ಬೆಂಗಳೂರು,ಮೇ,೨೩: ದರೋಡೆ ಮಾಡಲು ಮುಂದಾಗಿದ್ದ ನಾಲ್ವರು ರೌಡಿಶೀಟರ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಿಸಿಬಿ ಪೊಲೀಸರಿಗೆ ಬಂದ ಮಾಹಿತಿಯನ್ನು ಆಧರಿಸಿ ದರೋಡೆಗೆ ಸಜ್ಜಾಗಿದ್ದ ವರನ್ನು ಬಂಧಿಸಿದ್ದು ಅವರು ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನ ಸಹಚರರು ಎಂದು ಹೇಳಲಾಗಿದೆ.
ಜಾನ್ ವಿಲಿಯಮ್, ಶಶಿಧರ ಅಲಿಯಾಸ್ ಗುಂಡ, ಪಾರ್ತಿಬನ್, ಮೈಕಲ್ ಬಂಧಿತರು. ಇವರು ಬರ್ಲಿ ಸ್ಟ್ರೀಟ್ ಬಳಿ ದಾರಿಹೋಕರನ್ನು ದೋಚಲು ಹೊಂಚು ಹಾಕಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಲಾಂಗು-ಮಚ್ಚು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಅಶೋಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವಿಲ್ಸನ್ ಗಾರ್ಡನ್ ಕುಖ್ಯಾತ ರೌಡಿಶೀಟರ್ ನಾಗರಾಜ್ ಅಲಿಯಾಸ್ ನಾಗನ ಸಹಚರರಾದ ವಿಲ್ಸನ್ ಗಾರ್ಡನ್‌ನ ರೌಡಿಶೀಟರ್ ಜಾನ್ ವಿಲಿಯಂ ಅಲಿಯಾಸ್ ಅಪ್ಪು ವಿರುದ್ಧ ಕೊಲೆಯತ್ನ, ರಾಬರಿ, ಎನ್.ಡಿ.ಪಿ.ಎಸ್ ಕೇಸ್, ಉಳಿದ ಸಹಚರರಾದ ಮೈಕಲ್ ಪಾರ್ತಿಬನ್ ವಿರುದ್ಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಡಕಾಯಿತಿ ಕೇಸ್ ಇದ್ದು, ಶಶಿಧರ್ ವಿರುದ್ಧ ಅಶೋಕನಗರದಲ್ಲಿ ರಾಬರಿ ಪ್ರಕರಣ ದಾಖಲಾಗಿ
ದರೋಡೆಗೆ ಸಂಚು ಹಾಕಿದ್ದ ನಾಲ್ವರ ಬಂಧನ
Share