ರಿಚರ್ಡ್ ಆಂಟನಿಯಾಗಿ ರಕ್ಷಿತ್ ಶೆಟ್ಟಿ

Share

ಹೊಂಬಾಳೆ ಫಿಲಂಸ್‌ನ ಮುಂದಿನ ಚಿತ್ರ ಘೋಷಣೆಯಾಗಿದ್ದು ಇದರ ನಿರ್ದೆಶನದ ಜವಾಬ್ದಾರಿ ಜೊತೆಗೆ ನಾಯಕ ಕೂಡಾ ರಕ್ಷಿತ್ ಶೆಟ್ಟಿ ಜವಾಬ್ದಾರಿ ಹೊತ್ತುಕೊಂಡಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.. ಚಿತ್ರದ ಹೆಸರು ’ರಿಚರ್ಡ್ ಆಂಟನಿ – ಲಾರ್ಡ್ ಆಫ್ ದ ಸೀ’ ಇದು ಚಿತ್ರದ ಟೈಟಲ್
ತೀವ್ರ ಕುತೂಹಲ ಮೂಡಿಸಿರುವ ಈ ಚಿತ್ರದ ಟೈಟಲ್ ಅಷ್ಟೆ ವಿಶೇಷವಾಗಿ ರಕ್ಷಿತ್ ಶೆಟ್ಟಿ ಈ ಚಿತ್ರದ ನಿರ್ದೇಶನದ ಹೊಣೆ ಹೊತ್ತು ಅತ್ಯಂತ ಕ್ರಿಯಾಶೀಲತೆಯನ್ನು ಇದರಲ್ಲಿ ತೊಡಗಿಸಲಿದ್ದಾರೆ ಎನ್ನುವುದು ಈಗಿನ ಹೊಸ ಸುದ್ದಿ.


ಕೆಜಿಎಫ್, ಸಲಾರ್ ರೀತಿಯ ಭಾರೀ ಬಜೆಟ್ ಸಿನಿಮಾಗಳ ನಿರ್ಮಾಣದಿಂದ ದೊಡ್ಡ ಹೆಸರು ಮಾಡಿರುವ ಹೊಂಬಾಳೆ ಫಿಲಂಸ್ ಮುಂದಿನ ಪ್ರಾಜೆಕ್ಟ್ ರಕ್ಷಿತ್ ಶೆಟ್ಟಿ ಪಾಲಾಗಿರುವುದು ಸಂತಸದ ವಿಚಾರ. ರಕ್ಷಿತ್ ಸಾರಥದ್ಯದಲ್ಲೇ ಬಂದು ಜನರ ಮನಸ್ಸು ಗೆದ್ದಿದ್ದ ’ಉಳಿದವರು ಕಂಡಂತೆ’ ಚಿತ್ರದ ಮುಂಚೆ ಮತ್ತು ನಂತರದ ಕತೆ ಇದು ಎನ್ನುವ ಹಿಂಟ್ ಟೀಸರ್?ನ ಕೊನೆಯಲ್ಲಿದೆ. ಅಲ್ಲಿಗೆ ಉಳಿದವರು ಕಂಡಂತೆಯ ರಿಚಿಯ ಬಗ್ಗೆ ಮತ್ತಷ್ಟು ವಿಚಾರವನ್ನು ಈ ಚಿತ್ರ ಹೇಳಲಿದೆ. ರಿಚರ್ಡ್ ಆಂಟನಿಯೇ ರಿಚಿ ಮತ್ತು ಇದು ಅವನದ್ದೇ ಕತೆ.
ಪಕ್ಕಾ ಕುಂದಾಪುರದ ಭಾಷೆಯ ಸೊಗಡು, ಕಾಕಿಗ್ ಬಣ್ಣ ಕಾಂತಾ ಅನ್ನೋ ಹಾಡಿನೊಂದಿಗೆ ಅಜರಾಮರವಾದ ಕಾಗೆ, ಗಮನ ಒಂಚೂರೂ ಆಕಡೆ ಈಕಡೆ ಹೋಗದಂತೆ ಹಿಡಿದಿಟ್ಟುಕೊಳ್ಳೋ ಪ್ರತಿಭಾವಂತ ನಟ ಅಚ್ಯುತ್ ಡೈಲಾಗ್ ಡೆಲಿವರಿ.. ಮತ್ತು ರಿಚಿ ಅಲಿಯಾಸ್ ರಿಚರ್ಡ್ ಆಂಟನಿಯೊಬ್ಬ ಬರೋದು ಬೇಡ ಎನ್ನುತ್ತಲೇ ಕಾಣೋ ಅವನ ಸಮಾಧಿ. ಕರಾವಳಿಯ ಪಿಲಿವೇಶವನ್ನು ಬೆಂಗಳೂರಿನ ಮಾಲ್‌ಗಳಲ್ಲೂ ಕುಣಿಯುವಂತೆ ಮಾಡಿದ್ದ ಉಳಿದವರು ಕಂಡಂತೆಯ ರಿಚಿ ಈಗ ಮತ್ತೊಂದು ರೂಪದಲ್ಲಿ ಅದ್ಧೂರಿಯಾಗಿ ಬರೋಕೆ ಸಜ್ಜಾಗಿದ್ದಾನೆ.ಉಳಿದಂತೆ ರಕ್ಷಿತ್ ಶೆಟ್ಟಿ ನೆಚ್ಚಿನ ಟೆಕ್ನಿಕಲ್ ಟೀಂ ಇದರಲ್ಲೂ ಇದೆ. ಅಜನೀಶ್ ಲೋಕನಾಥ್ ಸಂಗೀತ, ಕರ್ಮ್ ಚಾವ್ಲಾ ಕ್ಯಾಮೆರಾ ಕೈಚಳಕ ಇದ್ಮೇಲೆ ಇದೊಂದು ಕಂಪ್ಲೀಟ್ ಪ್ಯಾಕೇಜ್ ಅಂದ್ರೂ ತಪ್ಪಾಗಲ್ಲ

ಇನ್ನು ಈ ಚಿತ್ರದ ನಾಯಕಿ ಯಾರು, ನಾಯಕಿ ಇರುತ್ತಾರಾ ಎನ್ನುವುದೂ ಇನ್ನೂ ತಿಳಿದುಬಂದಿಲ್ಲ. ಆದರೆ ಭರಪೂರ ಮನರಂಜನೆಗೆ ಏನೂ ಕಡಿಮೆ ಇಲ್ಲ ಎನ್ನುವುದಂತೂ ಸತ್ಯ. ಟೀಸರ್ ಕೊನೆಯಲ್ಲಿ ಅಪಘಾತಕ್ಕೀಡಾದ ದೋಣಿ, ಚಿಲ್ಲಾಪಿಲ್ಲಿಯಾಗಿ ಸಮುದ್ರಕ್ಕೆ ಬಿದ್ದಿರುವ ಅದರೊಳಗಿನ ಡಬ್ಬಗಳು ಮತ್ತು ಅದರೆಡೆಗೆ ವೇಗವಾಗಿ ಈಜಿಕೊಂಡು ಹೋಗುತ್ತಿರುವ ವ್ಯಕ್ತಿ ಈಗಾಗಲೇ ಇರೋ ಸಸ್ಪೆನ್ಸ್‌ನ್ನು ಮತ್ತಷ್ಟು ಹೆಚ್ಚು ಮಾಡಿದ್ದಾರೆ ಎನ್ನುವುದನ್ನಂತೂ ಒಪ್ಪಲೇಬೇಕು.

Girl in a jacket
error: Content is protected !!