ಧರ್ಮಸ್ಥಳ ಹೂತಿಟ್ಟ ಶವ ಪ್ರಕರಣ ; ರವಿಕೆ ಪತ್ತೆ

Share

ಧರ್ಮಸ್ಥಳ, ಜು,30-ನಿಗೂಢ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಐಟಿ ನಡೆಸುತ್ತಿರುವ ಶೋಧ ಕಾರ್ಯದಲ್ಲಿ ಮಹಿಳೆ ರವಿಕೆ ಪತ್ತೆಯಾಗಿದ್ದು ಮಹತ್ವದ ಸುಳಿವು ದೊರೆತಂತಾಗಿದೆ.

ಕಳೆದ ಎರಡು ದಿನಗಳಿಂದ ಇಲ್ಲಿ ನಡೆಯುತ್ತಿರುವ ಶೋಧ ಕಾರ್ಯದಲ್ಲಿ ಗುಂಡಿ ಅಗೆದರೂ ಯಾವುದೆ ಸುಳಿವು ಸಿಕ್ಕಿರಲಿಲ್ಲ ಈಗ ದೊರೆತಿರುವ ರವಿಕೆ ಮಹತ್ವದ ಸುಳಿವು ದೊರೆತಂತಾಗಿದೆ.
ಸೈಟ್ ನಂ.1ರಲ್ಲಿ 2.5 ಅಡಿ ಆಳದಲ್ಲಿ ಹರಿದ ಕೆಂಪು ರವಿಕೆ, ಪಾನ್ ಕಾರ್ಡ್, ಎಟಿಎಂ ಕಾರ್ಡ್ ಪತ್ತೆಯಾಗಿವೆ.

ಸೈಟ್ ನಂ.1ರಲ್ಲಿ ಪತ್ತೆಯಾದಿರುವಂತ ಎಟಿಎಂ ಕಾರ್ಡ್ ನಲ್ಲಿ ಪುರುಷನ ಹೆಸರು ನಮೂದಾಗಿದ್ದರೇ, ಲಕ್ಷ್ಮೀ ಎಂಬ ಹೆಸರಿನ ಮಹಿಳೆಯ ಪ್ಯಾನ್ ಕಾರ್ಡ್ ಕೂಡ ಪತ್ತೆಯಾಗಿದೆ. ಒಂದು ಬ್ಯಾಗ್ ಕೂಡ ಪತ್ತೆಯಾಗಿರುವ ಬಗ್ಗೆ ಎಸ್‌ಐಟಿಯ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

ಸೈಟ್ ನಂ.1ರಲ್ಲಿ ಇಷ್ಟೆಲ್ಲಾ ವಸ್ತುಗಳು ಪತ್ತೆಯಾಗಿರೋದನ್ನು ಎಸ್‌ಐಟಿ ಕೂಡ ದೃಢಪಡಿಸಿದೆ. ಆ ಮೂಲಕ ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಂತೆ, ಮಹತ್ವದ ಸುಳಿವುಗಳು ಸಿಕ್ಕಂತೆ ಆಗಿದೆ.

Girl in a jacket
error: Content is protected !!