ಲಾಸ್ ಎಂಜಲೀಸ್ ಸನ್ ಫಿಲ್ಮ್ ಪೆಸ್ಟ್ ಪ್ರಶಸ್ತಿ ಪಡೆದ ‘ಅಮೃತಮತಿ

Share

ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದ ‘ಅಮೃತಮತಿ ಚಿತ್ರ್ರ
ಅಂತರಾಷ್ಟ್ರೀಯಮಟ್ಟದಲ್ಲಿ ಪ್ರದರ್ಶನಗೊಂಡ ಹೆಗ್ಗಳಿಕೆಗೆ ಪಾತ್ರವಾಗಿದ್ದು ಈಗ ಲಾಸ್ ಏಂಜಲೀಸ್ ಸನ್ ಫೀಲ್ಮ್ ಫೆಸ್ಟ್‌ನಲ್ಲಿ ಈ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಪತ್ರವಾಗಿದೆ.
ನಟಿ ಹರಿಪ್ರಿಯ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರವು ಸಾಕಷ್ಟು ಅಂತರಾಷಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಅನೇಕ ಪ್ರಶಸ್ತಿಗಳನ್ನು ಗಳಿಸಿಕೊಂಡಿದೆ.


ಈ ಚಿತ್ರಕ್ಕೆ ಅಟ್ಲಾಂಟಾ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರಶಸ್ತಿ ಲಭಿಸಿತ್ತು, ಈ ಬಾರಿ ಲಾಸ್ ಏಂಜಲೀಸ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ಚಿತ್ರಕಥೆ ವಿಭಾಗಗಳಲ್ಲಿ ಪ್ರಶಸ್ತಿ ಗಳಿಸಿದೆ.
ಜನ್ನನ ಯಶೋಧರ ಚರಿತೆ ಕಥೆಯಾಧಾರಿತ ಚಿತ್ರ ಇದಾಗಲೇ ಹತ್ತು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿದೆ. ಇಂಚರ ಪುಟ್ಟಣ್ಣ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಪುಟ್ಟಣ್ಣ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಕೊರೋನಾ ಸಂಕಷ್ಟ ಕಳೆದ ಮೇಲೆ ಅಮೃತಮತಿ ಸಿನಿಮಾ ದೇಶಾದ್ಯಂತ ಪ್ರದರ್ಶನ ಕಾಣಲಿದೆ ಎಂದು ನಿರ್ದೇಶಕ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

Girl in a jacket
error: Content is protected !!