ಬೆಂಗಳೂರು,ಸೆ,02: ನಗರದ ಹೊರವಲಯದ ಆನೇಕಲ್ ತಾಲ್ಲೂಕಿನ ಸಿಂಗೇನ ಅಗ್ರಹಾರದ ಗೋಲ್ಡ್ ಕಾಯಿನ್ ಕ್ಲಬ್ ಎದುರಿನ ನಿರ್ಜನ ನೀಲಗಿರಿ ತೋಪಿನಲ್ಲಿ ನಡೆದಿದ್ದ ಡಬಲ್ ಮರ್ಡರ್ ವ್ಯಕ್ತಿಗಳ ಮಾಹಿತಿ ಲಭ್ಯವಾಗಿದ್ದು ರವಿಕುಮಾರ್ ಮತ್ತುಕೊಲ್ಕತ್ತಾ ಮೂಲದ ಚಂದನ್ ಗುಪ್ತಾ ಎಂಬುದು ಗೊತ್ತಾಗಿದೆ. ಘಟನಾ ಸ್ಥಳದ ಸಮೀಪದ ಏರಿಯಾದ ನಿವಾಸಿ ರವಿಕುಮಾರ್. ಚಂದನ್ ಹುಸ್ಕೂರು ಸಮೀಪದ ಘಟ್ಟಹಳ್ಳಿಯಲ್ಲಿ ವಾಸವಿದ್ದನೆನ್ನಲಾಗಿದೆ.
ಘಟನಾ ಸ್ಥಳಕ್ಕೆ ಐಜಿಪಿ ಚಂದ್ರಶೇಖರ್, ಎಎಸ್ಪಿ ಲಕ್ಷ್ಮಿ ಗಣೇಶ್, ಡಿವೈಎಸ್ಪಿ ಮಲ್ಲೇಶ್ ಆಗಮಿಸಿ ಸ್ಥಳಪರಿಶೀಲನೆ ನಡೆಸಿ ಈ ನಿಗೂಢ ಕೋಲೆಗಳ ಹಿಂದಿನ ಸತ್ಯ ಬೇಧಿಸಲು ಹೆಬ್ಬಗೋಡಿ ಪೊಲೀಸರಿಗೆ ತಾಕೀತು ಮಾಡಿದ್ದರು. ಹೆಬ್ಬಗೋಡಿ ಪೊಲೀಸರು ಮೂರು ತಂಡ ರಚಿಸಿಕೊಂಡು ಕಾರ್ಯಾಚರಣೆ ಗಿಳಿದಿದ್ದಾರೆ.
ಇವರ ಜೊತೆ ಮಧ್ಯಪಾನ ಮಾಡಿದ್ದ ಅಸ್ಸಾಂ ಮೂಲದ ಅಬ್ದುಲ್ ಕರೀಮ್. ಪರಾರಿಯಾಗಿರುವುದರಿಂದ ಪೊಲೀಸರು ಮೂದಲು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಅಬ್ದುಲ್ ಕರೀಂ ಆನೇಕಲ್ ತಾಲ್ಲೂಕು ವ್ಯಾಪ್ತಿಯ ಹೀಲಲಿಗೆಯಲ್ಲಿ ವಾಸವಿದ್ದವನು.
ಮೂರು ಜನ ಮಂಗಳವಾರ ಸಂಜೆ ನಿರ್ಜನ ಪ್ರದೇಶದಲ್ಲಿ ಪಾರ್ಟಿ ಮಾಡಿದ್ದಾರೆ. ಸ್ನೇಹಿತರಾಗಿದ್ದ ಅಬ್ದುಲ್ ಕರೀಂ ಹಾಗೂ ಚಂದನ್ ಗೆ ರವಿಕುಮಾರ್ ಪರಿಚಯವಾಗಿದ್ದರಿಂದ ಜೊತೆಯಲ್ಲಿಯೇ ಎಲ್ಲರೂ ಎಣ್ಣೆ ಪಾರ್ಟಿ ಮಾಡಿದ್ದಾರೆ. ರಾತ್ರಿ ಮದ್ಯದ ಮತ್ತಿನ ಭರಾಟೆಯಲ್ಲಿ ಕ್ಯಾತೆ ತೆಗೆದ ಇಬ್ಬರಿಗೂ ಮುಖ, ಮರ್ಮಾಂಗ ಹೊಟ್ಟೆಗೆ ತಿವಿದು ಕೊಲೆಮಾಡಿ ಅಬ್ದುಲ್ ಕರೀಂ ಪರಾರಿಯಾಗಿರುವ ಶಂಕೆ ಮೂಡಿದೆ. ಕೊಲೆಯಾಗಿರುವ ರವಿ ಕುಮಾರ್ ನ ಪಲ್ಸರ್ ಬೈಕ್ ನಲ್ಲಿ ಮೂರು ಜನರು ನಿರ್ಜನ ಪ್ರದೇಶಕ್ಕೆ ಹೋಗಿದ್ದಾರೆ. ಅದೇ ಪಲ್ಸರ್ ಬೈಕಿನಲ್ಲಿ ಹೋಗಿ ಸ್ಥಳೀಯ ಬಾರೊಂದರಲ್ಲಿ ಮಧ್ಯ ಖರೀದಿಸಿದ್ದಾರೆ. ಖರೀದಿ ಮಾಡುವ ಬಗ್ಗೆ ದೃಶ್ಯಗಳು ಪೊಲೀಸರಿಗೆ ಲಭ್ಯವಾಗಿವೆ. ಭೀಕರವಾಗಿ ಹತ್ಯೆ ಆಗಿದ್ದರಿಂದ ನಿನ್ನೆ ಸಂಜೆಯವರೆಗೂ ಕೊಲೆಯಾದವರ ಗುರುತೇ ಪತ್ತೆಯಾಗಿರಲಿಲ್ಲ. ಮೃತ ದೇಹಗಳನ್ನು ಪತ್ತೆ ಮಾಡುವುದೇ ಪೊಲೀಸರಿಗೆ ಸಾಹಸವಾಗಿತ್ತು. ಘಟನೆ ಬಳಿಕ ಜೊತೆಗಿದ್ದ ಅಬ್ದುಲ್ ಕರೀಂ ಬೈಕ್ ಜೊತೆ, ಮೊಬೈಲ್ ಗಳೊಂದಿಗೆ ಪರಾರಿಯಾಗಿದ್ದಾನೆ. ಇದು ಪೊಲೀಸರಿಗೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಚಂದನ್ ಗಾಂಜಾ ವ್ಯಸನಿಯಾಗಿದ್ದ ನೆಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇತ್ತೀಚಿಗೆ ಹೆಬ್ಬಗೋಡಿ ವ್ಯಾಪ್ತಿಯಲ್ಲಿ ಗಾಂಜಾ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇಲ್ಲಿ ಕೂಡ ಎಣ್ಣೆ ಹಾಗೂ ಗಾಂಜಾ ಮತ್ತಿನಲ್ಲೇ ಕೊಲೆ ನಡೆದಿರುವ ಶಂಕೆ ಇದೆ. ಗಾಂಜಾ ಮಾರಾಟದ ವಿಚಾರದಲ್ಲಿಯೂ ಗಲಾಟೆ ನಡೆದು ಕೊಲೆ ಆಯ್ತಾ ಎನ್ನುವ ವಿಚಾರದಲ್ಲಿಯೂ ತನಿಖೆ ನಡೆಸಲಾಗುತ್ತಿದೆ. ಮೃತ ಕಲ್ಕತ್ತಾ ಮೂಲದ ಚಂದನ ಆಟೋ ಚಾಲಕರ ಜೊತೆ ಹೆಚ್ಚು ಸಂಪರ್ಕ ಹೊಂದಿದ್ದ ಎನ್ನಲಾಗಿದೆ.
ಇತ್ತೀಚೆಗೆ ಬೆಂಗಳೂರು ಹೊರಹೊಲಯದ ಹೊಸೂರು ರಸ್ತೆಯಲ್ಲಿ ಹುಸ್ಕೂರು, ಹೆಬ್ಬಗೋಡಿ, ಬೊಮ್ಮಸಂದ್ರ ವ್ಯಾಪ್ತಿಯಲ್ಲಿ ಕೆಲವು ಆಟೋ ಚಾಲಕರ ಮೂಲಕ ಗಾಂಜಾ ಮಾರಾಟವಾಗುತ್ತಿದೆ ಎನ್ನುವ ಮಾಹಿತಿಇದೆ. ಕೆಲವರು ಭಂಗಿಸೇದುವ ಚಟಕ್ಕೆ ಬಿದ್ದಿರುವುದರಿಂದ ಎಲ್ಲಾ ಕೋನಗಳಿಂದಲೂ ತನಿಖೆ ನಡೆಯುತ್ತಿದೆ.