ಕಾರು ಅಡ್ಡಗಟ್ಟಿ ಮಹಿಳೆ ಕೊಲೆ

Share

ಆನೇಕಲ್,ಡಿ,28: ಕಾರು ಅಡ್ಡಗಟ್ಟಿ ದುಷ್ಕರ್ಮಿಗಳು ಮಹಿಳೆಯನ್ನು ಬರ್ಬರ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಿಣಿ ಬಳಿ ನಡೆದಿದೆ.

ಜಿಗಣಿ ನಿವಾಸಿ ಅರ್ಚನಾರೆಡ್ಡಿ ಹತ್ಯೆಯಾದ ಮಹಿಳೆ. ನವೀನ್, ಸಂತೋಷ್ ಎಂಬುವವರು ಅರ್ಚನಾರೆಡ್ಡಿಯನ್ನು ಕೊಲೆ ಮಾಡಿದ್ದಾರೆ. ತಡರಾತ್ರಿ ಈ ಘಟನೆ ನಡೆದಿದೆ. ಅರ್ಚನಾ ಮೊದಲ ಪತಿ ಬಿಟ್ಟು 2ನೇ ಪತಿ ನವೀನ್ ಜೊತೆ ವಾಸವಿದ್ದರು. ಈ ನಡುವೆ ಚೆನ್ನಪಟ್ಟಣದಲ್ಲಿರುವ ಆಸ್ತಿ ವಿಚಾರವಾಗಿ ಗಲಾಟೆ ನಡೆದಿದ್ದು ಹೀಗಾಗಿ ಇತ್ತೀಚೆಗೆ ನವೀನ್ ಬಿಟ್ಟು ಅರ್ಚನಾ ದೂರವಿದ್ದರು. ಈ ಕಾರಣಕ್ಕಾಗಿ ನವೀನ್ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ .
ಈ ಬಗ್ಗೆ ಆನೆಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ

Girl in a jacket
error: Content is protected !!