ಪಂಡರಿಬಾಯಿ ನಿರ್ಮಾಣದ ಮೊದಲ ಚಿತ್ರ ಸಂತಸಖು

Share


ಪಂಡರಿಬಾಯಿ ನಿರ್ಮಾಣದ ಮೊದಲ ಚಿತ್ರ ಸಂತಸಖು

ಪಂಢರಿಬಾಯಿಯವರ ಸ್ವಂತ ನಿರ್ಮಾಣದ ಮೊದಲ ಚಿತ್ರ ‘ಸಂತಸಖು‘ಭಕ್ತಿಪ್ರಧಾನಕಪ್ಪು ಬಿಳುಪು ಚಿತ್ರ೧೯೫೫ರಲ್ಲಿ ತೆರೆಕಂಡಿತು. ಪಂಢರಿಬಾಯಿಯವರ ಅಕ್ಕ ಹೊಳೆಯಲ್ಲಿ ಮುಳುಗಿ ಮೃತ್ಯುವಿಗೆಸೆರೆಯಾದ ನಂತರ ಜನಿಸಿದ ಈ ಬಾಲಕಿಗೆ ‘ಗೀತಾ‘ ಎಂದು ನಾಮಕರಣ ಮಾಡಿದರಾದರೂ ಪಂಡರಾಪುರದ ವಿಠಲನಿಗೆ ಹರಿಸಿಕೊಂಡು ‘ಪಂಢರಿ‘ ಎಂದೇಕರೆಯತೊಡಗಿದರು.
ಕೃಷ್ಣನ್-ಪಂಜು ಎಂಬ ಇಬ್ಬರು ಈ ಚಿತ್ರದ ನಿರ್ದೇಶಕರು.ಶಿವಾಜಿ ಗಣೇಶನ್‌ಅವರು ಸಹ ಸಲಹೆ ನೀಡಿ ಪ್ರೋತ್ಸಾಹಿಸಿದ್ದರು.ಎಚ್.ಎಲ್.ಎನ್.ಸಿಂಹ ಅವರು ‘ಬೇಡರಕಣ್ಣಪ್ಪ‘ ಚಿತ್ರವನ್ನು ನಿರ್ದೇಶಿಸಿದಾಗ ರಾಜ್‌ಕುಮಾರ್‌ಜೋಡಿಯಾಗಿ ಪಂಢರಿಬಾಯಿಯನ್ನೇ ನಾಯಕಿಯನ್ನಾಗಿ ಆರಿಸಿದ್ದರು. ಇದು ಪಂಢರಿಬಾಯಿಯವರಜೀವನದಲ್ಲೊಂದುತಿರುವಾಯಿತು.

ಪಂಢರಿಬಾಯಿಯವರು ವಿಠಲನ ಭಕ್ತೆ ‘ಸಕ್ಕೂಬಾಯಿ‘ಯಚಿತ್ರತಯಾರಿಸುವ ಮುನ್ನಾ ಎಚ್.ಎಲ್.ಎನ್.ಸಿಂಹರ ಬಳಿ ಚರ್ಚೆ ನಡೆಸಿದ್ದರು. ಸಿಂಹ ಅವರೇ ಈ ಚಿತ್ರಕ್ಕೆಚಿತ್ರನಾಟಕ-ಸಂಭಾಷಣೆರಚಿಸಿದರು.ಸಿಂಹ ಹಾಗೂ ಪ.ಗುಂಡೂರಾವ್ ಗೀತೆಗಳನ್ನು ರಚಿಸಿದರು.ಪಿ.ಗೋವಿಂದರಾಜುಲು ನಾಯ್ಡುಸಂಗೀತ ನೀಡಿದಚಿತ್ರದಲ್ಲಿ ಹತ್ತುಗೀತೆಯನ್ನು ಅಳವಡಿಸಲಾಗಿತ್ತು. ಸೌಂದರರಾಜನ್, ಮೋತಿ, ಪಿ.ಲೀಲಾ, ಎಂ.ಪ್ರಭಾಕರ್ ಹಾಗೂ ಪಂಢರಿಬಾಯಿಯವರ ಸಹೋದರಿ ಮೈನಾವತಿ ಈ ಗೀತೆಗಳನ್ನು ಹಾಡಿದ್ದರು. ಹಾಸ್ಯ ಪಾತ್ರಗಳಲ್ಲಿಯೇ ಬಹಳಷ್ಟು ಕಾಣಿಸಿಕೊಂಡ ಹಾಗೂ ಯುನಿವಾಕ್ಸ್ ವಾದ್ಯದಿಂದಖ್ಯಾತರಾಗಿದ್ದ ಬಿ.ಹನುಮಂತಾಚಾರ್ ಈ ಚಿತ್ರದ ನಾಯಕ ನಟರಾಗಿದ್ದುದೊಂದು ವಿಶೇಷ. ‘ಸಂತಸಖು‘ ಪಾತ್ರದಲ್ಲಿ ಪಂಢರಿಬಾಯಿವರೇನಾಯಕಿ ಪಾತ್ರ ಮಾಡಿದ್ದು, ಪಂಢರಿಬಾಯಿಯವರ ಸಹೋದರಿ ಮೈನಾವತಿ, ಸೋದರ ವಿಮಲಾನಂದದಾಸ್, ಮಾಧವರಾವ್, ಪ್ರಭಾಕರ್, ಅನ್ನಪೂರ್ಣಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದರು.ಆರ್.ಸಂಪತ್‌ಛಾಯಾಗ್ರಹಣವಿದ್ದಚಿತ್ರ ಮದರಾಸಿನ ರೋಹಿಣಿ ಸ್ಟುಡಿಯೊದಲ್ಲಿ ಸಿದ್ಧಗೊಂಡಿತು.೧೫,೫೯೦ ಅಡಿ ಉದ್ದವಿದ್ದಚಿತ್ರ ೧೯೫೫ರ ಜನವರಿ ೬ರಂದು ಸೆನ್ಸಾರ್‌ಆಯಿತು.


ಸಕ್ಕು ತಾಯಿಯಿಲ್ಲದತಬ್ಬಲಿ.ತಂದೆದಾಮಾಜಿ ಪಂಡಿತತನ್ನ ಗೆಳೆಯನ ಪುತ್ರ ದಿಗಂಬರನಿಗೆ ಸಕ್ಕುಳನ್ನು ಕೊಟ್ಟು ವಿವಾಹ ಮಾಡುವನು. ವಂಶ ಪಾರಂಪರ‍್ಯವಾಗಿ ಪೂಜೆ ಮಾಡುತ್ತಿದ್ದ ಪಾಂಡುರಂಗನ ಮೂರ್ತಿಯನ್ನೇದಾಮಾಜಿ ಪಂಡಿತ ಬಳುವಳಿಯಾಗಿ ನೀಡಿ ಕಳಿಸುವನು.ಅತ್ತೆ ಮನೆಯಲ್ಲಿ ಸಕ್ಕು ನೋವು, ಕಹಿ ಘಟನೆಗಳನ್ನು ಎದುರಿಸಬೇಕಾಗುವುದು.ಕುಳಿತರೆ, ನಿಂತರೆಅತ್ತೆ-ನಾದಿನಿಯರುಕಾಟಕೊಡಲುಆರಂಭಿಸುವರು.ಈ ಎಲ್ಲಾ ಕಷ್ಟ-ಕಾರ್ಪಣ್ಯಗಳ ನಡುವೆಯೂ ಸಕ್ಕು ಪಾಂಡುರಂಗನ ಸಾನಿಧ್ಯದಲ್ಲಿಆನಂದವನ್ನೇ ಕಾಣುವಳು.ಸ್ವತಃ ಪಾಂಡುರಂಗ ವಿಠಲನೇ ಗಿರಿಜಾಬಾಯಿಯರೂಪ ಧರಿಸಿ ಬಂದು ಸಕ್ಕುಳನ್ನು ಪಂಡರಾಪುರಕ್ಕೆಕರೆದೊಯ್ಯುವುದಲ್ಲದೆ, ಸಕ್ಕುವಿನ ಅತ್ತೆ-ನಾದಿನಿಯರಿಗೆ ಪಾಠ ಕಲಿಸಿ ಮನಃ ಪರಿವರ್ತನೆ ಮಾಡುವನು.ಇದು ‘ಸಂತಸಕ್ಕು‘ ಚಿತ್ರದಕಥೆಯ ಸಾರಾಂಶ.
ಬಿ.ಹನುಮಂತಾಚಾರ್: ಸಂತ ಸಖು ಚಿತ್ರದ ನಾಯಕ ಪಾತ್ರ ಮಾಡಿದ

ಬಿ.ಹನುಮಂತಾಚಾರ್ ೧೯೨೨ರ ಮಾರ್ಚ್ ೨೨ರಂದು ಬಳ್ಳಾರಿಯಲ್ಲಿ ಜನಿಸಿದರು. ವೃತ್ತಿರಂಗಭೂಮಿ ನಟರಾಗಿತಮ್ಮ ವೃತ್ತಿಜೀವನ ಆರಂಭಿಸಿ, ದೇವಕನ್ನಿಕಾಚಿತ್ರದ ಮೂಲಕ ಕನ್ನಡಚಿತ್ರರಂಗಕ್ಕೆ ಪರಿಚಿತರಾದರು.ಸುಮಾರುಐವತ್ತು ಚಿತ್ರಗಳಲ್ಲಿ ಅಭಿನಯಿಸಿರುವ ಆಚಾರ್‌ಯುನಿವಾಕ್ಸ್ ಎಂಬ ವಿಶೇಷ ವಾದ್ಯವನ್ನು ನುಡಿಸುವಲ್ಲಿ ಪರಿಣಿತರಾಗಿದ್ದರು. ಹಿಂದಿ ಚಿತ್ರಗಳಲ್ಲಿ ಈ ವಾದ್ಯವನ್ನು ಬಳಸಲಾಗುತ್ತಿತ್ತು.ಆಚಾರ್ ಮುಂಬೈಗೆ ತೆರಳಿ ವಾದ್ಯ ನುಡಿಸುವುದನ್ನುಕಲಿತು, ವಾದ್ಯವೊಂದನ್ನುಕೊಂಡುತಂದರು.ಭಕ್ತಕನಕದಾಸದಿಂದ ಆರಂಭಿಸಿ, ಹಲವಾರುಕನ್ನಡ ಚಿತ್ರಗಳಿಗೆ ಈ ವಾದ್ಯ ನುಡಿಸಿದರು.ಪ್ರೇಮಮತ್ಸರಇವರುಅಭಿನಯದಕೊನೆಯಚಿತ್ರ.೧೯೮೭ರಲ್ಲಿ ನಿಧನರಾದರು.
ಆರ್.ಕೃಷ್ಣನ್ ಪಂಜು: ಸಂತಸಖುಚಿತ್ರದ ನಿರ್ದೇಶಕರಾದಆರ್.ಕೃಷ್ಣನ್ ೧೯೦೯ರಲ್ಲಿ ಮದರಾಸಿನಲ್ಲಿ ಜನಿಸಿದರು. ಕೊಯಮತ್ತೂರಿನ ಪಕ್ಷಿಷರಾಜ ಸ್ಟುಡಿಯೊದಲ್ಲಿಕಾರ್ಯ ನಿರ್ವಹಿಸಿ ಅನುಭವ ಪಡೆದುಕೊಂಡರು.ಪಂಜು ೧೯೧೫ರಲ್ಲಿ ಕುಂಬಕೋಣಂ ಬಳಿ ಜನಿಸಿದರು.ಬಲರಾಜ್ ಸಹಾನಿ ಅಭಿನಯದ ಬಾಬ್ಬಿ ಹಿಂದಿ ಚಿತ್ರ ಸೇರಿದಂತೆ ಸುಮಾರು ೫೦ಕ್ಕೂ ಹೆಚ್ಚು ಉತ್ತಮ ಚಲನಚಿತ್ರಗಳನ್ನು ಈ ಜೋಡಿ ನಿರ್ದೇಶಿಸಿತು.
ಜಿ.ಗೋವಿಂದರಾಜುಲುನಾಯ್ಡು: ಈ ಚಿತ್ರಕ್ಕೆ ಸಂಗೀತ ನೀಡಿದಜಿ.ಗೋವಿಂದರಾಜುಲು ನಾಯ್ಡುಅವರುಖ್ಯಾತ ಸಂಗೀತ ನಿರ್ದೇಶಕ ಟಿ.ಜಿ.ಲಿಂಗಪ್ಪಅವರತಂದೆ. ಸುಮಾರು ೫೦ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುವ ನಾಯ್ಡು ತಮಿಳು, ತೆಲುಗು ಸೇರಿದಂತೆ ಹಲವಾರು ಮಧುರ ಗೀತೆಗಳನ್ನು ಸೃಷ್ಟಿಸಿದ್ದಾರೆ.

Girl in a jacket
error: Content is protected !!