ರಾಷ್ಟ್ರಪತಿ ಪ್ರಶಸ್ತಿಗೆ ಭಾಜನವಾದರಾಜಕುಮಾರ್‌ಅಭಿನಯದಜಗಜ್ಯೋತಿ ಬಸವೇಶ್ವರ

Share


ರಾಷ್ಟ್ರಪತಿ ಪ್ರಶಸ್ತಿಗೆ ಭಾಜನವಾದರಾಜಕುಮಾರ್‌ಅಭಿನಯದಜಗಜ್ಯೋತಿ ಬಸವೇಶ್ವರ

ಶಶಿಕಲಾ ಚಿತ್ರ ಲಾಂಛನದಲ್ಲಿಐತಿಹಾಸಿಕ ಕಪ್ಪು-ಬಿಳುಪು ಚಿತ್ರಜಗಜ್ಯೋತಿ ಬಸವೇಶ್ವರ ೧೯೫೯ರಲ್ಲಿ ತೆರೆಗೆ ಬಂದಿತು. ಟಿ.ವಿ.ಸಿಂಗ್ ಠಾಕೂರ್ ನಿರ್ದೇಶನದಚಿತ್ರಕ್ಕೆ ಜಿ.ವಿ. ಅಯ್ಯರ್ ಹಾಗೂ ಭಗವಾನ್ ಸಹಾಯಕ ನಿರ್ದೇಶಕರಾಗಿಕಾರ್ಯನಿರ್ವಹಿಸಿದರು.ಈ ಚಿತ್ರ ರಾಷ್ಟ್ರಪತಿಗಳ ಅರ್ಹತಾಪತ್ರ ಪ್ರಶಸ್ತಿಗೆ ಭಾಜನವಾಯಿತು.ದೊರೆ ಭಗವಾನ್‌ಖ್ಯಾತಿಯ ಭಗವಾನ್ ಈ ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾಗಿಚಿತ್ರರಂಗ ಪ್ರವೇಶಿಸಿದರು.

ಹೊನ್ನಪ್ಪ ಭಾಗವತರ್, ರಾಜಕುಮಾರ್, ಅನಿಲ್‌ಕುಮಾರ್, ಚಿ.ಉದಯಶಂಕರ್, ಚಂದ್ರಯ್ಯಸ್ವಾಮಿ, ಕೆ.ಎಸ್.ಅಶ್ವತ್, ಬಿ.ಸರೋಜಾದೇವಿ, ಟಿ.ಎನ್.ಬಾಲಕೃಷ್ಣ, ಜಿ.ವಿ.ಅಯ್ಯರ್, ಸಂಧ್ಯಾ, ಲೀಲಾವತಿ, ಚಿ.ಸದಾಶಿವಯ್ಯ, ನರಸಿಂಹರಾಜು, ಹೆಚ್.ರಾಮಚಂದ್ರಶಾಸ್ತ್ರಿ, ಈಶ್ವರಪ್ಪ, ವೀರಭದ್ರಪ್ಪ, ವೆಂಕಟಸುಬ್ಬಯ್ಯ, ಆರ್.ಎನ್.ಮಾಗಡಿ, ಹುಲಿಮನೆಸೀತಾರಾಮಶಾಸ್ತ್ರಿ, ಸಿದ್ದಯ್ಯಸ್ವಾಮಿ, ಪದ್ಮಿನಿ ಪ್ರಿಯದರ್ಶಿನಿ, ಆದವಾನಿ ಲಕ್ಷ್ಮಿದೇವಿ, ಎಂ.ಎನ್.ಲಕ್ಷ್ಮೀದೇವಿ, ರಮಾದೇವಿ, ಜಯಶ್ರೀ, ಇಂದ್ರಾಣಿ, ಸುನಿತಾರಾಯ್, ಬೇಬಿ ಉಮಾ ಅಭಿನಯಿಸಿದರು.

ನಂ. ನಂಜಪ್ಪ ಬರೆದ ಕಥೆಯನ್ನಾಧರಿಸಿ, ಜಿ.ವಿ.ಅಯ್ಯರ್‌ಚಿತ್ರಕಥೆ ಹಾಗೂ ಸಂಭಾಷಣೆ ರಚಿಸಿದರು. ಬಸವಣ್ಣನವರ ವಚನಗಳನ್ನು ಚಿತ್ರದಲ್ಲಿ ಹೇರಳವಾಗಿ ಬಳಸಿಕೊಳ್ಳಲಾಗಿತ್ತು. ನಂ.ನಂಜಪ್ಪ ರಚಿಸಿದ ಕೆಲವು ಗೀತೆಗಳನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿತ್ತು. ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನ ಮಾಡಿದ್ದು, ಹೊನ್ನಪ್ಪ ಭಾಗವತರ್, ಪಿ.ಕಾಳಿಂಗರಾವ್, ಸೂಲಮಂಗಲಂ ರಾಜಲಕ್ಷ್ಮಿ, ಮೋಹನಕುಮಾರಿ, ನಾಗರತ್ನ ಗೀತೆಗಳನ್ನು ಹಾಡಿದ್ದಾರೆ.

ಎನ್.ಸಿ.ರಾಜನ್ ಮತ್ತು ವೆಂಕಟರಾಮ್ ಸಂಕಲನ, ಬಿ.ದೊರೈರಾಜ್‌ಛಾಯಾಗ್ರಹಣ, ಆರ್.ಬಿ.ಎಸ್. ಮಣಿ ಕಲೆ, ಛೋಪ್ರಾ ನೃತ್ಯ ನಿರ್ದೇಶನ, ದೊರೆಸ್ವಾಮಿ ಹಾಗೂ ಮಾಧವಯ್ಯ ಪ್ರಸಾಧನವನ್ನುಚಿತ್ರ ಹೊಂದಿದೆ. ಕಳಬೇಡ ಕೊಲಬೇಡ…’, ’ನೀನೊಲಿದರೆಕೊರಡುಕೊನರುವದಯ್ಯ…’. ’ದಯವಿಲ್ಲದಾಧರ್ಮವುಆವುದಯ್ಯ…’, ’ಗಿಳಿಯೋದಿ ಫಲವೇನು ?…’ ಮುಂತಾದ ಬಸವಣ್ಣನವರ ಪ್ರಸಿದ್ಧ ವಚನಗಳನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ.

ಬಸವಣ್ಣನನವರಜೀವನ, ತತ್ತ್ವ, ಸಂದೇಶಗಳನ್ನಾಧರಿಸಿದ ಮೊದಲ ಚಿತ್ರಇದಾಯಿತು.ಅದಕ್ಕೂ ಮುನ್ನ ಸುಬೋಧಚಿತ್ರ ಸಂಸ್ಥೆ ’ಭಗವಾನ್ ಬಸವೇಶ್ವರ‘ಚಿತ್ರತಯಾರಿಸಲು ಸಿದ್ಧತೆ ನಡೆಸಿತ್ತು. ಹೈಕೋರ್ಟ್ ವಕೀಲರಾಗಿದ್ದಎನ್.ರುದ್ರಪ್ಪ ಈ ಸಂಸ್ಥೆಯಅಧ್ಯಕ್ಷರಾಗಿದ್ದರು. ಗುರುಮಠಕಲ್‌ಖಾಸಾಮಠದ ನಿರಂಜನ ಶಾಂತವೀರಸ್ವಾಮಿಅವರುಕನ್ನಡ ಚಿತ್ರಗಳ ಅವನತಿಯ ಬಗ್ಗೆ ಬಹುವಾಗಿ ಮರುಕಗೊಂಡು ಈ ಪ್ರಯತ್ನಕ್ಕೆ ನೆರವು ನೀಡಲು ಉದ್ದೇಶಿಸಿ ವ್ಯಾಕರಣತೀರ್ಥಚಂದ್ರಶೇಖರಶಾಸ್ತ್ರಿಗಳೊಂದಿಗೆ ಸಂಸ್ಥೆಯಉಸ್ತುವಾರಿವಹಿಸಲು ಸಮ್ಮತಿಸಿದ್ದರು.ಎಸ್.ಎಸ್.ವೈದ್ಯ ಸಂಚಾಲಕರಾಗಿದ್ದರು.ಆದರೂಚಿತ್ರತಯಾರಾಗಲಿಲ್ಲ. ನಂತರ ವಿಶ್ವಕಲಾಚಿತ್ರ ಸಂಸ್ಥೆಯ ವಿಶ್ವನಾಥಶೆಟ್ಟಿಅವರು ’ಜಗಜ್ಯೋತಿ ಬಸವೇಶ್ವರ’ ಚಿತ್ರದತಯಾರಿಕೆಯನ್ನು ಪ್ರಾರಂಭಿಸಿದರು.ಅದೇ ವೇಳೆಗೆ ಗುಬ್ಬಿಕರ್ನಾಟಕ ಫಿಲಂಸ್‌ಕೂಡ ಬಸವೇಶ್ವರಚಿತ್ರವನ್ನುತಯಾರಿಸುವುದಾಗಿ ಪ್ರಕಟಿಸಿತ್ತು.ಇದುಆತಂಕಕ್ಕೆಕಾರಣವಾಗಿತ್ತು. ಕೊನೆಗೆ ವಿಶ್ವನಾಥಶೆಟ್ಟರೇಚಿತ್ರದ ನಿರ್ಮಾಣವನ್ನು ಆರಂಭಿಸಿದರು.

ಬಸವೇಶ್ವರನ ಪಾತ್ರಕ್ಕೆ ಹೊನ್ನಪ್ಪ ಭಾಗವತರ್‌ಅವರನ್ನೂ, ಬಿಜ್ಜಳನ ಪಾತ್ರಕ್ಕೆರಾಜಕುಮಾರ್‌ಅವರನ್ನೂಆಯ್ಕೆ ಮಾಡಲಾಯಿತು.ಚಿತ್ರದಲ್ಲಿ ಸುಮಾರು ೨೦ಕ್ಕೂ ಹೆಚ್ಚು ಪ್ರಮುಖ ಪಾತ್ರಗಳಿದ್ದವು. ಪ್ರಸಿದ್ಧ ರಂಗಭೂಮಿನಟ ಹುಲಿಮನೆ ಸೀತಾರಾಮಶಾಸ್ತ್ರಿಗಳನ್ನೂ ಕರೆತರಲಾಗಿತ್ತು.ಚಿತ್ರತಯಾರಿಕೆ ಸಮಯದಲ್ಲಿ ಹಣದಅಡಚಣೆಯಾಗಿ, ವಿಶ್ವನಾಥಶೆಟ್ಟಿಅವರುತಮ್ಮತಮ್ಮನಿಂದ ಹಣಪಡೆದುಚಿತ್ರೀಕರಣಮುಂದುವರೆಸಿದರು. ವಿಶ್ವಕಲಾಚಿತ್ರಬ್ಯಾನರನ್ನುಶಶಿಕಲಾ ಚಿತ್ರಎಂದು ಬದಲಾಯಿಸಬೇಕಾಯಿತು.ಕಲ್ಯಾಣನಗರ, ಅದರ ಹೊರವಲಯದ ಗುಡಿಸಲುಗಳು, ಅಸ್ಪೃಶ್ಯರಕೇರಿಇವಕ್ಕೆಲ್ಲ ಸೊಗಸಾಗಿ ಸೆಟ್‌ಗಳನ್ನು ಹಾಕಲಾಗಿತ್ತು.ಜೆಮಿನಿ ಸ್ಟುಡಿಯೋದ ಶ್ರೀಮಂತ ಫ್ಲೋರ್‌ಗಳಲ್ಲಿ ಮಾತ್ರವಲ್ಲದೆ, ವಾಹಿನಿ, ರೇವತಿ, ಶ್ಯಾಮಲಾ ಸ್ಟುಡಿಯೊಗಳಲ್ಲಿಯೂ ಚಿತ್ರೀಕರಣ ನಡೆಯಿತು. ಮುಖ್ಯವಾಗಿ ಬಸವಣ್ಣನನವರು ನೆಲೆಸಿದ್ದ ಕಲ್ಯಾಣ, ಕೂಡಲ ಸಂಗಮ ಮುಂತಾದಕಡೆ ಹೋರಾಂಗಣಚಿತ್ರೀಕರಣ ಮಾಡಿದ್ದು ವಿಶೇಷವೆನಿಸಿತು.

ಶೀರ್ಷಿಕೆಯೆ ಹೇಳುವ ಹಾಗೆ ಈ ಚಲನಚಿತ್ರ ಬಸವಣ್ಣನವರಜೀವನಚರಿತ್ರೆಯನ್ನು ಸಾದರಪಡಿಸುತ್ತದೆ.ದೈವ ಸಂಭೂತಜನ್ಮದಿಂದ ಶುರುವಾಗಿ, ಲಿಂಗೈಕ್ಯವಾಗುವವರೆಗೂ ಬಸವಣ್ಣನವರಜೀವನಚರಿತ್ರೆಯನ್ನುಕಟ್ಟಿಕೊಡುವ ಈ ಚಿತ್ರ ಬಹಳ ವಿಶೇಷವಾಗಿ ಅವರನ್ನುವಚನಕಾರನನ್ನಾಗಿಬಿಂಬಿಸಿದೆ.ವಚನ, ಸಂಗೀತಮತ್ತು ಮಹಿಳೆಯ ನಡುವೆ ಅವಿನಾಭಾವ ಸಂಬಂಧವನ್ನು ಈ ಚಿತ್ರ ಸ್ಥಾಪಿಸಿದೆ.ಚಿತ್ರದಒಂದುದೃಶ್ಯದಲ್ಲಿ ಬಸವಣ್ಣ ವಚನ ಬರೆಯುತ್ತಿರುವಾಗಅಲ್ಲಿಗೆ ಬಂದ ಗಂಗಾಂಬಿಕೆ ವಚನವನ್ನುಓದಿದ್ದಲ್ಲದೆಅಲ್ಲಿಯೇ ಹಾಡಿ ಬಸವಣ್ಣನವರ ಪ್ರಶಂಸೆಗೆ ಒಳಗಾಗುತ್ತಾಳೆ.

 

Girl in a jacket
error: Content is protected !!