ಆನೇಕಲ್;೫೬ ಆರೋಪಿಗಳ ಬಂಧನ ೭೪ ಲಕ್ಷ ಅಧಿಕ ಮೌಲ್ಯದ ವಸ್ತುಗಳ ವಶ

Share

ನೇಕಲ್,ಜು.೧೫: ಸುಲಿಗೆ ಕಳ್ಳತನ ಸೇರಿದಂತೆ ೩೭ ಪ್ರಕರಣಗಳಲ್ಲಿ ಭಾಗಿಯಾಗಿದ್ದ ೫೬ ಆರೋಪಿಗಳನ್ನು ಬಂಧಿಸಿರುವ ಆನೇಕಲ್ ಉಪ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಈ ಸಂಬಂಧ ೭೪ ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ವರವಲಯದ ಸುತ್ತ ಹಲವಾರು ರಾಬರಿಗಳು ಮತ್ತು ಕಳ್ಳತನಗಳು ನಡೆಯುತ್ತಿದ್ದವು ಕೆಲವು ಕ್ಲಿಸ್ಟ್ ಪ್ರಕರಣಗಳನ್ನು ಬೆನ್ನು ಹತ್ತಿ ಪೊಲಿಸುರ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ .
ಹಲವು ಕ್ಲಿಷ್ಟ ಪ್ರಕರಣಗಳನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡುವುದರ ಮೂಲಕ ಮತ್ತಷ್ಟು ಉತ್ತಮ ಕಾರ್ಯ ಮಾಡಲು ಅಭಿನಂದಿಸಿದ್ದಾರೆ. ಜೊತೆಗೆ ವಸ್ತುಗಳನ್ನು ಕಳೆದುಕೊಡ ಮಾಲೀಕರಿಗೆ ಕೇಂದ್ರ ವಲಯ ಐಜಿ ಚಂದ್ರಶೇಖರ್ ರವರು ಹೆಬ್ಬಗೋಡಿ ಸಮೀಪದ ಎಸ್‌ಎಫ್‌ಎಸ್ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಪ್ರಾಪರ್ಟಿ ಪೆರೇಡ್ ವೇಳೆ ಅವರ ವಸ್ತುಗಳನ್ನು ಹಸ್ತಾಂತರ ಮಾಡಿದ್ದಾರೆ.
ಇನ್ನೂ ಇದೆ ಸಂದರ್ಭದಲ್ಲಿ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಮಾತನಾಡಿ ಆನೇಕಲ್ ಉಪ ವಿಭಾಗದ ಪೊಲೀಸರು ಉತ್ತಮವಾದ ಕೆಲಸ ಮಾಡಿದ್ದಾರೆ. ಸುಲಿಗೆ, ಕಳ್ಳತನ ಸೇರಿದಂತೆ ೩೭ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಪತ್ತೆ ಹಚ್ಚಿ ೧ಕೋಟಿ ೭೪ ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ೫೬ ಆರೋಪಿಗಳ ಬಂಧಿಸಿ ಜೈಲಿಗಟ್ಟಿದ್ದಾರೆ. ಹೆಬ್ಬಗೋಡಿ ಠಾಣೆಯಲ್ಲಿ ೨೫ ದ್ವಿಚಕ್ರವಾಹನ, ೩ ಸುಲಿಗೆ, ಮೂರು ಮನೆ ಕಳ್ಳತನ ಪ್ರಕರಣ ಪತ್ತೆ ಹಚ್ಚಲಾಗಿದೆ.

ಜಿಗಣಿ ಠಾಣೆಯಲ್ಲಿ ೧೦೦ ಮೊಬೈಲ್ ೧೫ ದ್ವಿಚಕ್ರ ವಾಹನ, ೨ ಸುಲಿಗೆ, ೨ ಡಕಾಯಿತಿ, ೨ ಮನೆ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ೧ ಕೆ.ಜಿ.೩೦ ಗ್ರಾಂ ಚಿನ್ನ ಜಫ್ತಿ ಮಾಡಲಾಗಿದೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ೨೫ ಮೊಬೈಲ್ , ೯ ದ್ವಿಚಕ್ರ ವಾಹನ, ೧ ಸುಲಿಗೆ ಪ್ರಕರಣ ಪತ್ತೆಯಾಗಿದೆ ಎಂದ ಅವರು ತಿಳಿಸಿದರು.

 

Girl in a jacket
error: Content is protected !!