Writing; ಪರಶಿವ ಧನಗೂರು
ಟಾರ್ಗೆಟ್ ಇಂಡಿಯಾ!!
ಭಾರತದ ನೆಲದಲ್ಲಿ ಬಾಂಬ್ ಬಿತ್ತುವ ಟಾಸ್ಕ್..!!
ಈ ಪಾಪಿ ಪಾಕಿಸ್ತಾನಕ್ಕೆ ಬುದ್ಧಿ ಬರುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿರುವ ಕೊಳಕು ಮನಸ್ಸಿನ ಭಯೋತ್ಪಾದಕರ ನೆಲೆಬೀಡಾದ ಈ ಪಾಕಿಸ್ತಾನ ಭಾರತದ ಮೇಲೆ ಹೆಚ್ಚಿನ ಹಿಂಸಾತ್ಮಕ-ವಿಧ್ವಂಸಕ ದಾಳಿಗೆ ಈಗ ಮತ್ತೊಂದು ಬ್ರಹತ್ ಸಂಚು ರೂಪಿಸಿ ಕುಳಿತಿರುವ ಸಾಧ್ಯತೆಯೇ ಗೋಚರಿಸುತ್ತಿದೆ! ಅತ್ತ ಆಫ್ಘಾನಿಸ್ತಾನದದಲ್ಲಿ ಕ್ರೂರ ಭಯೋತ್ಪಾದಕ ತಾಲಿಬಾನಿಗಳಿಗೆ ಅಧಿಕಾರ ಸಿಗುತ್ತಿದ್ದಂತೆ ಮತ್ತಷ್ಟು ರೆಕ್ಕೆ ಪುಕ್ಕ ಕಟ್ಟಿ ಕೊಂಡು ಮೆರೆಯಲು ಸಜ್ಜಾಗಿರುವ ಪಾಕಿಸ್ತಾನ ನಮ್ಮ ಕಾಶ್ಮೀರದ ಕಣಿವೆಯಲ್ಲಿ ಉಗ್ರಗಾಮಿ ಚಟುವಟಿಕೆಗಳಿಗೆ ಹೆಚ್ಚಿನ ಕುಮ್ಮಕ್ಕು ನೀಡುತ್ತಾ ನಿಗುರಾಡುತ್ತಿದೆ! ಜೊತೆಗೆ ಭಾರತದ ಒಳಗೆ ಭಯಾನಕ ಬಾಂಬ್ ಸ್ಫೋಟಗಳನ್ನು ನಡೆಸಿ ವಿಧ್ವಂಸಕ ಕೃತ್ಯ ನಡೆಸಲು ಕಾದು ಕುಳಿತಿದೆ! ಈಗ ರಾಜಧಾನಿ ದೆಹಲಿಯ ವಿಶೇಷ ಪೊಲೀಸ್ ಘಟಕದ ನೇತೃತ್ವದಲ್ಲಿ ಬಹುರಾಜ್ಯ ಭಯೋತ್ಪಾದಕ ಕಾರ್ಯಾಚರಣೆಯಲ್ಲಿ ಆರುಜನ ಭಯೋತ್ಪಾದಕರನ್ನು ಬಂಧಿಸಿದ್ದು ಅವರೆಲ್ಲರೂ ಎರಡೂ ವಿಭಿನ್ನ ಶೈಲಿಯ ಭಯೋತ್ಪಾದಕ ಘಟಕಗಳಾಗಿ ಭಾರತದಲ್ಲಿ ನಿಗೂಢವಾಗಿ ಕಾರ್ಯಾಚರಣೆ ಗಿಳಿದಿರುವುದು ಬೆಳಕಿಗೆ ಬಂದಿದೆ! ಹಿಂಸಾಚಾರದ ಮೂಲಕ ಅಶಾಂತಿ ಉಂಟುಮಾಡಿ ಭಾರತೀಯರನ್ನು ಕೊಲ್ಲುವ ಉದ್ದೇಶದಿಂದಲೇ ಸುಧಾರಿತ ಆಧುನಿಕ ಸ್ಫೋಟಕಗಳೊಂದಿಗೆ ಸಂಚು ರೂಪಿಸಿ ಹೊಂಚಿ ಕುಳಿತಿದ್ದ ಆರು ಜನರಲ್ಲಿ ಒಸಾಮಾ ಮತ್ತು ಜೆಶಾನ್ ಎಂಬ ಇಬ್ಬರು ಭಯೋತ್ಪಾದಕರು ಇದೀಗ ತಾನೇ ಪಾಕಿಸ್ತಾನದಲ್ಲಿ ಉಗ್ರತರಬೇತಿ ಪಡೆದುಕೊಂಡು ಭಾರತಕ್ಕೆ ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ!
ಮುಂಬರುವ ದಿನಗಳಲ್ಲಿ ಭಾರತದ ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ಹಬ್ಬ ಹರಿದಿನಗಳಲ್ಲಿ ಉತ್ಸವಗಳಲ್ಲಿ ನುಗ್ಗಿ ಬಾಂಬುಗಳನ್ನು ಬಿತ್ತಿ ಸ್ಫೋಟಿಸುವ ಟಾಸ್ಕ್ ಅನ್ನು ಇವರಿಗೆ ನೀಡಲಾಗಿತ್ತಂತೇ!! ಇಂಪ್ರೂವೈಷ್ಡ್ ಎಕ್ಸ್ ಪ್ಲೋಷಿವ್ ಡಿವೈಸ್(ಐ ಈ ಡಿ) ಎಂಬ ಕುಕ್ಕರ್ ಬಾಂಬ್, ಟಿಫಿನ್ ಕ್ಯಾರಿಯರ್ ಬಾಂಬ್ ಬ್ಲಾಸ್ಟ್ ಗಳಲ್ಲಿ ತರಬೇತಿ ಪಡೆದು ಪಳಗಿರುವ ಈ ಟೆರರಿಸ್ಟ್ (ಮ್ಯೂಡಲ್ಸ್ )ಘಟಕಗಳಿಂದ ಅಪಾರ ಪ್ರಮಾಣದ ಜೀವಂತ ಬಾಂಬುಗಳು, ಗನ್ನುಗಳನ್ನು ಉತ್ತರಪ್ರದೇಶದ ಪ್ರಯಾಗ್ ರಾಜ್ ಜಿಲ್ಲೆಯಲ್ಲಿ ವಶಪಡಿಸಿಕೊಂಡು ಹೈ ಹಲರ್ಟ ಘೋಷಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಮಹಾರಾಷ್ಟ್ರ, ದೆಹಲಿ ಮತ್ತು ಉತ್ತರ ಪ್ರದೇಶದ ಪೊಲೀಸರು ದೇಶದಲ್ಲಿ ಮುಂದೆ ನಡೆಯಬಹುದಾಗಿದ್ದ ಭಯಾನಕ ವಿಧ್ವಂಸಕ ಕೃತ್ಯದ ಸಂಚನ್ನು ಬೇಧಿಸಿ ವಿಫಲಗೊಳಿಸಿದ್ದಾರೆ.
2008 ನವೆಂಬರ್ 26 ರಲ್ಲಿ ಬಾಂಬೆಯಲ್ಲಿ ನಡೆದಿದ್ದ ಉಗ್ರ ಕಸಬ್ ನೇತ್ರತ್ವದ ಹತ್ತು ಲಷ್ಕರ್-ಇ-ತೋಯ್ಬಾ ಟೆರರಿಸ್ಟ್ ಗಳ ಭಯಾನಕ ದಾಳಿಯ ರೀತಿಯಲ್ಲಿಯೇ ಭಾರತದೊಳಗೆ ಮೇಜರ್ ಅಟ್ಯಾಕಿಗೆ ಸಜ್ದಾಗಿದ್ದ ಪಾಕಿಸ್ತಾನಿ ಪ್ರೇರಿತ ಈ ಆರುಜನ ಭಯೋತ್ಪಾದಕರು ಅಯೋಧ್ಯಾ ರಾಮಮಂದಿರವನ್ನೂ ಟಾರ್ಗೆಟ್ ಮಾಡಿರುವ ಸಾಧ್ಯತೆಗಳ ಬಗ್ಗೆಯೂ ಮಾಹಿತಿ ಕಲೆಹಾಕಿ ಲಾಗುತ್ತಿದೆ! ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ ನಿಂದಲೇ ನೇರವಾಗಿ ತರಬೇತಿ ಪಡೆದು ಪಳಗಿರುವ ಈ ಖತರ್ನಾಕ್ ಉಗ್ರಗಾಮಿಗಳಿಗೆ ಬಾಂಬೆ ಭೂಗತ ಜಗತ್ತಿನ ಡಾನ್ ದೇಶದ್ರೋಹಿ ದಾವೂದ್ ಇಬ್ರಾಹಿಂ ತಮ್ಮ ಅನೀಸ್ ಇಬ್ರಾಹಿಂ ನೇರವಾಗಿ ಹಣಕಾಸಿನ ನೆರವು ನೀಡುತ್ತಾ ಫಂಡಿಂಗ್ ಮಾಡುತ್ತಿದ್ದನೆನ್ನುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ!
ಬಂದಿತ ಒಂದು ಭಯೋತ್ಪಾದಕ ಘಟಕಕ್ಕೆ ದಾವೂದ್ ಇಬ್ರಾಹಿಂ ಬೆಂಬಲ, ಸಂಪೂರ್ಣ ಸಹಕಾರವಿದೆ ಯೆಂಬುದು ಸಾಬೀತಾಗಿದೆ! ಪಾತಕಿ ದಾವೂದ್ ಇಬ್ರಾಹಿಂ ಮತ್ತು ಪಾಕಿಸ್ತಾನದ ಐ.ಎಸ್.ಐ. ಆರ್ಮಿ ಜಂಟಿಯಾಗಿ ಭಾರತದೊಳಗೆ ಬಾಂಬುಗಳನ್ನು ಬಿತ್ತಿ ಸ್ಫೋಟಿಸುವ ಟಾಸ್ಕ್ ಗಳನ್ನು ಭಯೋತ್ಪಾದಕರಿಗೆ ಟಾರ್ಗೆಟ್ ರೀತಿಯಲ್ಲಿ ನೀಡಿ ಕಳುಹಿಸುತ್ತಿರುವುದು, ಸ್ಲೀಪರ್ ಶೆಲ್ ರೀತಿ ಭಯೋತ್ಪಾದಕರನ್ನು ಭಾರತದೊಳಗೆ ನಿಗೂಢವಾಗಿ ಇಟ್ಟು ಕಾಪಾಡಿಕೊಂಡು ಬರುತ್ತಿರುವ ವಿಷಯಗಳು ಒಂದೊಂದಾಗಿ ಹೊರ ಬರುತ್ತಿವೆ! ಈ ಹಿಂದೆ ಇದೇ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ ಐ ಜೊತೆ ಸೇರಿಕೊಂಡು ದೇಶದ್ರೋಹಿ ದಾವೂದ್ ಇಬ್ರಾಹಿಂ ಮುಂಬೈ ನಲ್ಲಿ 2006ರಲ್ಲಿ ಏಳು ಸರಣಿ ರೈಲು ಬಾಂಬ್ ಬ್ಲಾಸ್ಟ್ ಗಳನ್ನು ಮಾಡಿಸಿ ಅಟ್ಟಹಾಸಗೈದಿದ್ದ. ಹಾಗೆಯೇ 2008ರಲ್ಲಿ ಲಷ್ಕರ್-ಇ-ತೋಯ್ಬಾಉಗ್ರ ಮುಂಬೈ 26/11 ಅಟ್ಯಾಕ್ ಮಾಸ್ಟರ್ ಮೈಂಡ್ ಸಹೀದ್ ಜೊತೆ ಸೇರಿಕೊಂಡು ಗ್ರೆನೇಡ್ ಬಾಂಬು ಮೆಷಿನ್ ಗನ್ ಗಳ ಸಮೇತ ಹತ್ತು ಉಗ್ರರನ್ನು ಬಾಂಬೆಯ ಶೀವಾಜಿ ರೈಲು ನಿಲ್ದಾಣ, ತಾಜ್ ಹೋಟೆಲಿಗೆ ನುಗ್ಗಿಸಿ ನಾಲ್ಕು ದಿನ ಸಮುದ್ರತೀರ ಹೊತ್ತಿ ಉರಿಯುವಂತೆ ಮಾಡಿ ಅಲ್ಲೋಲ ಕಲ್ಲೋಲ ಸ್ರಷ್ಠಿಸಿ ನೂರಾರು ಜನರ ಸಾವಿಗೇ ಇದೇ ದಾವೂದ್ ಇಬ್ರಾಹಿಂ ಕಾರಣನಾಗಿದ್ದ!
ಮತ್ತೆ ಅದೇ ಬಾಂಬೆಯಲ್ಲೇ 2011ರಲ್ಲಿ ಮೂರು ಟೈಂ ಬಾಂಬ್ ಸೀರಿಯಲ್ ಬ್ಲಾಸ್ಟ್ ನಡೆದಿತ್ತು! ದಿಲ್ಲಿಯಲ್ಲೂ 2011ರಲ್ಲಿ ಸೀರಿಯಲ್ ಬಾಂಬ್ ಬ್ಲಾಸ್ಟ್ ನಡೆದಿತ್ತು! ಬೆಂಗಳೂರಿನಲ್ಲೂ ಸರಣಿ ಬಾಂಬ್ ಬ್ಲಾಸ್ಟ್ ನಡೆದಿತ್ತು! ಈ ಎಲ್ಲಾ ಸ್ಪೋಟಗಳ ಹಿಂದೆ ಐ.ಎಸ್.ಐ ಪ್ರೇರಿತ ಭಯೋತ್ಪಾದಕರಿದ್ದರು! ದಾವೂದ್ ಇಬ್ರಾಹಿಂ ಎಂಬ ದೇಶದ್ರೂಹಿಯ ನೆರಳಿತ್ತು! ಅಂತಹ ವಿಕ್ರತ ಕ್ರೂರಿ ಈಗ ಮತ್ತೆ ತನ್ನದೇ ತಾಯ್ ನೆಲದಲ್ಲಿ ಬಾಂಬುಗಳನ್ನು ಬಿತ್ತಿ ಸ್ಫೋಟಿಸುವ ಟಾಸ್ಕ್ ನೀಡಿ ಭಯೋತ್ಪಾದಕರನ್ನು ಭಾರತದ ಮೇಲೆ ಛೂ ಬಿಟ್ಟಿರುವುದು ಆತನ ಕೊಳೆತ ಮನಸ್ಥಿತಿ ಬದಲಾಗುತ್ತಿಲ್ಲ ಎಂಬುದನ್ನು ಮತ್ತೆ ಎತ್ತಿ ತೋರಿಸುತ್ತದೆ. ದಾವೂದ್ ಇಬ್ರಾಹಿಂ ತಮ್ಮ ಅನೀಸ್ ಇಬ್ರಾಹಿಂಗೆ ನಿಕಟವಾಗಿರುವ ಭೂಗತ ಜಗತ್ತಿನ ಸಮೀರ್ ಎಂಬಾತ ಈ ‘ಅಟ್ಯಾಕ್ ಟಾರ್ಗೆಟ್ ಇಂಡಿಯಾ!’ ಹಿಂದಿರುವ ಕಾಣದ ಕೈ ಎಂಬುದು ಸದ್ಯಕ್ಕೆ ಗೊತ್ತಾಗಿದೆ! ದೇಶದ ವಿವಿಧ ರಾಜ್ಯಗಳಲ್ಲಿ ಸರಣಿ ವಿಧ್ವಂಸಕ ಹಿಂಸೆಯನ್ನು ಸ್ರಷ್ಠಿಸಲು ಸಂಚು ರೂಪಿಸಿದ್ದ ಬಂದಿತ ಆರುಜನ ಉಗ್ರಗಾಮಿಗಳಿಗೆ ಪಾಕಿಸ್ತಾನ ಇನ್ನು ಯಾವ ರೀತಿಯ ಪ್ಲಾನ್ ಗಳನ್ನು ನೀಡಿತ್ತು ಎಂಬುದರ ಬಗ್ಗೆ, ಈ ಸಂಚಿನ ಹಿಂದೆ ಇನ್ನೂ ಯಾರ್ಯಾರ ಸಹಾಯ ಹಸ್ತಗಳು ಇವೆಯೆಂಬುದನ್ನು ದೆಹಲಿಯ ವೀಶೇಷ ಪೊಲೀಸ್ ಆಯುಕ್ತರಾದ ನೀರಜ್ ಠಾಕೂರ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಭಾರತದಲ್ಲಿ ಬಚ್ಚಿಟ್ಟುಕೊಂಡಿರುವ ಉಗ್ರರಿಗೆ ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿರುವ ಕೆಲಸವನ್ನು ಇದೇ ಬಂದಿತ ಉಗ್ರರಿಗೆ ನೀಡಲಾಗಿತ್ತೇ ಎಂಬ ಅಂಶದ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ. ಈ ಎಲ್ಲಾ ದುಷ್ಕೃತ್ಯಗಳಿಗೂ ಬೆಂಗಾವಲಾಗಿ ಹಣಕಾಸಿನ ನೆರವನ್ನು ನೀಡುತ್ತಾ, ಫಂಡಿಂಗ್ ಮಾಡುತ್ತಾ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿರುವ ದೇಶದ್ರೋಹಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಇದೇ ಭಾರತದ ನೆಲದಲ್ಲಿ ಹುಟ್ಟಿ, ಅನ್ನತಿಂದು, ಇಲ್ಲಿನ ನೀರು ಕುಡಿದು, ಗಾಳಿ ಸೇವಿಸಿ ಬೆಳೆದು ದೊಡ್ಡವನಾಗಿ ಇದೇ ಭಾರತದ ನೆಲವಾದ ಬಾಂಬೆಯಲ್ಲಿ ಕುಳಿತು ಅಂಡರ್ ವರ್ಲ್ಡ್ ಡಾನ್ ಆಗಿ ಮೆರೆದು ಕೋಟ್ಯಂತರ ರೂಪಾಯಿ ಹಣ ಸಂಪಾದಿಸಿಕೊಂಡು ದೇಶ ತೊರೆದು ಹೋಗಿ ತಲೆಮರೆಸಿಕೊಂಡು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಏಜೆಂಟ್ ನಂತೆ ವರ್ತಿಸುತ್ತ ಭಾರತದಲ್ಲಿ ಸರಣಿ ಬಾಂಬ್ ಬ್ಲಾಸ್ಟ್ ನಡೆಸುತ್ತಾ ಭಯೋತ್ಪಾದನೆಗೆ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಾ ಭಾರತೀಯರ ನಿದ್ರೆ ಕೆಡಿಸುತ್ತಲೇ ಬರುತ್ತಿದ್ದಾನೆ! ಮುಸ್ಲಿಂ ಭಯೋತ್ಪಾದಕ ಸಂಘಟನೆಗಳಿಗೆ ಹಣಕಾಸಿನ ನೆರವನ್ನು ನೀಡುತ್ತಾ, ಭಾರತದಲ್ಲಿ ಭಯೋತ್ಪಾದಕರು ಒಳಗೊಳಗೇ ಹೆಚ್ಚಾಗವಂತೆ ಮಾಡೀ ಅನ್ನ ತಿಂದ ಮನೆಗೆ ಕನ್ನಬಗೆಯುತ್ತಿರುವ , ಹೆತ್ತ ತಾಯಿಗೆ ದ್ರೋಹಬಗೆದು ದೇಶದ್ರೋಹಿ ದಾವೂದ್ ಎನಿಸಿಕೊಂಡಿರುವ ಈ ಇಬ್ರಾಹಿಮ್ಮನ ಕಳ್ಳಾಟ ಇಂದು ನೆನ್ನೆಯದಲ್ಲ.
ಪಾಕಿಸ್ತಾನದ ಕರಾಚಿಯಲ್ಲಿ ಕುಳಿತು ಇಲ್ಲಿ ಬಾಂಬೆಯಲ್ಲಿ ತನ್ನ ಅಂಡರ್ ವರ್ಲ್ಡ್ ಸಾಮ್ರಾಜ್ಯ ಸ್ಥಾಪಿಸಿಕೊಂಡು ಹವಾಲಾ ಜೊತೆಗೆ ಹಲವಾರು ದಂಧೆಗಳ ಕಿಂಗ್ ಪಿನ್ ಆಗಿರುವುದು ಸುಳ್ಳಲ್ಲ. ತನ್ನ ಸುಫಾರಿ ಕಿಲ್ಲರ್ ಗಳ ಮೂಲಕ ಬಾಂಬೆಯ ದೊಡ್ಡ ದೊಡ್ಡ ಬಿಸಿನೆಸ್ ಮ್ಯಾನ್ ಗಳು, ಬಿಲ್ಡರ್ ಗಳು, ಬಾಲಿವುಡ್ ಸಿನಿಮಾ ರಂಗದಲ್ಲಿ ಹಫ್ತಾ ವಸೂಲಿ ಮಾಡುತ್ತಾ ತನ್ನದೆ ಹವಾ ಮೇಂಟೇನ್ ಮಾಡುತ್ತಾ, ಮಾತು ಕೇಳದವರನ್ನು ಶೂಟರ್ ಗಳಿಂದ ಮುಗಿಸುತ್ತಾ, ಭಯ ಹುಟ್ಟುಹಾಕುತ್ತಾ, ತನ್ನದೇ ವಿಕ್ಷಿಪ್ತ ಭೂಗತ ಲೋಕ ಕಟ್ಟಿಕೊಂಡು ಮೆರೆಯುತ್ತಿರುವ ಈಗಲೂ ಮುಂಬೈನ ಅಂಡರ್ ವರ್ಲ್ಡ್ ನ ಹಿಡಿತ ಹೊಂದಿರುವ ದಾವೂದ್ ಇಬ್ರಾಹಿಂನ ಅಟ್ಟಹಾಸಕ್ಕೆ ಪಾಪಿ ಪಾಕಿಸ್ತಾನವೇ ಖುದ್ದು ಬೆನ್ನಿಗೆ ನಿಂತು ಸಾತ್ ನೀಡುತ್ತಿದೆ! ಸುಳ್ಳು ಶಾಂತಿ ಮಂತ್ರ ಹೇಳುತ್ತಲೇ ಈಗಾಗಲೇ ಕಾಶ್ಮೀರದ ಕಣಿವೆಯಲ್ಲಿ ಪ್ರತಿದಿನವೂ ಒಂದಿಲ್ಲೊಂದು ಕಾರಣಕ್ಕೆ ಪಾಕಿಸ್ತಾನವು ಭಯೋತ್ಪಾದಕರ ಮೂಲಕ ಕ್ಯಾತೆ ತೆಗೆದು, ಕಾಲುಕೆರೆದೂ, ಆಕ್ರಮಣ, ಚಕಮಕಿ ನಡೆಸುತ್ತಲೇ ಭಾರತ ದೇಶಕ್ಕೆ ನಿತ್ಯ ಕಿರುಕುಳ ನೀಡುತ್ತಾ ರಕ್ಷಣಾ ವ್ಯವಸ್ಥೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ದೇಶದ ಗಡಿಯುದ್ದಕ್ಕೂ ಉಗ್ರಗಾಮಿ ಸಂಘಟನೆಗೆ ಶಿಬಿರಗಳನ್ನು ನಿರ್ಮಾಣ ಮಾಡಿ ಕೊಟ್ಟು ಡ್ರೋನ್ ಮೂಲಕ ಭಾರತದ ಒಳಗಿರುವ ಭಯೋತ್ಪಾದಕರಿಗೆ ಸ್ಪೋಟಕ, ಶಶ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿರುವ ಪಾಕಿಸ್ತಾನವು ಕಾಶ್ಮೀರದ ಕಣಿವೆಯ ಜನರನ್ನು ಪ್ರಚೋದಿಸಿ ಭಾರತದ ಸೈನಿಕರ ಮೇಲೆ ಎತ್ತಿ ಕಟ್ಟಿ ಅಲ್ಲಿ ನಿತ್ಯ ಸಿವಿಲ್ ವಾರ್ ನಡೆದು ಅಶಾಂತಿ ಉಂಟಾಗಲು ಕಾರಣವಾಗಿದೆ. ಹೇಗಾದರೂ ಮಾಡಿ ಜಮ್ಮು ಕಾಶ್ಮೀರವನ್ನು ಕೈವಶ ಮಾಡಿಕೊಳ್ಳಲೇ ಬೇಕೆಂದು ಸ್ವಾತಂತ್ರ್ಯ ಬಂದಾಗಿನಿಂದಲೂ ಹವಣಿಸುತ್ತಿರುವ ಪಾಕಿಸ್ತಾನ ಅದಕ್ಕಾಗಿ ಚೀನಾ ದೇಶದ ಸಹಾಯವನ್ನು ಪಡೆದುಕೊಳ್ಳುತ್ತಿದೆ. ಈಗ ಇವರ ಜೊತೆಗೆ ತಾಲಿಬಾನ್ ಉಗ್ರರೂ ಸೆರಿಕೊಂಡಿರುವುದರಿಂದ ಪಾಕಿಸ್ತಾನಕ್ಕೀಗ ಎರಡು ಕೊಂಬು ಬಂದಂತಾಗಿರುವುದರಿಂದ, ಆಫ್ಘಾನಿಸ್ತಾನದದಲ್ಲಿ ತಾಲಿಬಾನ್ ಭಯೋತ್ಪಾದಕರು ಅಧಿಕಾರ ಹಿಡಿಯುತ್ತಿದ್ದಂತೆಯೇ ಇಲ್ಲಿ ಕಾಶ್ಮೀರ ಕಣಿವೆಯಲ್ಲಿ ಮತ್ತಷ್ಟು ಉಗ್ರ ಚಟುವಟಿಕೆಗಳು ಗರಿಗೆದರಿದ್ದು ನೂರಾರು ಕಾಶ್ಮೀರಿ ಮುಸ್ಲಿಂ ಜನಾಂಗದ ಯುವಕರು ನಾಪತ್ತೆ ಯಾಗಿ ಉಗ್ರರ ರೆಕ್ರೂಟ್ಮೆಂಟ್ ಸೇರಿಕೊಂಡು ಗನ್ ಗ್ರೆನೇಡ್ ಕೈಯಲ್ಲಿ ಹಿಡಿದು ಆತ್ಮಾಹುತಿ ಬಾಂಬರ್ ಗಳಾಗಿ ತಯಾರಾಗುತ್ತಿರುವುದು ಆತಂಕದ ಸುದ್ದಿ ಯಾಗಿರುವ ಹೊತ್ತಲ್ಲೇ ಭಾರತ ದೇಶವನ್ನೆ ಟಾರ್ಗೆಟ್ ಮಾಡಿಕೊಂಡು ಸಂಘಟಿತರಾಗಿ ಸಂಚು ರೂಪಿಸಿ ರಾಜ್ಯದ ವಿವಿಧ ನಗರಗಳಲ್ಲಿ ಹಬ್ಬ ಸಂಭ್ರಮಾಚರಣೆಯೊಳಗೆ ಜನರಿರುವೆಡೆ ಬಾಂಬುಗಳನ್ನು ಬಿತ್ತಿ ಸ್ಫೋಟಿಸುವ ಭಯಾನಕವಾದ ದುಷ್ಕೃತ್ಯದ ಅಮಾನುಷ ಟಾಸ್ಕ್ ಅನ್ನು ಪಾಪಿ ಪಾಕಿಸ್ತಾನ ರೂಪಿಸಿರುವುದು ಆತಂಕದ ವಿಷಯವಾಗಿದೆ. ದಿನನಿತ್ಯ ನಮ್ಮ ಭಾರತೀಯ ಸೈನಿಕರು ಗಡಿಯಾಚೆ ಮತ್ತು ದೇಶದೊಳಗೆ ಈ ಕ್ರೂರ ಧಾರ್ಮಿಕ ಭಯೋತ್ಪಾದಕರ ವಿರುದ್ಧ ಸಮರ ಸಾರಿ ಪ್ರಾಣದ ಹಂಗು ತೊರೆದು ಬಡಿದಾಡುತ್ತಲೇ ಇದ್ದಾರೆ. ಪ್ರತಿ ವರ್ಷದ ಆಗಸ್ಟ್ ತಿಂಗಳಲ್ಲಿ ಏನಾದರೂ ಒಂದು ದೊಡ್ಡ ಮಟ್ಟದ ದುಷ್ಕೃತ್ಯ ನಡೆಸಲು ಉಗ್ರಗಾಮಿಗಳನ್ನು ದೇಶದೊಳಕ್ಕೆ ನುಗ್ಗಿಸಿ ಸಂಚು ನಡೆಸುವ ಪಾಕೀಸ್ತಾನದ ಕೊಳಕು ಮನಸ್ಥಿತಿಯ ಬಗ್ಗೆ ಎಚ್ಚರಿಕೆಯಿಂದಲೇ ಇರುವ ನಮ್ಮ ಪೊಲೀಸರು, ಸೈನಿಕರು ಒಳ ನುಸುಳಲು ಯತ್ನಿಸುತ್ತಿರುವ ಭಯೋತ್ಪಾದಕರನ್ನು ಬಂದಿಸುತ್ತಲೆ ಇದ್ದಾರೆ. 2020 ನವೆಂಬರ್ 18 ರಲ್ಲಿ ಜೈಷ್ ಈ ಮೊಹಮ್ಮದ್ ಉಗ್ರ ಸಂಘಟನೆಯ ಇಬ್ಬರನ್ನು ಬಂಧಿಸಲಾಗಿತ್ತು.2020ರ ಡಿಸೆಂಬರ್ 7ರಂದು ಐವರು ಭಯೋತ್ಪಾದಕರನ್ನು ಗಡಿಯಲ್ಲಿ ಬಂಧಿಸಿ ಜೈಲಿಗಟ್ಟಲಾಗಿದೆ. 2020ರ ಆಗಸ್ಟ್ 23ರಲ್ಲಿ ಎರಡು ಆತ್ಮಹತ್ಯಾ ಬಾಂಬ್ ಡಿವೈಸ್ ಜೊತೆಗೆ ಐಸಿಸ್ ಉಗ್ರಗಾಮಿ ಸಂಘಟನೆಯ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿತ್ತು.2021ರ ಆಗಸ್ಟ್ 15,ರಲ್ಲಿ ನಾಲ್ಕು ಜನ ಜೈಷ್ ಈ ಮೊಹ್ಮದ್ ಉಗ್ರಗಾಮಿಗಳನ್ನು ಎರಡು ಚೈನೀಸ್ ಹ್ಯಾಂಡ್ ಗ್ರೆನೇಡ್ ಜೊತೆ ಸೆರೆಹಿಡಿಯಲಾಗಿದೆ
. 2020ರ ಜೂನ್ 27ರಲ್ಲಿ ಖಲಿಸ್ತಾನ್ ಲಿಬರೇಷನ್ ಫೋರ್ಸ್ ನ ಮೂರುಜನ ಉಗ್ರಗಾಮಿಗಳನ್ನು ಬಂದಿಸಲಾಗಿದೆ. ಕಳೆದ ಆಗಸ್ಟ್ ಹದಿನಾಲ್ಕು ರಂದು ಏಕೆ 47ಗನ್ ಗ್ರೆನೇಡ್ ನೊಂದಿಗೆ ಹಿಜ್ಬುಲ್ ಮುಜಾಹಿದ್ದೀನ್ ಉಗ್ರನೊಬ್ಬನನ್ನು ಜಮ್ಮು ಕಾಶ್ಮೀರದ ಅರಣ್ಯ ಪ್ರದೇಶದ ಕುಲ್ನಾ ಕಾಡಿನಲ್ಲಿ ಬಂಧಿಸಲಾಗಿತ್ತು. ಇಷ್ಟೆಲ್ಲಾ ಚುರುಕಾಗಿ ಕೆಲಸ ಮಾಡುತ್ತಾ ಗಡಿಕಾಯುತಿದ್ದರೂ ಭಯೋತ್ಪಾದಕರು ಮೋಸದಿಂದ ದೇಶದೊಳಗೆ ನುಸುಳಿ 2019ರಲ್ಲಿ ಪುಲ್ವಾಮಾ ಅಟ್ಯಾಕ್ ನಡೆಸಿ ನೂರಾರು ಮಂದಿ ನಮ್ಮ ಸೈನಿಕರರನ್ನು ಕೊಂದಿದ್ದಾರೆ. ಕಾರ್ಗಿಲ್ ಕದನ ನಡೆಸಿ ಸೋತಿದ್ದಾರೆ. 2001ರಲ್ಲಿ ಪಾರ್ಲಿಮೆಂಟ್ ಹೌಸ್ ಅಟ್ಯಾಕ್ ಆಗಿದೆ. 2016ರಲ್ಲಿ ಪಟಾನ್ ಕೋಟ್ ದಾಳಿಯಾಗಿದೆ. ಕಾಶ್ಮೀರದ ಜೈಲಿನಲ್ಲೇ ಹಿಡಿದಿಟ್ಟಿದ್ದ ಜೈಷ್ ಈ ಮೊಹ್ಮದ್ ಸಂಸ್ಥಾಪಕ ಉಗ್ರ ಮೌಲಾನಾ ಮಸೂದ್ ಅಜರ್ ನನ್ನು 1999ರ ಕಂದಹಾರ್ ವಿಮಾನ ಹೈಜಾಕ್ ಕಾರಣದಿಂದ ಬಿಡುಗಡೆಗೊಳಿಸಿದ್ದಕ್ಕೆ ಇಷ್ಟೆಲ್ಲಾ ದಾಳಿ ಮಾಡಿಸಿದ! ಈಗ ಇದೇ ಉಗ್ರ ಮೌಲಾನಾ ಆಫ್ಘಾನಿಸ್ತಾನದದಲ್ಲಿ ತಾಲಿಬಾನಿ ಟೆರರಿಸ್ಟ್ ಗಳ ಜೊತೆಗೆ ಸೇರಿಕೊಂಡು ಕಾಶ್ಮಿರ ನಮ್ಮದು ಎಂದು ಗುಟುರು ಹಾಕುತ್ತಿದ್ದಾನೆ! ಇತ್ತ ಪಾಕಿಸ್ತಾನ ಭಾರತದೊಳಗೆ ಉಗ್ರಗಾಮಿ ಗಳನ್ನು ನುಗ್ಗಿಸಿ ಕುಕ್ಕರ್, ಕಾರ್, ಬೈಕು ಗಳಲ್ಲಿ ಬಾಂಬು ಬಿತ್ತುವ ಟಾಸ್ಕ್ ಕೊಟ್ಟು, ಭೂಗತ ಜಗತ್ತಿನ ಡಾನ್ ಗಳನ್ನು ಬಳಸಿಕೊಂಡು ಭಾರತವನ್ನು ಟಾರ್ಗೆಟ್ ಮಾಡಿಕೊಂಡು, ಭಯಾನಕ ವಿಧ್ವಂಸಕ ಸ್ಫೂಟಕ ನಡೆಸುವ ಕುತಂತ್ರವನ್ನು ಸಾಕಾರಗೊಳಿಸಲು ಹಗಲು ರಾತ್ರಿ ನಿದ್ದೆಗೆಟ್ಟು ಕಸರತ್ತು ನಡೆಸುತ್ತಿದ್ದಾರೆ. ನಮ್ಮ ರಾಜ್ಯಗಳ ಪೊಲೀಸರು ಎಚ್ಚರ ವಹಿಸಿ, ಮೈಯೆಲ್ಲಾ ಕಣ್ಣಾಗಿಸಿಕೊಂಡು ಕಾವಲು ಕಾಯಲೇಬೇಕಿದೆ.
ಇದುವರೆಗೂ ನಮ್ಮ ದೇಶದಲ್ಲಿ ಉಗ್ರರಿಂದ 12ಸಾವಿರ ಅಟ್ಯಾಕ್ ಗಳಾಗಿದ್ದು 20ಸಾವಿರ ಜನರು ಸಾವನ್ನಪ್ಪಿದ್ದಾರೆ! 30ಸಾವಿರ ಮಂದಿ ಗಾಯಗೊಂಡಿದ್ದಾರೆ! ಆದ ಕಾರಣ ಈಗಲಾದರೂ ದೇಶದ್ರೋಹಿ ದಾವೂದ್ ಇಬ್ರಾಹಿಂ ನ ಭೂಗತ ಸಾಮ್ರಾಜ್ಯವನ್ನು ಪುಡಿಗುಟ್ಟುವ ಕಡೆ ಕೇಂದ್ರ ಸರ್ಕಾರ ಹೆಜ್ಜೆ ಇಡಲೇಬೇಕಿದೆ. ಇಲ್ಲದಿದ್ದರೇ ಇಂಡಿಯಾದಲ್ಲಿ ಸೀರಿಯಲ್ ಬ್ಲಾಸ್ಟ್ ನ ಇತಿಹಾಸ ಮರುಕಳಿಸಿ ಸಾವಿರಾರು ಜನರ ಸಾವು-ನೋವಿಗೆ ಕಾರಣವಾಗುತ್ತದೆ ಎಚ್ಚರ.