ಚಿತ್ರದುರ್ಗ,ಮೇ,01-:ತಾಲೂಕಿನ ಕಾತ್ರಾಳ್ ಗ್ರಾಮದ ಬಳಿ ಗುರುವಾರ ಬೆಳಗ್ಗೆ ರಸ್ತೆ ವಿಭಜಕಕ್ಕೆ ಇನೋವ ಕಾರು ಡಿಕ್ಕಿಯಾಗಿ ಮೂವರು ಮೃಪತಟ್ಟಿದ್ದು, ನಾಲ್ವರು ಮಂದಿ ಗಾಯಗೊಂಡಿದ್ದಾರೆ
ಮಿಳುನಾಡು ಮೂಲದ ಅರ್ಜುನ್ (೨೮), ಶರವಣ (೩೧), ಸೇಂಥಿಲ್ (೨೯) ಮೃತ ದುರ್ದೈವಿಗಳು. ಡಿಕ್ಕಿಯ ರಭಸಕ್ಕೆ ಸ್ಥಳದಲ್ಲೇ ಓರ್ವ, ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರಲ್ಲಿ ಅರ್ಜುನ್ ಎಂಬ ವ್ಯಕ್ತಿಯು ತಮೀಳುನಾಡಿನ ಚನ್ನೆöÊನಲ್ಲಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಸಲ್ಮಾನ್, ನವೀನ್, ಗೋಕುಲ್ ಸೆಂಥಿಲ್ ಕುಮಾರ್, ರಮೇಶ್, ಗೌತಮ್ ಗಾಯಗೊಂಡವರು. ಎಂದು ತಿಳಿದು ಬಂದಿದೆ. ಇವರೆಲ್ಲರೂ ತಮಿಳುನಾಡಿನ ಕೃಷ್ಣಗಿರಿ ಮೂಲದವರಾಗಿದ್ದು,ಪ್ರವಾಸಕ್ಕೆಂದು ಗೋವಾಕ್ಕೆ ತೆರಳುತ್ತಿದ್ದಾಗ ಕಾತ್ರಾಳ್ ಬಳಿ ಟೈರ್ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದರಿಂದ ದುರ್ಘಟನೆ ನಡೆದಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.