ಬೆಂಗಳೂರು,ಜೂ,೦೮ : ಸಿನಿಮಾ ಕ್ಷೇತ್ರವನ್ನೇ ನಂಬಿ ಜೀವಿಸುತ್ತಿದ್ದ ಸಾವಿರಾರು ಕಲಾವಿದರು ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಲಾಕ್ಡೌನ್ನಿಂದ ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದರು ಹೀಗಾಗಿ ಸರ್ಕಾರ ಇಂತವರ ನೆರವಿಗೆ ದಾವಿಸಿದ್ದು ಸಿನಿಮಾ ಕಲಾವಿದರಿಗೆ ೬.೬೦ ಕೋಟಿ ರೂಅನುದಾನ ಬಿಡುಗಡೆ ಮಾಡಿದೆ
ಸಿನಿಮಾ-ಕಿರುತೆರೆಯ ಕಲಾವಿದರು, ತಂತ್ರಜ್ಞರಿಗೆ ತಲಾ ೩ ಸಾವಿರ ರೂಪಾಯಿಯನ್ನು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಸಿನಿಮಾ, ಕಿರುತೆರೆ ಕ್ಷೇತ್ರದ ೨೨ ಸಾವಿರ ಮಂದಿಗೆ ತಲಾ ಮೂರು ಸಾವಿರ ರೂ. ಸಿಗಲಿದೆ. ಸ್ಯಾಂಡಲ್ವುಡ್ನ ಹ್ಯಾಟ್ರಿಕ್ ಹೀರೋ ಸೇರಿದಂತೆ ಕಲಾವಿದರ ತಂಡು ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಮನವಿ ಮಾಡಿದ್ದರು.
ನಟರಾದ ಉಪೇಂದ್ರ, ಸುದೀಪ್, ಹರ್ಷಿತಾ ಪೂಣಚ್ಚ, ಪ್ರಥಮ್ ಸೇರಿದಂತೆ ಹಲವು ನಟನಟಿಯರು ಸಂಕಷ್ಟದಲ್ಲಿರುವ ಕಲಾವಿದರಿಗೆ ಫುಡ್ ಕಿಟ್ ನೀಡಿ ಸಹಾಯ ಮಾಡಿದ್ದರು. ಸರ್ಕಾರ ಪ್ಯಾಕೇಜ್ ಘೋಷಣೆ ಮಾಡುವುದಕ್ಕೂ ಮುನ್ನವೇ ನ್ಯಾಷನಲ್ ಐಕಾನ್, ರಾಕಿಂಗ್ ಸ್ಟಾರ್ ಯಶ್ ತಾವೇ ಚಿತ್ರರಂಗಕ್ಕೆ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ನಟ ಯಶ್ ಚಿತ್ರರಂಗದ ಬರೋಬ್ಬರಿ ೩೨೨೦ಕ್ಕೂ ಹೆಚ್ಚು ಮಂದಿ ಕಾರ್ಮಿಕರು, ತಂತ್ರಜ್ಞರು ಹಾಗೂ ಕಲಾವಿದರಿಗೆ ತಲಾ ಐದು ಸಾವಿರ ರೂಪಾಯಿ ಧನಸಹಾಯ ಮಾಡಲು ಮುಂದಾಗಿದ್ದಾರೆ. ಈ ಕುರಿತು ಈಗಾಗಲೇ ಕಾರ್ಮಿಕರು, ತಂತ್ರಜ್ಞರು ಹಾಗೂ ಕಲಾವಿದರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಸಾರಾ ಗೋವಿಂದು ಹಾಗೂ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ್ ಅವರ ಜೊತೆ ಕುಳಿತು ಚರ್ಚಿಸಿದ್ದಾರೆ. ಎಲ್ಲ ಸದಸ್ಯರ ಅಧಿಕೃತ ಬ್ಯಾಂಕ್ ವಿವರ ತಮಗೆ ಸಿಕ್ಕ ತಕ್ಷಣ ಎಲ್ಲರ ಅಕೌಂಟ್ಗಳಿಗೇ ನೇರವಾಗಿ ಹಣ ಜಮೆ ಮಾಡುವುದಾಗಿ ರಾಕಿಂಗ್ ಸ್ಟಾರ್ ಯಶ್ ತಿಳಿಸಿದ್ದಾರೆ.
ಸಿನಿಮಾ ಕಲಾವಿದರಿಗೆ ೬.೬೦ ಕೋಟಿ ರೂ ಅನುದಾನ ಬಿಡುಗಡೆ
Share