ಪ್ರಣೀತಾ ಸುಭಾಷ್? ಪ್ರಾಣಿ, ಪಕ್ಷಿಗಳು ಹಾಗೂ ಪರಿಸರ ಸೇರಿದಂತೆ ಇತರೆ ಸಾಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಪ್ರಣೀತಾ ಫೌಂಡೇಶನ್ ಮೂಲಕ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅದರ ಅಭಿವೃದ್ಧಿಗಾಗಿ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.
ಪ್ರಣೀತಾ ಸುಭಾಷ್. ಸದ್ಯ ಕೊರೋನಾ ಎರಡನೇ ಅಲೆಯಿಂದಾಗಿ ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತಿದ್ದಾರೆ ಪ್ರಣೀತಾ ಸುಭಾಷ್‌ಬಾಲಿವುಡ್ ಸಿನಿಮಾದಲ್ಲೂ ನಟಿಸಿದ್ದು, ಅದು ತೆರೆ ಕಾಣುವ ಹೊಸ್ತಿಲಲ್ಲಿದೆ. ಶಿಲ್ಪಾ ಶೆಟ್ಟಿ, ಪರೇಶ್ ರಾವಲ್ ನಟಿಸಿರುವ ಹಂಗಾಮ ೨ ಸಿನಿಮಾದಲ್ಲಿ ಪ್ರಣೀತಾ ನಟಿಸಿದ್ದಾರೆ.
ಈ ಸಿನಿಮಾ ಲಾಕ್‌ಡೌನ್‌ನಿಂದಾಗಿ ಈಗ ಒಟಿಟಿ ಮೂಲಕ ರಿಲೀಸ್‌ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪ್ರಿಯದರ್ಶನ್ ಹಂಗಾಮ ೨ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.
ಲಾಕ್‌ಡೌನ್‌ನಿಂದಾಗಿ ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ರಿಲೀಸ್ ಮಾಡಲು ಕಷ್ಟವಾಗುತ್ತಿದೆಯಂತೆ. ಪಿಂಕ್ ವಿಲ್ಲಾ ಮಾಡಿರುವ ವರದಿ ಪ್ರಕಾರ ಇದು ಒಟಿಟಿ ಮೂಲಕ ರಿಲೀಸ್ ಮಾಡಲಾಗುವುದು ಎಂಬ ಸುದ್ದಿ ಫೆಬ್ರವರಿಯಲ್ಲೇ ಹೊರ ಬಿದ್ದಿತ್ತಂತೆ.
ಸಿನಿಮಾದ ನಿರ್ಮಾಪಕರು ಈಗಾಗಲೇ ಒಟಿಟಿ ವೇದಿಕೆಯಲ್ಲಿ ರಿಲೀಸ್ ಮಾಡಲು ಮಾತುಕತೆ ಮಾಡಿ ಮುಗಿಸಿದ್ದಾರಂತೆ. ಎಲ್ಲ ಸರಿ ಹೋದರೆ ಈ ತಿಂಗಳಾಂತ್ಯಕ್ಕೆ ರಿಲೀಸ್ ದಿನಾಂಕದ ಜೊತೆ ಒಟಿಟಿ ರಿಲೀಸ್ ಕುರಿತಾಗಿ ಅಧಿಕೃತ ಸುದ್ದಿ ಹೊರ ಬೀಳಲಿದೆಯಂತೆ.