ಗಗನಕ್ಕೆರುತ್ತಿರುವ ಬಿಟ್ ಕಾಯಿನ್ ಗೆ ಭಾರತದಲ್ಲೇಕೆ ಭಾರೀ ಬೇಡಿಕೆ?

Share

ಗಗನಕ್ಕೆರುತ್ತಿರುವ ಬಿಟ್ ಕಾಯಿನ್ ಗೆ ಭಾರತದಲ್ಲೇಕೆ ಭಾರೀ ಬೇಡಿಕೆ?

Writing-ಪರಶಿವ ಧನಗೂರು

ಈಗ ಜಗತ್ತಿನ ಎಲ್ಲೆಡೆ ಕ್ರಿಪ್ಟೋಕರೆನ್ಸಿ ಯದೇ ಟ್ರೆಂಡ್! ವಿಶ್ವ ದ ಅತ್ಯಂತ ದುಬಾರಿ ಡಿಜಿಟಲ್ ಮನಿ ಬಿಟ್ ಕಾಯಿನ್ ಮತ್ತು ಇಥೇರಿಯಂ ಮೇಲೆ ದಿನದಿಂದ ದಿನಕ್ಕೆ ಜನರ ಹೂಡಿಕೆ ತಾರಕ್ಕಕ್ಕೇರುತ್ತಿದೆ! ಕಳೆದ ಏಳು ದಿನಗಳಲ್ಲಿ ಶೇಕಡಾ 32% ಬೆಲೆ ಹೆಚ್ಚಳ ಕಂಡಿರುವ ಬಿಟ್ ಕಾಯಿನ್ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟ್ರೆಂಡಿಂಗ್ ನಲ್ಲಿದೆ. ಚುನಾಯಿತ ಸರ್ಕಾರಗಳಿಗೇ ಚುರುಕು ಮುಟ್ಟಿಸಿ ಸವಾಲು ಒಡ್ಡುತ್ತಿರುವ ಈ ಖಾಸಗಿ ಕಾಸು ಬಿಟ್ ಕಾಯಿನ್(ಬಿಟಿಸಿ) ಒಂದಕ್ಕೆ ಈಗ 55ಸಾವಿರ ಡಾಲರ್ ಬೆಲೆಯಿದೆ! ಕ್ರಿಪ್ಟೋ ಎಕ್ಸ್ ಚೇಂಜ್ ಕ್ರಾಂಕನ್ ಪ್ರಕಾರ ಅಕ್ಟೋಬರ್ ಆರಂಭದಿಂದಲೂ ಬಿಟ್ ಕಾಯಿನ್ ಟ್ರೆಂಡಿಂಗ್ ಇಥೆರ್ ಗಿಂತಲೂ ಮೂರನೇ ಎರಡರಷ್ಟು ದೊಡ್ಡದಾಗೇ ಇದೆಯಂತೇ! ಇತರ ಕ್ರಿಪ್ಟೋಕರೆನ್ಸಿ ಗಳಾದ ಇಥೇರಿಯಂ, ಬಿನಾನ್ಸ್ ಕಾಯಿನ್ ,ಟಿಥರ್,ಕಾರ್ಡಾನೊ,ಪ್ಯೊಲ್ಯೂಡಾಟ್, ಎಕ್ಸ್ ಆರ್.ಪಿ. ಚೈನ್ ಲಿಂಕ್, ಲೈಟ್ ಕಾಯಿನ್,ಸೆಲ್ಲಾರ್, ಆಲ್ಟ್ ಕಾಯಿನ್, ಡಾಗೀ ಕಾಯಿನ್,ಡೋಚೋ ಕಾಯಿನ್ ಮುಂತಾದವು ಬೆಲೆಯಲ್ಲಿ ಏರಿಳಿತ ಕಂಡಿವೆ.

ಪ್ರತಿನಿತ್ಯ ಬೆಲೆಯ ಏರಿಳಿತದ ಅರಿವಿದ್ದರೂ, ಜಗತ್ತಿನ ಐದು ಪ್ರಮುಖ ರಾಷ್ಟ್ರಗಳು ಈ ಬಿಟ್ ಕಾಯಿನ್, ಇಥೆರಿಯಂ ರೀತಿಯ ಡಿಜಿಟಲ್ ಇ-ಕರೆನ್ಷಿಗಳನ್ನು ಸಂಪೂರ್ಣವಾಗಿ ನಿಶೇಧಿಸಿದ್ದರೂ, ಜನರ ಬಿಟ್ ಕಾಯಿನ್ ಮೋಹ ನಿಂತಿಲ್ಲ! ಚೀನಾ, ಬೊಲಿವಿಯಾ, ಟರ್ಕಿ, ಇಂಡೋನೇಷ್ಯಾ ಮತ್ತು ಈಜಿಪ್ಟ್ ದೇಶಗಳು ಅಧಿಕ್ರತವಾಗಿ ಈ ಬಿಟ್ ಕಾಯಿನ್ ನಂತಹ ಡಿಜಿಟಲ್ ಕ್ರಿಪ್ಟೋಕರೆನ್ಸಿಯನ್ನು ನಿಷೇಧಿಸಿವೆ! ಈ ಮೇಲ್ಕಂಡ ಎಲ್ಲಾ ಐದು ದೇಶಗಳಲ್ಲೂ ಕ್ರಿಪ್ಟೋಕರೆನ್ಸಿಗಳ ಪ್ರಚಾರ-ವ್ಯಾಪಾರಕ್ಕೆ ಸಂಬಂಧಿಸಿದಂತೆ ಹೊಸ ನೀತಿ ನಿಯಮ ನಿಬಂಧನೆಗಳನ್ನು ಜಾರಿಮಾಡಿ ಡಿಜಿಟಲ್ ಟೋಕನ್ ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹಾಗೆಯೇ ಇವುಗಳನ್ನು ಅಕ್ರಮವಾಗಿ ಬಳಸುವುದು ಕಾನೂನು ಬಾಹಿರವೆಂದು ಘೋಷಿಸಿರುವ ಐದು ರಾಷ್ಟ್ರಗಳು ಕ್ರಿಪ್ಟೋಕರೆನ್ಸಿಗಳ ವಿಷಯದಲ್ಲಿ ಕಠಿಣ ನಿಲುವು ತಾಳಿವೆ. ಚೀನಾ ಅಧ್ಯಕ್ಷ ಜೀನ್ ಪಿಂಗ್ ನೇತೃತ್ವದಲ್ಲಿ ಸರ್ಕಾರವಂತೂ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ ಧಮನಕ್ಕಾಗಿ ತಮ್ಮದೇ ಕೇಂದ್ರೀಕೃತ ಡಿಜಿಟಲ್ (ರೆನ್ ಮಿನ್ ಬಿ) ಕರೆನ್ಸಿಯನ್ನು ಚಾಲ್ತಿಗೆ ತಂದಿದೆ! ಈಜಿಪ್ಟ್ ಸರ್ಕಾರವಂತೂ ಈ ಕ್ರಿಪ್ಟೋಕರೆನ್ಸಿ ವ್ಯಾಪಾರ-ವ್ಯವಹಾರವನ್ನು ತಮ್ಮ ಮುಸ್ಲಿಂ ಶರಿಯಾ ಕಿನೂನಿನಡಿ ‘ಹರಾಮ್’ ಎಂದು ಘೋಷಿಸಿ ಕಟ್ಟು ನಿಟ್ಟಾಗಿ ನಿರ್ಭಂಧಿಸಿದೆ! ಕ್ರಿಪ್ಟೋ ಕರೆನ್ಸಿಗೆ ಕಾನೂನು ಮಾನ್ಯತೆ ನೀಡಿದ್ದ ಜಗತ್ತಿನ ಮೂದಲ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಎಲ್ ಸಾಲ್ವೆಡಾರ್ ಎಂಬ ದೇಶದಲ್ಲಿ ಈಗ ಇದ್ದಕ್ಕಿದ್ದಂತೆ ಬಿಟ್ ಕಾಯಿನ್ ವಿರುದ್ಧ ಜನ ಬೀದಿಗೆ ತಂದು ಬಂಡೆದ್ದು ಪ್ರತಿಭಟನೆ ನಡೆಸುತ್ತಿದ್ದಾರೆ! ಪ್ರತಿಭಟನಾಕಾರರು ಈ ಕ್ರಿಪ್ಟೋಕರೆನ್ಸಿಯು ಬೆಡ್ ಲ್ಯಾಟಿನ್ ಅಮೆರಿಕ ದೇಶವಾದ ಎಲ್ ಸಾಲ್ವೆಡಾರ್ ನಲ್ಲಿ ಹಣದುಬ್ಬರ ಹೆಚ್ಚಿಸಿ ಆರ್ಥಿಕ ಅಸ್ಥಿರತೆ ತಂದೊಡ್ಡಲಿದೆಯೆಂದು ಕಳವಳ ವ್ಯಕ್ತಪಡಿಸಿದ್ದಾರೆ! ಕೆಲ ಪ್ರತಿಭಟನಾ ಕಾರರಂತೂ ಬಿಟ್ ಕಾಯಿನ್ ಯಂತ್ರಕ್ಕೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾ ನಿರತರ ಕೈಯಲ್ಲಿ ‘ಬಿಟ್ ಕಾಯಿನ್ ಬೇಡ!’ ಎಂಬ ನಾಮಫಲಕಗಳು ರಾರಾಜಿಸಿವೆ.

 

ಕಣ್ಣಿಗೆ ಕಾಣದೇ ಇಷ್ಟು ಕ್ರೇಜ್ ಹುಟ್ಟಿಸಿರುವ ಈ ಹೊಸ ಡಿಜಿಟಲ್ ಯುಗದ ಪೇಪರ್ ಲೆಸ್ ಪೇಮೆಂಟ್ ಡಿಜಿಟಲ್ ಮನೀ ಬಿಟ್ ಕಾಯಿನ್ ಬಗ್ಗೆ ಜಗತ್ತಿನೆಲ್ಲೆಡೆ ಈ ರೀತಿಯ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಭಾರತದಲ್ಲೂ ಈ ಬಿಟ್ ಕಾಯಿನ್ ವ್ಯಾಪಾರ ವಹಿವಾಟು ಭರ್ಜರಿಯಾಗಿಯೇ ನಡೆಯುತ್ತಿದೆ. ಮಧ್ಯಮ ವರ್ಗದ ಜನರು, ಶ್ರೀಮಂತರು, ಬಡವರೆನ್ನದೇ ಎಲ್ಲರೂ ದಿಡೀರ್ ಶ್ರೀಮಂತರಾಗುವ ಆಸೆಯಿಂದ ರೇಸಿನ ಕುದುರೆಯ ಬಾಲಕ್ಕೆ ದುಡ್ಡು ಕಟ್ಟಿ ಜೂಜು ಆಡುವಂತೆ ತಮ್ಮ ಬಳಿ ಇದ್ದ ಹಣ, ಒಡವೆ ಮಾರೀ ಈ ಬಿಟ್ ಕಾಯಿನ್ ಗೆ ಹಣ ಹೂಡುತ್ತಿದ್ದಾರೆ! ಕೆಲವರಂತೂ ಸಾಲ ಮಾಡೀ ಕ್ರಿಪ್ಟೋ ಕರೆನ್ಸಿ ಕೊಂಡು ಕೊಂಡು ಬೀಗುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಇದೇ ಬಿಟ್ ಕಾಯಿನ್ ಜಗತ್ತಿನಾದ್ಯಂತ ಅಕ್ರಮ ಕಾನೂನು ಬಾಹಿರ ಎನಿಸಿಕೊಂಡಿತ್ತು! ಡಾರ್ಕ್ ನೆಟ್ ಕಳ್ಳರ, ಹವಾಲ ದಂಧೆಕೋರರ, ಕಿಡ್ನಾಪರ್ ಗಳ, ಮಾದಕವಸ್ತು ಅಕ್ರಮ ಸರಬರಾಜು ದಾರರ, ಭಯೋತ್ಪಾದಕರ ಸಂವಹನದ ಕೊಂಡಿಯಾಗಿದ್ದ ಇದೇ ಬಿಟ್ ಕಾಯಿನ್ ಈಗ ಜಗತ್ತಿನ ಹಾಟ್ ಫೇವರೇಟ್ ಬಿಸಿನೆಸ್ ಕನೆಕ್ಷನ್! ಬಿಟ್ ಕಾಯಿನ್ ವ್ಯವಹಾರ ಅದೊಂದು ದಂಧೆ, ಕಾನೂನು ಬಾಹಿರ ಚಟುವಟಿಕೆ ಮಾಡುವವರು ಬಳಸುವ ಹವಾಲಾ ಮನೀ ಎಂದು ಮೂಗು ಮುರಿಯುತ್ತಾ ಮಡಿವಂತಿಕೆ ಪ್ರದರ್ಶಿಸುತ್ತಾ ಇದ್ದವರೆಲ್ಲಾ ಈಗ ಅದೇ ಮೂಗಿನ ಮೇಲೆ ಬೆರಳಿಟ್ಟು ಕೊಂಡು ತಾವೂ ಬಿಟ್ ಕಾಯಿನ್ ಕೊಳ್ಳಲು ಕ್ಯೂ ನಲ್ಲಿ ನಿಂತಿದ್ದಾರೆ! ಹೇಗಿದೆ ನೋಡಿ ಈ ಬಿಟ್ ಕಾಯಿನ್ ಮಾಯೆ! ಕಾಲಾಯಾ ತಸ್ಮೈನಮಹ..ಈಗ ನಮ್ಮ ಭಾರತದ ಸರ್ಕಾರವೂ ಈ ಬಿಟ್ ಕಾಯಿನ್ ಕ್ರಿಪ್ಟೋ ಕರೆನ್ಸಿಗಳ ಬಗ್ಗೆ ಮ್ರದುಧೋರಣೆ ತಳೆದಿದ್ದು ಸದ್ಯಕ್ಕೆ ಇಲ್ಲಿ ನಮ್ಮ ದೇಶದಲ್ಲಿ ಬಿಟ್ ಕಾಯಿನ್ ಗೆ ಯಾವುದೇ ಕ್ರಿಪ್ಟೋಕರೆನ್ಸಿಗಳಿಗೇ ನಿಶೇಧವೇನೂ ಹೇರಿಲ್ಲವಾದ್ದರಿಂದ ನಗರಗಳಲ್ಲಿ ಇತ್ತೀಚೆಗೆ ಬಿಟ್ ಕಾಯಿನ್ ಬ್ರೋಕರ್ ಗಳು, ಏಜೆಂಟರು ಫೀಲ್ಡಿಗಿಳಿದಿದ್ದಾರೆ. ಕ್ರಿಪ್ಟೋ ಕರೆನ್ಸಿ ಎಕ್ಸ್ ಚೇಂಜ್ ಕಂಪನಿಗಳು, ಸಣ್ಣಪುಟ್ಟ ಶಾಖೆ ತೆರೆದು ಬಹಿರಂಗವಾಗಿಯೇ ಬಿಟ್ ಕಾಯಿನ್ ಮಾರಲು ಅಂಗಡಿ ತೆರೆಯಲು ಸಜ್ಜಾಗಿವೆ.

 

ಜನರು ನಿದಾನಕ್ಕೆ ಈ ಬಿಟ್ ಕಾಯಿನ್ ಫಲ್ಸ್ ಹಿಡಿಯಲು ಹಿಂದೆಬಿದ್ದು ಹಿಂಬಾಲಿಸುತ್ತಿದ್ದಾರೆ. ಇದರಿಂದ ಭವಿಷ್ಯದಲ್ಲಿ ಭಾರತದ ಆರ್ಥಿಕ ವ್ಯವಸ್ಥೆಗೆ ಏನೆಲ್ಲಾ ಗಂಡಾಂತರ ಎದುರಾಗಲಿದೆಯೋ ಬಲ್ಲವರಾರು? ‘ಬಾರತದ ಆರ್ಥಿಕತೆ ಮುಂದುವರಿಯಲು ಖಾಸಗಿ ಕ್ರಿಪ್ಟೋಕರೆನ್ಸಿಗಳ ಕೊಡುಗಯ ಬಗ್ಗೆ ನಮಗೆ ವಿಶ್ವಾಸಾರ್ಹ ಉತ್ತರಗಳು ಬೇಕು’ ಎಂದಿರುವ ನಮ್ಮ ಆರ್.ಬಿ.ಐ. ಗವರ್ನರ್ ಶಕ್ತಿಕಾಂತ್ ದಾಸ್ ಈ ರೀತಿಯ ಡಿಜಿಟಲ್ ಮನೀ ಪ್ಲಾಟ್ ಫಾರ್ಮ್ ಗಳನ್ನು ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ಕೇಂದ್ರ ಸರ್ಕಾರವೇ ಒಂದು ನಿರ್ಧಾರ ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ. ಈ ಹಿಂದೆಯೂ ಇದೇ ಗವರ್ನರ್ ಶಕ್ತಿಕಾಂತ್ ದಾಸ್ ಕ್ರಿಪ್ಟೋಕರೆನ್ಸಿಗಳ ಬಗ್ಗೆ ಎಚ್ಚರಿಕೆ ನೀಡುತ್ತಾ ದೇಶದ ಆರ್ಥಿಕತೆಯ ಸ್ಥಿರತೆಯ ಮೇಲೆ ಈ ಕ್ರಿಪ್ಟೋಕರೆನ್ಸಿಗಳು ಉಂಟುಮಾಡಬಹುದಾದ ಅಪಾಯಗಳ ಬಗ್ಗೆ ತಮ್ಮ ಕಾಳಜಿ ಮತ್ತು ಆತಂಕ ತೋಡಿಕೊಂಡಿದ್ದರು! ಅನಿವಾರ್ಯತೆ ಇದ್ದರೆ ಭಾರತ ಸರ್ಕಾರವು ಗಂಭೀರ ಚಿಂತನೆ ನಡೆಸಿ ನಮ್ಮ ಆರ್.ಬಿ.ಐ. ಸಂಸ್ಥೆಯಿಂದಲೇ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ(ಸಿಬಿಡಿಸಿ) ಜಾರಿಗೊಳಿಸುವ ಬಗ್ಗೆ ದಾರಿಗಳನ್ನು ಹುಡುಕುತ್ತಿರುವುದಾಗಿ ಆರ್. ಬಿ ಐ. ಉಪ ಗವರ್ನರ್ ಹೇಳಿದ್ದರು. 2020ರಲ್ಲಿ ಕೇವಲ 923 ಮಿಲಿಯನ್ ಡಾಲರ್ ವಹಿವಾಟು ಹೊಂದಿದ್ದ ಕ್ರಿಪ್ಟೋಕರೆನ್ಸಿ ಭಾರತದಲ್ಲಿ ಈಗ 6.6ಬಿಲಿಯನ್ ಡಾಲರ್ ಮುಟ್ಟಿರುವುದರಿಂದ ನಮ್ಮ ಕೇಂದ್ರ ಸರ್ಕಾರವು ಈ ರೀತಿಯ ಡಿಜಿಟಲ್ ಇ-ಕರೆನ್ಷಿಗಳಿಗೆ ಮಾನ್ಯತೆ ನೀಡುವ ಹಾದಿಯಲ್ಲಿದೆ.

ಕ್ರಿಪ್ಟೋಕರೆನ್ಸಿ (ಬಿಲ್) ಮಸೂದೆ ಜಾರಿಗೆ ತರಲು ಮುಂದಾಗಿರುವ ಕೇಂದ್ರ ಸರ್ಕಾರ ತೆರಿಗೆ ಸೇರಿದಂತೆ ಎಲ್ಲಾ ಉದ್ದೇಶ ಗಳಿಗೂ ಕ್ರಿಪ್ಟೋಕರೆನ್ಸಿಯನ್ನು ಸರಕು/ಆಸ್ತಿಯಾಗಿ ವ್ಯಾಖ್ಯಾನಿಸಲು ತುದಿಗಾಲಿನಲ್ಲಿರುವಂತಿದೆ! ಜಾಗತಿಕ ಮಟ್ಟದಲ್ಲಿ ಆಸ್ತಿ, ಉಪಯುಕ್ತತೆ, ಕರೆನ್ಸಿ ಮತ್ತು ಭದ್ರತೆ ಎಂಬ ನಾಲ್ಕು ಪ್ರಮುಖ ವರ್ಗೀಕರಣದೊಂದಿಗೆ ವಹಿವಾಟು ನಡೆಸುತ್ತಿರುವ ಈ ಕ್ರಿಪ್ಟೋಕರೆನ್ಸಿ ಉದ್ಯಮ ಕೇಂದ್ರ ಸರ್ಕಾರದ ಈ ನಡೆಯಿಂದ ಖುಷಿಯಾಗಿದೆ. ಕ್ರಿಪ್ಟೋಕರೆನ್ಸಿ ಬಳಕೆಯಲ್ಲಿ ಜಗತ್ತಿನಲ್ಲಿ ಎರಡನೇಯ ಸ್ಥಾನಕ್ಕೆ ಜಿಗಿದಿರುವ ಭಾರತದ ಈ ವರ್ಚುವಲ್ ಮನೀ ಮಾರುಕಟ್ಟೆಯು ದಿನದಿಂದ ದಿನಕ್ಕೆ ಅಭಿವೃದ್ಧಿ ಯಾಗುತ್ತಿರುವುದನ್ನು ಮನಗಂಡು ಕೇಂದ್ರ ಸರ್ಕಾರವು ಈ ಕ್ರಿಪ್ಟೋಕರೆನ್ಷಿ ವಹಿವಾಟಿನ ಮೇಲೆ ತೆರಿಗೆ ವಿಧಿಸಲು ಸಿದ್ದತೆ ನಡೆಸಿದೆ.
ಕ್ರಿಪ್ಟೋ ಕರೆನ್ಸಿ ಮೇಲಿನ ಹೂಡಿಕೆ ಅತಿ ಹೆಚ್ಚು ಲಾಭ ತಂದು ಕೊಟ್ಟರೂ ಅದು ಸಂಪೂರ್ಣ ಸುರಕ್ಷಿತವಲ್ಲ ಎಂಬ ವಾದಗಳೂ ಇವೆ! ವಿಶ್ವದಾದ್ಯಂತ ಕ್ರಿಪ್ಟೋ ಕರೆನ್ಸಿ ವ್ಯಾಪಾರ ವಲಯಕ್ಕೆ ಸಂಬಂಧಿಸಿದ ಹಲವಾರು ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿವೆ! ಅಮೆರಿಕದ ಕ್ರಿಪ್ಟೋ ಎಕ್ಸ್ ಚೇಂಜ್ ಗಳಲ್ಲಿ ಒಂದಾದ ಬಿಟ್ ಫಿನ್ ಎಕ್ಸ್ ಚೇಂಜ್ ಹೂಡಿಕೆದಾರರನ್ನು ದಾರಿತಪ್ಪಿಸುತ್ತಿದೆ ಎಂಬ ಆರೋಪ ಎದುರಿಸುತ್ತಿದೆ. ಈ ಪ್ರಕರಣ ವನ್ನು ನ್ಯೂಯಾರ್ಕ್ ಆಫೀಸ್ ಆಫ್ ದಿ ಅಟಾರ್ನಿ ಜನರಲ್ (ಒಎಜಿ) ತನಿಖೆ ನಡೆಸುತ್ತಿದೆ. ಈ ಎಕ್ಸ್ ಚೇಂಜ್ ಗಳು ನೂರಾರು ಮಿಲಿಯನ್ ಡಾಲರ್ ಮೊತ್ತದ ನಷ್ಟವನ್ನು ಮುಚ್ಚಿ ಹಾಕಿ ಹೂಡಿಕೆ ದಾರರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿವೆ ಎಂಬ ಆರೋಪಗಳೆದ್ದಿವೆ.

ಹಾಗೆಯೇ ಬಿಟ್ ಕಾಯಿನ್ ಸೇವಿಂಗ್ಸ್ ಅಂಡ್ ಟ್ರಸ್ಟ್ ನ ಆಯೋಜಕರು ಹಲವು ಮಂದಿಯಿಂದ ಸಾಲ ಪಡೆದು ಬಿಟ್ ಕಾಯಿನ್ ಗಳಲ್ಲಿ ಅಕ್ರಮ ಹೂಡಿಕೆ ಮಾಡಿರುವ ಕುರಿತು ಪ್ರಕರಣವು ಎನ್.ಇ.ಸಿ ಕಾನೂನು ಪರಿಶೀಲನೆ ಗೊಳಪಟ್ಟಿದೆ. ದಕ್ಷಿಣ ಕೋರಿಯಾದ ಕ್ರಿಪ್ಟೋ ಎಕ್ಸ್ ಚೇಂಜ್ ಅಂಗ ಸಂಸ್ಥೆ ಬಿಟ್ ಥಂಬ್ ವಿರುದ್ಧ ವಂಚನೆಯ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. 2014 ರಲ್ಲೇ ರಾಸ್ ವಿಲಿಯಂ ಎಲ್ಟ್ರೀಚ್ ಎಂಬುವನ ಮೇಲೆ ಕಂಪ್ಯೂಟರ್ ಹ್ಯಾಕಿಂಗ್, ಮಾದಕವಸ್ತು ಕಳ್ಳಸಾಗಾಣಿಕೆ, ಮನೀ ಲಾಂಡರಿಂಗ್, ಕಾನೂನು ಬಾಹಿರ ಚಟುವಟಿಕೆಗಳ ಆರೋಪ ಹೊರಿಸಿ ಆತ ತನ್ನೆಲ್ಲಾ ದುಷ್ಕೃತ್ಯ ಗಳಿಗೂ ಆನ್ ಲೈನ್ ಬ್ಲಾಕ್ ಮಾರ್ಕೆಟ್ ನಲ್ಲಿ ಬಿಟ್ ಕಾಯಿನ್ ಪಡೆಯುತ್ತಿದ್ದನೆಂದು ಬಂಧಿಸಲಾಗಿತ್ತು. ಹಾಗೆಯೇ ಪಾಸ್ಕಲ್ ರೀಡ್ ಮತ್ತು ಮಿಚೆಲ್ ಅನ್ವರ್ ಎಸ್ಟಿನೋಜಾ ಎಂಬಿಬ್ಬರು ನಕಲಿ ವಹಿವಾಟು ನಡೆಸಿ 30ಸಿವಿರ ಡಾಲರ್ ಮೊತ್ತದ ಹಣವನ್ನು ಬಿಟ್ ಕಾಯಿನ್ ಆಗೀ ಪರಿವರ್ತಿಸಿ ಮನೀ ಲಾಂಡರಿಂಗ್ ಪ್ರಕರಣ ಳದಲ್ಲಿ ಜೈಲು ಪಾಲಾಗಿದ್ದರು. ಎರಡೂ ಪ್ರಕರಣಗಳಲ್ಲಿಯೂ ಬಿಟ್ ಕಾಯಿನ್ ಎಂಬುದು ನಿಜವಾದ ಹಣವೇ ಅಲ್ಲವೆಂದು ಕೋರ್ಟ್ ಆ ಪ್ರಕರಣವನ್ನೇ ರದ್ದುಗೊಳಿಸಿ ಅಪರಾಧಿಗಳು ಬಿಡುಗಡೆಗೆ ಯಾದರು! ಬಿಟ್ ಕಾಯಿನ್ ಹೂಡಿಕೆದಾರರು ಗಮನಿಸಬೇಕಾದ ಮತ್ತೆರಡು ಪ್ರಮುಖ ಪ್ರಕರಣಗಳೆಂದರೇ..ಕಳೆದ ಆಗಸ್ಟ್ ತಿಂಗಳಲ್ಲಿ ಪಾಲಿ ನೆಟ್ವರ್ಕ್ ಎಂಬ ಕ್ರಿಪ್ಟೋ ಪ್ಲಾಟ್ ಫಾರ್ಮ್ ಕಂಪೆನಿ ಯಿಂದ 610ಮಿಲಿಯನ್ ಡಾಲರ್ ಮೌಲ್ಯದ ಇಥೆರಿಯಂ, ಬಿನಾನ್ಷ್ ಕಾಯಿನ್, ಸ್ಮಾರ್ಟ್ ಚೈನ್, ಡಿಜಿಟಲ್ ಕರೆನ್ಸಿ ಟೋಕನ್ ಗಳನ್ನು ಕದಿಮುವಲ್ಲಿ ಹ್ಯಾಕರ್ಸ್ ಗಳು ಯಶಸ್ವಿಯಾಗಿದ್ದಾರೆ! ಇತ್ತೀಚೆಗಂತೂ ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ನಲ್ಲೂ, ಡಿಜಿಟಲ್ ದರೋಡೆ ಕೋರರ ವರ್ಚುವಲ್ ಹ್ಯಾಕರ್ಸ್ ಗಳ ಕಾಟ ಅಧಿಕ ವಾಗಿದೆ. ಹೀಗೆ ಬಡ ಮದ್ಯಮ ವರ್ಗದ ಜನ ದುಡಿದು, ಸಾಲಮಾಡಿ ಹೂಡಿಕೆ ಮಾಡಿದ ಹಣವನ್ನು ನಿಮಿಷಗಳಲ್ಲಿ ಈ ಕರೆನ್ಸಿ ಕಳ್ಳರು ಹ್ಯಾಕ್ ಮಾಡಿ ಕದ್ದೋಯ್ದರೇ ಗತಿ ಏನೂ? ಈಗ ಜನರ ಹಣ ಹಿಂದಿರುಗಿಸಲು ಸೈಬರ್ ಹ್ಯಾಕಿಂಗ್ ದರೋಡೆ ಕೋರರ ಬಳಿ ಅಂಗಲಾಚುತ್ತಿರುವ ಕ್ರಿಪ್ಟೋ ಎಕ್ಸ್ ಚೇಂಜ್ ಕಂಪನಿ ಪಾಲಿ ನೆಟ್ವರ್ಕ್ ತಮ್ಮದೇ ಕಂಪನಿಯಲ್ಲಿ ಸೈಬರ್ ಭದ್ರತಾ ಸಲಹೆಗಾರನ ಹುದ್ದೆನೀಡುವ ಆಫರ್ ನೀಡಿ ಬೇಡುತ್ತಿದೆ! ತಮ್ಮ ಜೀವಮಾನದ ಸಂಪಾದನೆಯನ್ನು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಲು ಮುಂದಾಗಿರುವ ಕೆಲವರು ಇಂತಹ ಗಂಭೀರ ಪ್ರಕರಣಗಳನ್ನು ಗಣನೆಗೆ ತೆಗೆದುಕೊಳ್ಳಲೇಬೇಕಿದೆ.

ಕ್ರಿಪ್ಟೋ ಕರೆನ್ಸಿ ಹೂಡಿಕೆ ಯನ್ನು ಉಳಿತಾಯ, ವ್ಯಾಪಾರವೆಂದು ನಂಬಿರುವವರು ಬೆಚ್ಚಿ ಬೀಳುವಂತೆ ಬ್ರಿಟನ್ ನಲ್ಲಿ ಕ್ರಿಪ್ಟೋ ಕರೆನ್ಸಿ ಹಗರಣವೊಂದು ಕಳೆದ ಆಗಸ್ಟ್ ತಿಂಗಳಲ್ಲೇ ನಡೆದಿದೆ. 165 ಕೋಟಿ ಮೊತ್ತದ ಕ್ರಿಪ್ಟೋ ಕರೆನ್ಸಿ ವಶಕ್ಕೆ ಪಡೆದಿರುವ ಬ್ರಿಟನ್ ಪೊಲೀಸರು ಬಿಟ್ ಕಾಯಿನ್ ನಂತರದ ಅತಿ ದೊಡ್ಡ ಕ್ರಿಪ್ಟೋ ಕರೆನ್ಸಿ ಇಥೇರಿಯಂ ಹೆಸರಿನಲ್ಲಿ ಅಮೆರಿಕ,ಚೀನಾ, ಹಾಂಕಾಂಗ್, ಬ್ರಿಟನ್, ಆಸ್ಟ್ರೇಲಿಯಾ ದೇಶಗಳ ಗ್ರಾಹಕರಿಗೆ ಮೋಸ ಮಾಡಿದ್ದ ವಂಚಕರನ್ನು ಬ್ರಿಟನ್ ಪೊಲೀಸರು ಇನ್ನೂ ಹುಡುಕುತ್ತಲೇ ಇದ್ದಾರೆ! ಹೊಸರೀತಿಯ ಆನ್ ಲೈನ್ ಅಪರಾಧಕ್ಕೆ ಕಾರಣವಾಗುತ್ತಿರುವ ಈ ಕ್ರಿಪ್ಟೋ ಕರೆನ್ಸಿ , ಹ್ಯಾಕಿಂಗ್ ಮುಂತಾದ ವಂಚನೆಗಳು ಆರ್ಥಿಕ ಅಪರಾಧಗಳ ಪಟ್ಟಿಯಲ್ಲಿದ್ದರೂ ಸಮಾಜದ ಸ್ವಾಸ್ಥ್ಯ ವನ್ನು ಹಾಳುಮಾಡುವ ಪ್ರಮುಖ ವಿಷಯಗಳಾಗಿ ರೂಪುಗೊಳ್ಳುವುದರಲ್ಲಿ ಸಂದೇಹವೇಇಲ್ಲ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ನೂರಾರು ನಕಲಿ ಬಿಟ್ ಕಾಯಿನ್ ವಾಲೆಟ್ ಗಳು ಜನರನ್ನು ಮೋಸ ಮಾಡಲು ಕಾದು ಕುಳಿತಿವೆ. ಯಾವುದೇ ಇಡಿ ಭಯವಿಲ್ಲದೆ, ಜಿ.ಎಸ್ಟೀ ತಗಾದೆಯೇ ಇಲ್ಲದೆ ಈ ಇಲ್ಲೀಗಲ್ ಹವಾಲಾ ಟ್ರೇಡಿಂಗ್ ಮುನ್ನುಗ್ಗುತ್ತಿದೆ. ಅಕ್ರಮ ಶಸ್ತ್ರಾಸ್ತ್ರ ಮಾರಾಟ, ಡ್ರಗ್ಸ್ ದಂಧೆ ಯಲ್ಲಿ ಸಿಂಹ ಪಾಲು ಪಡೆದಿರುವ ಬಿಟ್ ಕಾಯಿನ್ (ಬಿಟಿಸಿ) ಎಂಬ ಈ ಕ್ರಿಪ್ಟೋ ಕರೆನ್ಸಿ ಯನ್ನು ಡಿಜಿಟಲ್ ಗೋಲ್ಡ್ ಅಂತಲೂ ಕರೆಯುತ್ತಾರೆ!!


ಇಷ್ಟೆಲ್ಲಾ ರಾದ್ದಾಂತಗಳಿದ್ದರೂ ಕೇವಲ ಲಾಭಗಳಿಕೆಯ ಉದ್ದೇಶದಿಂದಲೇ ಈಗ ಎಲ್ಲರೂ ಕ್ರಿಪ್ಟೋ ಕರೆನ್ಸಿಯಾದ ಬಿಟ್ ಕಾಯಿನ್ ಕಡೆ ಮುಖಮಾಡಿದ್ದಾರೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ಕೂಡ ಇದೀಗ ಕ್ರಿಪ್ಟೋ ಕರೆನ್ಸಿ ಹೂಡಿಕೆ ವಲಯ, ಎಕ್ಸ್ ಚೇಂಜ್ ಪ್ಲಾಟ್ ಪ್ರವೇಶಿಸಲು ಮುಂದಾಗಿವೆ. ದೇಹದಲ್ಲಿ ಅತಿ ಹೆಚ್ಚು ಬಿಟ್ ಕಾಯಿನ್ ಬಳಕೆದಾರರನ್ನು ‌ಹೊಂದಿರುವ ಕಾಯಿನ್ ಸ್ವಿಚ್ ಕುಭೇರ್ ಇವರಿಗೆಲ್ಲಾ ಮಾದರಿಯಾಗಿ ಮಾರುಕಟ್ಟೆಗೆ ಸೆಳೆಯುತ್ತಿದೆ. ಮತ್ತೊಂದು ಇತ್ತೀಚೆಗಿನ ಬೆಳವಣಿಗೆಯಲ್ಲಿ ಭಾರತೀಯ ಕ್ರಿಪ್ಟೋ ಎಕ್ಸ್ ಚೇಂಜ್ ಕಾಯಿನ್ ಡಿಸಿ ಎಕ್ಸ್ ಬ್ರಾಂಡ್ ಅಂಬಾಸಿಡರ್ ಆಗಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಎಂಟ್ರಿ ಕೊಟ್ಟಿದ್ದಾರೆ! ನಟಿ ಸನ್ನಿಲಿಯೋನ್ ಕ್ರಿಪ್ಟೋ ಕರೆನ್ಸಿ ಗಳಲ್ಲಿ ಹಣ ಹೂಡಿಕೆ ಮಾಡಿದ ಬಾಲಿವುಡ್ ನ ಮೊದಲ ನಟಿ ಎನಿಸಿಕೊಂಡಿದ್ದಾರೆ. ಭಾರತೀಯ ವ್ಯಾಪಾರ ಸಂಸ್ಥೆ ನಾಸ್ಕಾಂನ ಇತ್ತೀಚಿನ ವರದಿ ಪ್ರಕಾರ ಜಾಗತಿಕ ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆಯು 2026 ರ ವೇಳೆಗೆ 2.3 ಬಿಲಿಯನ್ ಮೌಲ್ಯ ತಲುಪಲಿದೆಯಂತೆ. ಭಾರತದಲ್ಲಿ 2030 ರ ವೇಳೆಗೆ 241ಮಿಲಿಯನ್ ದಾಟಲಿದೆಯಂತೆ! ಭಾರತದ ಜನಪ್ರಿಯ ಕ್ರಿಪ್ಟೋ ಎಕ್ಸ್ ಚೇಂಜ್ ಯುನೋ ಕಾಯಿನ್ ತನ್ನ ಬಳಕೆದಾರರಿಗೆ ಅನುಕೂಲ ವಾಗಲೆಂದು ಪಾಸ್ಟ್ ಟ್ಯಾಗ್ ರೀಚಾರ್ಜ್ ನಂತಹ ಸೇವೆಗಳಿಗೂ ಬಿಟ್ ಕಾಯಿನ್ ಬಳಸುವಂತೆ ಆಫ್ ವ್ಯವಸ್ಥೆ ಮಾಡಿಕೊಟ್ಟಿದೆ. ಇತ್ತೀಚೆಗೆ ಭಾರತದಲ್ಲಿಯೂ ನಿಧಾನವಾಗಿ ಕ್ರಿಪ್ಟೋ ಪೇಮೆಂಟ್ ವ್ಯವಸ್ಥೆ ಬೆಳೆಯುತ್ತಿದೆ. ಕೆಲವು ಉದ್ದಿಮೆ ದಾರರು ತಮ್ಮ ಸರಕು ಸೇವೆಗಳಿಗೆ ಬಿಟ್ ಕಾಯಿನ್, ಇಥೆರಿಯಂ ಸೊಲಾನಾ ಮತ್ತಿತರ ಡಿಜಿಟಲ್ ಕರೆನ್ಸಿ ಟೋಕನ್ ಗಳನ್ನು ಪಾವತಿ ರೂಪದಲ್ಲಿ ಸ್ವಿಕರಿಸುತ್ತಿವೆ! ವರದಿಗಳ ಪ್ರಕಾರ ಭಾರತದ ಎರಡು ಮತ್ತು ಮೂರನೇ ಹಂತದ ನಗರಗಳಲ್ಲೂ 1.5 ಕೋಟಿಗಿಂತಲೂ ಅಧಿಕ ಭಾರತೀಯರು ಅದರಲ್ಲೂ ಯುವಕರು ಕ್ರಿಪ್ಟೊ ಕರೆನ್ಸಿಗಳಲ್ಲಿ ಹೂಡಿಕೆ ಮಾಡಿದ್ದಾರಂತೇ! ಕ್ರಿಪ್ಟೋ ಅಕಾಡೆಮಿ! ಕ್ರಿಪ್ಟೋ ಟೆಕ್ನಾಲಜಿ! ಎಂಬ ಹೊಸ ವ್ಯಾಖ್ಯಾನ ದೊಂದಿಗೆ ‘ಐ ಫೋನ್ ಫಾರ್ ಫಸ್ಟ್ ಬಿಟ್ ಕಾಯಿನ್’ ಆಫರ್ ನೊಂದಿಗೆ ಈ ಡಿಜಿಟಲ್ ಹವಾಲಾ ನಾನೇ ನೆಕ್ಸ್ಟ್ ಗೂಗಲ್ ರಿಸರ್ವ್ ಕರೆನ್ಸಿ ಎಂದು ಬೀಗುತ್ತಾ ಎಕಾನಾಮಿಕ್ ಟೆರರಿಸಂ ಬೆಲೆಗೆ ಭಾರತವನ್ನು ಕೆಡವಲು ಈ ಡಿಜಿಟಲ್ ಮನೀ ಮಾಫಿಯಾ ಸಜ್ಜಾಗಿದೆ. ಶೇರುಪೇಟೆ ಯಲ್ಲಿ ಹಣ ಹೂಡಿಕೆ ಮಾಡುವುದಕ್ಕೂ ಕ್ರಿಪ್ಟೋ ಕರೆನ್ಸಿ ಯಲ್ಲಿ ಹೂಡಿಕೆ ಮಾಡುವುದಕ್ಕೂ ಹೆಚ್ಚೇನೂ ವ್ಯತ್ಯಾಸ ವಿಲ್ಲದಿದ್ದರೂ ಬಹುತೇಕ ರಾಷ್ಟ್ರಗಳಲ್ಲಿ ಇನ್ನೂ ಈ ಕ್ರಿಪ್ಟೋ ಕರೆನ್ಸಿಗಳನ್ನು ಮಾನ್ಯತೆ ಮಾಡಿಲ್ಲ ವಾದ್ದರಿಂದ ನಮ್ಮ ಕೇಂದ್ರ ಸರ್ಕಾರವೂ ಕೂಡ ಯಾವುದೇ ಕ್ಷಣದಲ್ಲಾದರೂ ಚೀನಾ ಸರ್ಕಾರದಂತೆಯೇ ಎಲ್ಲಾ ಖಾಸಗಿ ಡಿಜಿಟಲ್ ಕರೆನ್ಸಿ ಟೋಕನ್ ಗಳನ್ನು (ರದ್ದುಗೊಳಿಸಿ) ಬ್ಯಾನ್ ಮಾಡಿ ತನ್ನದೇ (ಆರ್.ಬಿ.ಐ.) ಡಿಜಿಟಲ್ ಕರೆನ್ಸಿ ಹೊರತಂದರೂ ಅಚ್ಚರಿ ಪಡಬೇಕಿಲ್ಲ.

ಆಗೇನಾದರೂ ಭಾರತದಲ್ಲಿ ಕ್ರಿಪ್ಟೋ ಕರೆನ್ಸಿ ಬ್ಯಾನ್ ಆದರೆ ಈಗಾಗಲೇ ಹೂಡಿಕೆ ಮಾಡಿರುವ ಕೋಟ್ಯಂತರ ಬಾರತೀಯರು ಬೀದಿಗೆ ಬೀಳಬೇಕಾಗುತ್ತದೆ. ಆದ ಕಾರಣದಿಂದ ಜನರು ಈ ಕಣ್ಣಿಗೆ ಕಾಣದ ಡಿಜಿಟಲ್ ಕರೆನ್ಸಿಗಳ ಹಿಂದೆ ಹೋಗಿ ದುಡ್ಡು ಕಳೆದುಕೊಳ್ಳುವ ಬದಲು ಕೇಂದ್ರ ಸರ್ಕಾರದ ಕ್ರಿಪ್ಟೋ ಕರೆನ್ಸಿ ಬಿಲ್ ಬರುವವರೆಗೂ ಕಾಯುವುದೇ ಒಳಿತಲ್ಲವ

Girl in a jacket
error: Content is protected !!