ವಿಜಯಪುರ,ಜೂ,21:ಅಕ್ರಮವಾಗಿ ಗನ್ ಹೊಂದಿದ್ದ ವ್ಯಕ್ತಿಯನ್ನು ಬಂಧಿಸಿರುವ ಭೀಮಾತೀರದ ಪೊಲೀಸರು ನಾಡ ಪಿಸ್ತೂಲ್, ನಾಲ್ಕು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲೋಣಿ ಕೆ. ಡಿ ಗ್ರಾಮದ ಮಹಾದೇವ ಅಣ್ಣಾರಾಯ್ ಪಾಂಡ್ರೇ ಬಂಧಿತ ಆರೋಪಿ. ಬಂಧಿತನಿಂದ ಒಂದು ನಾಡ ಪಿಸ್ತೂಲ್, ನಾಲ್ಕು ಜೀವಂತ ಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನಾಡ ಪಿಸ್ತೂಲ್ ಗನ್ ಬೆಲೆ ಸುಮಾರು 30 ಸಾವಿರ ಹಾಗೂ ನಾಲ್ಕು ಗುಂಡುಗಳ ಬೆಲೆ 1 ಸಾವಿರ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಕುರಿತು ಇಂಡಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ.