ಅನೇಕಲ್ ಬಳಿ ರೇವೂಪಾರ್ಟಿ ಮೇಲೆ ಪೊಲೀಸರ ದಾಳಿ

Share

ಬೆಂಗಳೂರು, ಸೆ,19:ಆನೇಕಲ್ ಸಮೀಪ ರೇವು ಪಾರ್ಟಿ ನಡೆಸುತ್ತಿದ್ದ ಪ್ರದೇಶದಲ್ಲಿ ಪೊಲೀಸರು ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ವೇಳೆ ಡ್ರಗ್ಸ್ ತಗೆದುಕೊಂಡವರು ನಶೆಯಲ್ಲಿ ಕುಣಿಯುತ್ತಿದ್ದವರು ಪೊಲೀಸರನ್ನು ಕಂಡು ಪರಾರಿಯಾಗಿದ್ದಾರೆ.

ರೆಸಾರ್ಟ್ ಗೆ ಹೊಂದಿಕೊಂಡಿರುವ ನಿರ್ಜನ ಪ್ರದೇಶದಲ್ಲಿ ರೇವ್ ಪಾರ್ಟಿ ನಡೆಸಲಾಗಿದೆ.
ಉದ್ಯಮಿಗಳ ಮಕ್ಕಳು, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಡಿಜೆ. ಕಲರ್ ಫುಲ್ ಲೈಟಿಂಗ್, ಡ್ರಗ್ಸ್ ನೊಂದಿಗೆ ಭರ್ಜರಿ ಪಾರ್ಟಿ ನಡೆಸಿದ್ದಾರೆ. ಮಾಹಿತಿ ತಿಳಿದ ಪೊಲೀಸರು ದಾಳಿ ಮಾಡಿದ್ದಾರೆ.

ಪೊಲೀಸ್ ದಾಳಿಯ ವೇಳೆ ಅಲ್ಲಿದ್ದವರು ಪರಾರಿಯಾಗಿದ್ದು, ಬೆನ್ನಟ್ಟಿದ ಪೊಲೀಸರು 12 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆನೇಕಲ್ ಸಮೀಪದ ರೆಸಾರ್ಟ್ ನಲ್ಲಿ 30 -40 ಜನರು ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಡ್ರಗ್ಸ್ ನಶೆಯಲ್ಲಿ ಯುವಕ-ಯುವತಿಯರು ತೇಲಾಡಿದ್ದು, ಪಾರ್ಟಿಯ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ಮಾಡಿದ್ದಾರೆ.

Girl in a jacket
error: Content is protected !!