ಶಿವಣ್ಣ ನಟನೆಯ ಭಜರಂಗಿ-೨ ಚಿತ್ರೀಕರಣ ಆರಂಭ

Share

ಲಾಕ್ ಡೌನ್‌ನಿಂದ ಹಲವಾರು ಚಿತ್ರಗಳ ಶೂಟಿಂಗ್ ಮತ್ತು ಬಿಡುಗಡೆಯನ್ನು ಮುಂದೂಡಿದ್ದವು ಆನ್‌ಲಾಕ್ ಬೆನ್ನಲ್ಲೆ ಈಗ ನಿಧಾನವಾಗಿ ಹಲವು ಸಿನಿಮಾ ತಯಾರಕರು ಅರ್ಧಕ್ಕೆ ನಿಂತಿರುವ ಚಿತ್ರೀಕರಣವನ್ನು ಪೂರ್ಣಗೊಳಿಸಲು ಮುಂದಾಗಿದ್ದಾರೆ
ಎ ಹರ್ಷ ನಿರ್ದೇಶನದ ಶಿವರಾಜ್ ಕುಮಾರ್ ನಟನೆಯ ಭಜರಂಗಿ-೨ ಸಿನಿಮಾ ಶೇ.೬೦ ರಷ್ಟು ಪೂರ್ಣಗೊಂಡಿದ್ದು ಚಿತ್ರದ ಶೂಟಿಂಗ್ ಮುಂದುವರಿಸಲು ತಯಾರಾಗಿದ್ದಾರೆ.
ಚಿತ್ರೀಕರಣ ಆರಂಭಿಸಲು ನಿರ್ಧರಿಸಿದ್ದು ಉಳಿದ ಶೇ.೪೦ ರಷ್ಟು ಶೂಟಿಂಗ್ ಪೂರ್ಣಗೊಳಿಸಲಿದ್ದೇವೆ, ಸಂಗೀತ್ ನಿರ್ದೇಶಕ ಅರ್ಜುನ್ ಜನ್ಯ ಜೊತೆಗೂಡಿ ಕೆಲಸ ಪುನಾರಂಭಿಸಲಿದ್ದೇವೆ ಎಂದು ನಿರ್ದೇಶಕ ಹರ್ಷ ತಿಳಿಸಿದ್ದಾರೆ.


ಇಂದಿನಿಂದ ಸಿನಿಮಾದ ರಿ ರೆಕಾರ್ಡಿಂಗ್ ಆರಂಭವಾಗಲಿದ್ದು, ಮೊದಲ ಕಾಪಿ ಹೊರಬರಲಿದೆ. ಭಜರಂಗಿ ಸಿನಿಮಾವನ್ನು ಜಯಣ್ಣ ನಿರ್ಮಿಸುತ್ತಿದ್ದಾರೆ.
ಆಗಸ್ಟ್ ನಲ್ಲಿ ಸಿನಿಮಾ ರಿಲೀಸ್ ಮಾಡುವ ನಿಟ್ಟಿನಲ್ಲಿ ಚಿತ್ರತಂಡ ಕೆಲಸ ಮಾಡುತ್ತಿದ್ದು, ನಿರ್ಮಾಪಕರಾದ ಜಯಣ್ಣ-ಬೋಗೇಂದ್ರ ಸಿನಿಮಾ ಬಿಡುಗಡೆ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಸರ್ಕಾರ ಥಿಯೇಟರ್ ಗಳಲ್ಲಿ ಶೇ.೧೦೦ ರಷ್ಟು ಸೀಟಿಗೆ ಅನುಮತಿ ನೀಡುತ್ತದೆಯೇ ಎಂಬುದರ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಭಜರಂಗಿ ಕಮರ್ಷಿಯಲ್ ಸಿನಿಮಾವಾಗಿದ್ದು, ಥಿಯೇಟರ್ ನಲ್ಲಿ ರಿಲೀಸ್ ಆಗುವ ಮೊದಲ ಸಿನಿಮಾ ವಾಗುವ ಸಾಧ್ಯತೆಯಿದೆ.


ಶಿವರಾಜ್ ಕುಮಾರ್- ಹರ್ಷ ಕಾಂಬಿನೇಷನ್ ನ ಮೂರನೇ ಸಿನಿಮಾ ಇದಾಗಿದೆ. ಈ ಮೊದಲು ವಜ್ರಕಾಯ, ಭಜರಂಗಿ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. ಈ ಇಬ್ಬರು ವೇದ ಎಂಬ ಮತ್ತೊಂದು ಸಿನಿಮಾಗಾಗಿ ೪ನೇ ಬಾರಿ ಜೊತೆಯಾಗುತ್ತಿದ್ದಾರೆ.
ವೇದ ಸಿನಿಮಾ ಶಿವರಾಜ್ ಕುಮಾರ್ ಅವರ ೧೨೫ ನೇ ಸಿನಿಮಾವಾಗಲಿದೆ, ಭಜರಂಗಿ-೧ ಸಿನಿಮಾದಲ್ಲಿ ಶಿವಣ್ಣನಿಗೆ ಭಾವನಾ ನಾಯಕಿಯಾಗಿದ್ದಾರೆ, ಶೃತಿ, ಲೋಕಿ, ಚೆಲುವರಾಜ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Girl in a jacket
error: Content is protected !!