಎಂದ ಹಲ್ಲೆಗೆರೆ ಶಂಕರ್ 30 ವರ್ಷದಿಂದ ನೆಮ್ಮದಿ ಇರಲಿಲ್ಲ: ಜೈಲಿನಲ್ಲಿಯೇ ನೆಮ್ಮದಿ ಎಂದ ಹಲ್ಲೆಗೆರೆ ಶಂಕರ್
ಹದಿನಾಲ್ಕು ಮಕ್ಕಳು ಪತ್ತೆ:
ಮುಂಬಯಿ ಸೇರಿದಂತೆ ನಾನಾ ಕಡೆ ಬಡವರಿಂದ ಕಡಿಮೆ ಬೆಲೆಗೆ ಮಕ್ಕಳನ್ನು ಖರೀದಿ ಮಾಡುತ್ತಿದ್ದರು. ಅದೇ ಮಕ್ಕಳನ್ನು ಬೆಂಗಳೂರಿನಲ್ಲಿ ಮಕ್ಕಳಿಲ್ಲದ ತಾಯಂದಿರನ್ನು ಹುಡುಕಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು. ಈವರೆಗೂ ಸುಮಾರು ಹನ್ನೊಂದು ಮಕ್ಕಳನ್ನು ಮಾರಾಟ ಮಾಡಿದ್ದರು. ಸದ್ಯ ನಾಲ್ವರು ಬಂಧನಕ್ಕೆ ಒಳಗಾಗಿದ್ದಾರೆ. ಪ್ರಮುಖ ಆರೋಪಿ ರತ್ನ ಮೃತಪಟ್ಟಿದ್ದಾರೆ. ಬಂಧಿತ ಆರೋಪಿಗಳು ಈವರೆಗೂ ಮಾರಾಟ ಮಾಡಿದ್ದ ಹನ್ನೊಂದು ಮಕ್ಕಳನ್ನು ಪತ್ತೆ ಮಾಡಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ ಎಂದು ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ
ಕಿಂಗ್ ಪಿನ್ ಸಾವು :
ಮಕ್ಕಳ ಮಾರಾಟ ಜಾಲದ ಪ್ರಮುಖ ಕಿಂಗ್ ಪಿನ್ ರತ್ನ. ವಿಲ್ಸನ್ ಗಾರ್ಡನ್ ದೇವಿ ಷಣ್ಮುಗಮ್ಮ ಮತ್ತು ಹೊಂಗಸಂದ್ರದ ಧನಲಕ್ಷ್ಮೀ ಪ್ರಮುಖ ಆರೋಪಿಗಳು. ಮಕ್ಕಳ ಮಾರಾಟ ಜಾಲ ಪತ್ತೆ ಮಾಡುವ ವೇಳೆಗೆ ನೆಲಮಂಗಲ ಮೂಲದ ರತ್ನ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಇದಕ್ಕೂ ಮೊದಲು ದೇವಿ ಜತೆ ಸೇರಿ ಕೆಲ ಐವಿಎಫ್ ಸೆಂಟರ್ ಗಳ ಸಂಪರ್ಕದಿಂದ ಮಕ್ಕಳು ಇಲ್ಲದ ಪೋಷಕರ ಸಂಪರ್ಕ ಪಡೆಯುತ್ತಿದ್ದರು. ಅವರಿಗೆ ಉಚಿತವಾಗಿಯೇ ಮಗು ಕೊಡುವ ನೆಪದಲ್ಲಿ ಗಾಳ ಹಾಕಿ ಆ ಬಳಿಕ ಹಣವನ್ನು ಪಡೆಯುತ್ತಿದ್ದರು. ಕೆಲವು ಐವಿಎಫ್ ಸೆಂಟರ್ ಗಳಿಗೆ ಬಾಡಿಗೆ ತಾಯಂದಿರನ್ನು ಪೂರೈಸುತ್ತಿದ್ದ ಈ ಗ್ಯಾಂಗ್ ಆ ಬಳಿಕ ಮಕ್ಕಳನ್ನೇ ಮಾರಾಟ ಮಾಡುವ ದಂಧೆ ಆರಂಭಿಸಿತ್ತು. ವಿಲ್ಸನ್ ಗಾರ್ಡನ್ ದೇವಿ ಷಣ್ಮುಗಪ್ಪ ಕೆಲ ಪಿಜಿ ಇಟ್ಟುಕೊಂಡು ಬಾಡಿಗೆ ತಾಯಂದಿರನ್ನು ಐವಿಎಫ್ ಕೇಂದ್ರಗಳಿಗೆ ಪೂರೈಕೆ ಮಾಡುತ್ತಿದ್ದಳು ಎನ್ನಲಾಗಿದೆ. ಇದೀಗ ರತ್ನ ಹೊರತು ಪಡಿಸಿ ನಾಲ್ವರು ಬಂಧನಕ್ಕೆ ಒಳಗಾಗಿದ್ದಾರೆ.
ರೈಲ್ವೇ ಸ್ಟೇಷನ್ ಬಳಿ ಮೂರು ದಿನ ಕಾರ್ಯಾಚರಣೆ:
ಮಗು ಕಳ್ಳತನ ಪ್ರಕರಣ ಪತ್ತೆ ಮಾಡಲು ಪಿಎಸ್ಐ ಶ್ರೀನಿವಾಸ್ ನೇತತ್ವದಲ್ಲಿ ಒಂದು ತಂಡ ರಚನೆ ಮಾಡಿದ್ದರು. ಮಗು ಜಾಡು ಹಿಡಿದ ಪ್ರಕರಣದಲ್ಲಿ ಮಕ್ಕಳ ಮಾರಾಟ ಜಾಲವನ್ನೇ ಪತ್ತೆ ಮಾಡಿದ್ದರು. ಇನ್ನು ಆರೋಪಿಗಳನ್ನು ಬಲೆಗೆ ಬೀಳಿಸಲು ಮಹಿಳಾ ಪೊಲೀಸ್ ಪೇದೆಯನ್ನು ಮಗು ಖರೀದಿ ಮಾಡುವ ಸೋಗಿನಲ್ಲಿ ದೇವಿಯನ್ನು ಸಂಪರ್ಕಿಸಿದ್ದರು. ಹಣ ಕೊಡುವ ಬಗ್ಗೆ ಖಚಿತಪಡಿಸಿಕೊಂಡ ಬಳಿಕ ಮಗುವನ್ನು ಮೆಜೆಸ್ಟಿಕ್ ರೈಲ್ವೇ ನಿಲ್ದಾಣದ ಬಳಿ ನೀಡುವುದಾಗಿ ತಿಳಿಸಿತ್ತು. ಮೂರು ದಿನ ಪೊಲೀಸರು ಹಗಳಿರುಳು ಕಾದರೂ ದಂಧೆಕೋರರರು ಮಗುವನ್ನು ತಂದಿರಲಿಲ್ಲ. ಅಂತಿಮವಾಗಿ ದೇವಿ ಷಣ್ಮುಗಮ್ಮ ನನ್ನು ಲಾಕ್ ಮಾಡಿಕೊಂಡು ಪೊಲೀಸರು ಮಗುವನ್ನು ಮುಂಬಯಿಯಿಂದ ತಂದು ಮರಾಟ ಮಾಡಲು ಯತ್ನಿಸಿದ ಇತರೆ ಮೂವರನ್ನು ಬಂಧಿಸಿದ್ದಾರೆ. ಒಟ್ಟು ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಒಂದು ಪ್ರಕರಣದ ಜಾಡು ಹಿಡಿದು ಮಕ್ಕಳ ಮಾರಾಟ ಮಾಡುವ ಕರಾಳ ದಂಧೆಯನ್ನೇ ಬಯಲಿಗೆ ಎಳೆಯುವಲ್ಲಿ ಪಿಎಸ್ ಐ ಶ್ರೀನಿವಾಸ್ ಯಶಸ್ವಿಯಾಗಿದ್ದಾರೆ. ಪಿಎಸ್ಐ ಶ್ರೀನಿವಾಸ್ ಮತ್ತು ತಂಡದ ಕಾರ್ಯ ಡಿಸಿಪಿ ಹರೀಶ್ ಪಾಂಡೆ ಶ್ಲಾಘಿಸಿದ್ದಾರೆ.