ಪ್ರಕೃತಿ,ಮಾನವಸಂಘರ್ಷ ಕುರಿತ ಹೊಸ ಚಿತ್ರ

Share

ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಘರ್ಷ ಕುರಿತ ಕತೆಯೊಂದನ್ನು ರಿಷಿಬ್ ಶೆಟ್ಟಿ ಸಿನಿಮಾ ಮಾಡಲಿದ್ದಾರೆ.ಹಾಗಂತ ಟ್ವೀಟ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ.
ಮತ್ತೊಂದು ಹೊಸ ಚಿತ್ರ ಮಾಡುತ್ತಿದ್ದೆನೆ ನಿಮ್ಮ ಪ್ರೀತಿ,ವಿಶ್ವಾಸ ಹಾರೈಕೆ ಹೀಗೆಯೇ ಇರಲಿ ಎಂದು ಅವರು ಕೋರಿಕೊಂಡಿದ್ದಾರೆ
ಕೋವಿಡ್ ಎರಡನೇ ಅಲೆಯ ವೇಳೆ ನನ್ನ ಊರಿನಲ್ಲಿ ನಾನು ಕ್ಯಾಂಪಿಂಗ್ ಮಾಡುವಾಗ ಹೊಳೆದ ಕಥೆ ಇದಾಗಿದೆ, ಶೀಘ್ರದಲ್ಲೆ ಕಥೆಯ ಬಗ್ಗೆ ಅಧಿಕೃತವಾಗಿ ಹೆಚ್ಚಿನ ವಿವರ ಹಂಚಿಕೊಳ್ಳುವೆ ಎಂದು ಹೇಳಿದ್ದಾರೆ.


ದೊಡ್ಡ ಬಜೆಟ್ ಸಿನಿಮಾ ಮಾಡಲು ರಿಷಬ್ ಶೆಟ್ಟಿ ಪ್ಲಾನ್ ಮಾಡಿದ್ದಾರೆ., ಆದರೆ ಪ್ರೊಡಕ್ಷನ್ ಹೌಸ್ ಬಗ್ಗೆ ಅವರು ಮಾಹಿತಿ ನೀಡಿಲ್ಲ. ಅದು ಸರ್ಪೈಸ್ ಎಂದು ರಿಷಬ್ ಶೆಟ್ಟಿ ತಿಳಿಸಿದ್ದಾರೆ. ಸದ್ಯ ರುದ್ರ ಪ್ರಯಾಗ ಮತ್ತು ಕಿರಿಕ್ ಪಾರ್ಟಿ ೨ ಸಿನಿಮಾದಲ್ಲಿ ರಿಷಬ್ ಬ್ಯುಸಿಯಾಗಿದ್ದಾರೆ. ಅದಾದ ನಂತರ ಈ ಸಿನಿಮಾಗಾಗಿ ಸಿದ್ಧತೆ ನಡೆಯಲಿದೆ.
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ನಂತರ ಬಹಳ ಅಂತರ ಉಂಟಾಯಿತು ಎಂದು ನಾನು ರುದ್ರ ಪ್ರಯಾಗ ಘೋಷಿಸಿದೆ, ಅದರೆ ಕೋವಿಡ್ ಕಾರಣದಿಂದ ವಿಳಂಬವಾಗುತ್ತಿದೆ ಎಂದು ಶೆಟ್ಟಿ ತಿಳಿಸಿದ್ದಾರೆ.
ಕಳೆದ ಲಾಕ್ ಡೌನ್ ಸಮಯದಲ್ಲಿ ಈ ಪ್ರಾಜೆಕ್ಟ್ ಬಗ್ಗೆ ಘೋಷಿಸಲಾಯಿತು, ಆದರೆ ಇದುವರೆಗೂ ಸಾಧ್ಯವಾಗಲಿಲ್ಲ, ಎಲ್ಲರೂ ಲಸಿಕೆ ತೆಗೆದುಕೊಳ್ಳಲಿ ಎಂದು ನಾನು ಕಾಯುತ್ತಿದ್ದೇನೆ, ಕಮಿಟ್ ಮೆಂಟ್ ಗಳನ್ನು ಪೂರ್ಣಗೊಳಿಸಿಕೊಳ್ಳಲು ನಾನು ಕಾಯುತ್ತಿದ್ದೇನೆ, ಅವರ ಪ್ರಾಜೆಕ್ಟ್ ಮುಗಿದ ಕೂಡಲೇ ನಾನು ಕಿರಿಕ್ ಪಾರ್ಟಿ-೨ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ್ದಾರೆ.


ಮುಂದಿನ ೨ ತಿಂಗಳುಗಳಲ್ಲಿ ಈ ಪ್ರಾಜೆಕ್ಟ್ ಆರಂಭಿಸಲು ನಿರ್ದರಿಸಿರುವ ರಿಷಭ್ ಶೆಟ್ಟಿ ಕಲಾವಿದರ ಆಯ್ಕೆ ಪೂರ್ಣಗೊಳಿಸಿದ್ದಾರೆ. ಸಂದೇಶ್ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

Girl in a jacket
error: Content is protected !!