ಭೂದಾನಚಿತ್ರದಲ್ಲಿರಾಜಕುಮಾರ್‌ತಂದೆ, ಉದಯಕುಮಾರ್ ಮತ್ತುಕಲ್ಯಾಣಕುಮಾರ್ ಮಕ್ಕಳು

Share

 


ಭೂದಾನಚಿತ್ರದಲ್ಲಿರಾಜಕುಮಾರ್‌ತಂದೆ,
ಉದಯಕುಮಾರ್ ಮತ್ತುಕಲ್ಯಾಣಕುಮಾರ್ ಮಕ್ಕಳು

ರಾಜಕುಮಾರ್, ಕಲ್ಯಾಣಕುಮಾರ್ ಹಾಗೂ ಉದಯಕುಮಾರ್ ಮೂರೂ ಮಂದಿ ನಾಯಕ ನಟರು ಪೂರ್ಣ ಪ್ರಮಾಣದಲ್ಲಿಒಂದೇಚಿತ್ರದಲ್ಲಿಅಭಿನಯಿಸಿದ ಭೂದಾನ ಕಪ್ಪುಬಿಳುಪು ಸಾಮಾಜಿಕಕಥಾ ಹಂದರದಚಿತ್ರಅನಂತಲಕ್ಷ್ಮೀ ಪಿಕ್ಚರ್ ಲಾಂಛನದಲ್ಲಿ೧೯೬೨ರಲ್ಲಿತೆರೆಕಂಡಿತು. ಪಿ.ಎನ್.ಗೋಪಾಲಕೃಷ್ಣ ಹಾಗೂ ಜಿ.ವಿ.ಅಯ್ಯರ್‌ಜಂಟಿಯಾಗಿ ನಿರ್ಮಾಣ ಮಾಡಿದ ಈ ಚಿತ್ರವನ್ನು ಮೊದಲ ಬಾರಿಗೆ ಜಿ.ವಿ.ಅಯ್ಯರ್ ನಿರ್ದೇಶಿಸಿದರಲ್ಲದೆ, ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತೆಗಳನ್ನು ರಚಿಸಿದರು. ಎಸ್.ಕೆ.ಭಗವಾನ್ ಹಾಗೂ ರಾಮಚಂದ್ರ ಸಹಾಯಕ ನಿರ್ದೇಶಕರಾಗಿಕಾರ್ಯನಿರ್ವಹಿಸಿದರು.

ಉಳಿದಂತೆ ಅಶ್ವತ್, ನರಸಿಂಹರಾಜು, ಬಾಲಕೃಷ್ಣ, ಹೆಚ್.ರಾಮಚಂದ್ರಶಾಸ್ತ್ರಿ, ಲೀಲಾವತಿ, ಆದವಾನಿ ಲಕ್ಷ್ಮಿದೇವಿ ಮುಂತಾದವರುಅಭಿನಯಿಸಿದರು.ಜಿ.ಕೆ.ವೆಂಕಟೇಶ್ ಸಂಗೀತ ನೀಡಿದಚಿತ್ರದಲ್ಲಿ ಪುರಂದರದಾಸರಭಾಗ್ಯಾದ ಲಕ್ಷ್ಮಿ ಬಾರಮ್ಮಜನಪ್ರಿಯಕೃತಿಯೂ ಸೇರಿದಂತೆ ೬ ಹಾಡುಗಳನ್ನು ಅಳವಡಿಸಿದ್ದು, ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ, ಜಿ.ಕೆ.ವೆಂಕಟೇಶ್, ರಾಧಾಜಯಲಕ್ಷ್ಮಿ ಗೀತೆಗಳನ್ನು ಹಾಡಿದ್ದಾರೆ. ಎನ್.ಸಿ.ರಾಜನ್ ಸಂಕಲನ, ಬಿ.ದೊರೈರಾಜ್‌ಛಾಯಾಗ್ರಹಣಇರುವಚಿತ್ರ ಮದರಾಸಿನ ಮೆಜೆಸ್ಟಿಕ್ ಸ್ಟುಡಿಯೊದಲ್ಲಿಚಿತ್ರೀಕರಣವಾಯಿತು.ಚಿತ್ರ ನಿರ್ಮಾಣಕಾರ್ಯದಲ್ಲಿ ಬಿ.ಆರ್.ಪಂತುಲುಅವರು ಸಾಕಷ್ಟು ನೆರವು ನೀಡಿದ್ದುಅವರಿಗೆಚಿತ್ರದಆರಂಭದಲ್ಲಿಆಭಾರ ಮನ್ನಣೆ ಸಲ್ಲಿಸಲಾಗಿದೆ.

ವಿನೋಬಾ ಭಾವೆಯವರ ಭೂದಾನ ಚಳವಳಿಯಿಂದ ಪ್ರೇರಣೆಗೊಂಡು ತಯಾರಿಸಿದ ಚಿತ್ರಇದಾಗಿದ್ದು, ಕಥೆಗಾರ ಜಿ.ವಿ.ಅಯ್ಯರ್‌ಅವರಿಗೆ ವಿನೋಬಾ ಭಾವೆಅವರ ಚಳವಳಿ ಹಾಗೂ ಶಿವರಾಮ ಕಾರಂತರಚೋಮನದುಡಿಕಾದಂಬರಿಕಥೆರಚಿಸಲು ಪ್ರೇರಣೆ ನಿಡಿತು. ನಾಯಕ ನಟರಾಗಿಜನಪ್ರಿಯರಾಗಿದ್ದರಾಜಕುಮಾರ್ ಈ ಚಿತ್ರ’ದಲ್ಲಿತಂದೆಯಾಗಿ ಅಭಿನಯಿಸಿದ್ದು, ಉದಯಕುಮಾರ್ ಮತ್ತುಕಲ್ಯಾಣಕುಮಾರ್ ಮಕ್ಕಳಾಗಿ ಅಭಿನಯಿಸಿರುವುದು ಒಂದು ವಿಶೇಷ. ಇದೇರೀತಿ ಮಹಬೂಬ್‌ಅವರಮದರ್‌ಇಂಡಿಯಾ’ ಹಿಂದಿ ಚಿತ್ರದಲ್ಲಿ ಅಂದಿನ ಖ್ಯಾತತಾರೆ ನರ್ಗಿಸ್‌ಅವರುರಾಜೇಂದ್ರಕುಮಾರ್ ಮತ್ತು ಸುನಿಲ್‌ದತ್‌ಅವರತಾಯಿಯ ಪಾತ್ರದಲ್ಲಿ ಅಭಿನಯಿಸಿದ್ದರು. ’ಭೂದಾನ’ ತಮಿಳಿನಲ್ಲಿ ’ಪಳನಿ’ ಹೆಸರಿನಿಂದರೀಮೇಕ್‌ಆಯಿತು.ಶಿವಾಜಿ ಗಣೇಶನ್, ಎಸ್.ಎಸ್.ರಾಜೇಂದ್ರನ್ ಮತ್ತು ಶ್ರೀರಾಮ್ ಕುಮಾರತ್ರಯರ ಪಾತ್ರಗಳಲ್ಲಿದ್ದರು.

ಲಕ್ಷ್ಮೀಪತಿ ಶ್ರೀಮಂತ ಜಮೀನ್ದಾರ ಮಹಾಸ್ವಾರ್ಥಿ.ಈತನ ಬಳಿ ದಾಸಣ್ಣ ಹಾಗೂ ಪುತ್ರರಾದರಾಮ ಮತ್ತು ಲಕ್ಷ್ಮಣ ಜೀತದಾಳುಗಳಾಗಿ ದುಡಿಯುತ್ತಿರುತ್ತಾರೆ.ಇವರಿಗೆ ಸ್ವಂತ ಭೂಮಿ ಹೊಂದುವ ಆಸೆ. ತುಂಡು ಭೂಮಿ ನೀಡುವಂತೆದಾಸಣ್ಣ ಮಾಲೀಕರಲ್ಲಿ ಮನವಿ ಮಾಡುತ್ತಾನೆ. ಜಮೀನ್ದಾರ ಹುಸಿ ಭರವಸೆ ನೀಡುತ್ತಾನೆ. ಭೂದಾನ ಚಳವಳಿ ಆರಂಭಗೊಂಡುಕಾರ್ಯಕರ್ತರು ಹಳ್ಳಿಗೆ ಬಂದಾಗ ಲಕ್ಷ್ಮೀಪತಿಐದುಎಕರೆ ಭೂಮಿದಾನ ನೀಡುತ್ತಾನೆ. ಕಾರ್ಯಕರ್ತರುಈ ಭೂಮಿಯನ್ನುದಾಸಣ್ಣನಿಗೆ ನೀಡುತ್ತಾರೆ.ದಾಸಣ್ಣ ಹಾಗೂ ಮಕ್ಕಳು ಶ್ರಮವಹಿಸಿ ಈ ಭೂಮಿಯಲ್ಲಿ ಫಲವತ್ತಾದ ಬೆಳೆ ಬೆಳೆದಾಗ ಲಕ್ಷ್ಮೀಪತಿಗೆಅಸೂಯೆಉಂಟಾಗುತ್ತದೆ.ಪತ್ನಿಯ ಬಲವಂತಕ್ಕೆ ಮಣಿದು ಲಕ್ಷ್ಮೀಪತಿ ಭೂಮಿಯನ್ನುದಾಸಣ್ಣನಿಂದ ಮರಳಿ ಪಡೆಯುತ್ತಾನೆ. ದಾಸಣ್ಣ ಹುಚ್ಚನಾಗುತ್ತಾನೆ. ರಾಮ, ಲಕ್ಷ್ಮಣರು ಮತಾಂತರಗೊಳ್ಳುತ್ತಾರೆ.

ಕರೀಂಖಾನ್‌ಗೀತೆ ರಚಿಸಿದ ಸ್ವರ್ಣಗೌರಿ: ಶ್ಯಾಮಪ್ರಸಾದ್ ಮೂವೀಸ್ ಲಾಂಛನದಲ್ಲಿ ಡಿ.ಆರ್.ನಾಯ್ಡು ನಿರ್ಮಾಣ ಮಾಡಿದ ಸ್ವರ್ಣಗೌರಿಕಪ್ಪು ಬಿಳುಪು ಭಕ್ತಿಪ್ರಧಾನಚಿತ್ರ ೧೯೬೨ರಲ್ಲಿ ತೆರೆಕಂಡಿತು. ವೈ.ಆರ್.ಸ್ವಾಮಿ ನಿದೇಶನ ಮಾಡಿದ ಈ ಚಿತ್ರಕ್ಕಾಗಿಅವರೇಚಿತ್ರಕಥೆ ರಚಿಸಿದ್ದು, ಕಥೆ, ಸಂಭಾಷಣೆ ಹಾಗೂ ಹಾಡುಗಳನ್ನು ಸಾಹಿತಿಎಸ್.ಕೆ.ಕರೀಂಖಾನ್ ಬರೆದಿದ್ದಾರೆ.ಚಿತ್ರದಲ್ಲಿರಾಜಕುಮಾರ್ ಕಾಳಿಂಗನ ಪಾತ್ರ ನಿರ್ವಹಿಸಿದ್ದು, ಮಾಲಿನಿಯಾಗಿ ರಾಜಶ್ರೀ ಹಾಗೂ ಗೌರಿಯಾಗಿಕೃಷ್ಣಕುಮಾರಿ ಅಭಿನಯಿಸಿದ್ದಾರೆ. ತೆಲುಗು ನಟ ಸತ್ಯನಾರಾಯಣ ಶಿವನಾಗಿ ಹಾಗೂ ಸಂಧ್ಯಾ ಪಾರ್ವತಿಯಾಗಿ ನಟಿಸಿದ್ದಾರೆ. ಕೆ.ಎಸ್.ಅಶ್ವತ್ ನಾರದನಾಗಿ ನರಸಿಂಹರಾಜು (ಗಣಪತಿಯಾಗಿ ಅಭಿನಯಿಸಿದ್ದಾರೆ.ಗಣಪತಿಭಟ್, ಉದಯಕುಮಾರ್, ರಾಮಚಂದ್ರಶಾಸ್ತ್ರಿ, ಸೋರಟ್‌ಅಶ್ವತ್, ಜಯಶ್ರೀ, ರಮಾದೇವಿ, ಜಯಾ, ವಾದಿರಾಜ್ ಪಾತ್ರವರ್ಗದಲ್ಲಿದ್ದಾರೆ. ಎಂ.ವೆಂಕಟರಾಜು ಸಂಗೀತ ನಿರ್ದೇಶನ ಮಾಡಿದ್ದು, ಕರೀಂರಚನೆಯಶಿವಗುಣ ಸಂಕೀರ್ತನಾ, ನಟವರಗಂಗಾಧರಉಮಾಶಂಕರ ಮುಂತಾದ ೫ ಹಾಡುಗಳನ್ನು ಎಸ್.ಜಾನಕಿ, ಪಿ.ಬಿ.ಶ್ರೀನಿವಾಸ್, ಬಾಲಮುರುಳಿಕೃಷ್ಣ, ಚಿತ್ತರಂಜನ್ ಹಾಡಿದ್ದಾರೆ. ಆರ್.ಮಧುಛಾಯಾಗ್ರಹಣ, ವೇಣುಗೋಪಾಲ್ ನೃತ್ಯ ನಿರ್ದೇಶನ, ಎಸ್.ಕೃಷ್ಣ ಹಾಗೂ ಭೋಜರಾಜು ಸಂಕಲನ ಚಿತ್ರಕ್ಕಿದ್ದು, ೩೮೯೫ ಮೀಟರ್‌ಉದ್ದದ ಹಾಗೂ ೧೭ ರೀಲ್ ಒಳಗೊಂಡಿತ್ತು.

 

Girl in a jacket
error: Content is protected !!