ಸದ್ದಿಲ್ಲದೆ ವಿವಾಹವಾದ ನಟಿ ಯಾಮಿ ಗೌತಮ್

Share

ಕೊರೊನಾ ಲಾಕ್‌ಡೌನ್ ಈ ಸಂದರ್ಭದಲ್ಲಿ ಸದ್ದಿಲ್ಲದೆ ವಿವಾಹಗಳು ನಡೆಯುತ್ತಿವೆ. ಹೌದು ಮೊನ್ನೆ ನಟಿ ಪ್ರಣೀತಾ ವಿವಾಹವಾಗಿದ್ದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು ಈಗ ಉಲ್ಲಾಸ ಉತ್ಸಾಹ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಟಿಸಿದ್ದ ಯಾಮಿ ಗೌತಮ್ ಕೂಡ ಸದ್ದಿಲ್ಲದೆ ಮದುವೆಯಾಗಿದ್ದು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಬಾಲಿವುಡ್‌ನ ‘ಉರಿ’ ಚಿತ್ರಕ್ಕೆ ನಿರ್ದೇಶನ ಮಾಡಿ ಭಾರಿ ಯಶಸ್ಸು ಕಂಡ ನಿರ್ದೇಶಕ ಆದಿತ್ಯ ಧಾರ್ ಜೊತೆ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಯಾಮಿ ಮದುವೆ ಆಗುತ್ತಾರೆ ಎಂಬ ಸುಳಿವು ಕೂಡ ಇರಲಿಲ್ಲ. ಕೆಲವೇ ಕೆಲವರ ಸಮ್ಮುಖದಲ್ಲಿ ವಿವಾಹ ಸಮಾರಂಭ ನೆರವೇರಿದೆ. ಈ ಹೊಸ ಜೋಡಿ ತಮ್ಮ ಮದುವೆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಬಳಿಕವೇ ವಿಷಯ ಬಹಿರಂಗ ಆಗಿದೆ.
ಸೆಲೆಬ್ರಿಟಿಗಳ ವಿವಾಹ ಎಂದರೆ ಅದ್ದೂರಿಯಾಗಿ ನಡೆಯುವುದು ಸಹಜ. ಆದರೆ ದೇಶಾದ್ಯಂತ ಕೊವಿಡ್ ಹಾವಳಿ ಹೆಚ್ಚಿರುವುದರಿಂದ ಎಲ್ಲರೂ ಸಿಂಪಲ್ ಆಗಿ ಮದುವೆ ಆಗುತ್ತಿದ್ದಾರೆ. ಯಾಮಿ ಗೌತಮ್ ಮತ್ತು ಆದಿತ್ಯ ಧಾರ್ ಕೂಡ ಅದೇ ಹಾದಿ ತುಳಿದಿದ್ದಾರೆ. ೨೦೧೯ರಲ್ಲಿ ತೆರೆಕಂಡ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾ ದೊಡ್ಡ ಹಿಟ್ ಆಯಿತು. ಆ ಚಿತ್ರದಿಂದ ಆದಿತ್ಯ ಧಾರ್ ಅವರ ಜನಪ್ರಿಯತೆ ಹೆಚ್ಚಿತು. ವಿಕ್ಕಿ ಕೌಶಾಲ್ ನಾಯಕನಾಗಿದ್ದ ಆ ಚಿತ್ರದಲ್ಲಿ ಯಾಮಿ ಗೌತಮ್ ಅವರು ರಾ ಏಜೆಂಟ್ ಪಾತ್ರ ಮಾಡಿದ್ದರು. ಆಗಲೇ ಆದಿತ್ಯ ಮತ್ತು ಯಾಮಿ ನಡುವೆ ಗೆಳೆತನ ಬೆಳೆದಿತ್ತು. ಈಗ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ
ಕನ್ನಡದಲ್ಲಿ ‘ಉಲ್ಲಾಸ ಉತ್ಸಾಹ’ ಸಿನಿಮಾ ಮಾಡಿದ ಬಳಿಕ ಬೇರೆ ಬೇರೆ ಭಾಷೆಗಳಿಂದ ಯಾಮಿ ಗೌತಮ್ ಅವರಿಗೆ ಆಫರ್‌ಗಳು ಬರಲಾರಂಭಿಸಿದವು. ಸದ್ಯ ಅವರು ಹಿಂದಿಯ ‘ಭೂತ್ ಪೊಲೀಸ್’ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ನಟಿ ಪ್ರಣಿತಾ ಕೂಡ ಇದೇ ರೀತಿ ಗುಟ್ಟಾಗಿ ಮದುವೆ ಆಗಿದ್ದರು

Girl in a jacket
error: Content is protected !!