ಬಿಗ್ ಬಾಸ್ ಸೀಸನ್ 11 ರ ವಿಜೇತ ಹನುಮಂತ

Share

ಬಿಗ್ ಬಾಸ್ ಸೀಸನ್ 11 ರ ವಿಜೇತ ಹನುಮಂತ

ಬಿಗ್‌ಬಾಸ್‌ ಕನ್ನಡ ಸೀಸನ್ 11ರಲ್ಲಿ ಗಾಯಕ ಹನುಮಂತ ಲಮಾಣಿ ಅವರು ವಿಜೇತರಾಗಿದ್ದಾರೆ. ಇದರೊಂದಿಗೆ ಕರ್ನಾಟಕದ ಕೋಟಿ ಕೋಟಿ ಜನರ ಆಸೆ ಈಡೇರಿದೆ. 52389318 ಮತಗಳನ್ನು ಪಡೆದು ಹನುಮಂತ ಗೆದ್ದು ಬೀಗಿದ್ದಾರೆ. ಕುರಿಗಾಯಿ ಹನುಮಂತ ಗೆಲ್ಲಬೇಕು ಎನ್ನುವುದು ಕನ್ನಡಿಗರ ಮನದಾಳದ ಮಾತಾಗಿತ್ತು. ಕೊನೆಗೂ ಹನುಮಂತನಿಗೆ ಜಯ ಸಿಕ್ಕಿದೆ.

ಹೌದು…. ಕಿಚ್ಚ ಸುದೀಪ್ ಅವರು ಹನುಮಂತ ಈ ಬಾರಿ ವಿಜೇತ ಎಂದು ವೇದಿಕೆ ಮೇಲೆ ಘೋಷಣೆ ಮಾಡಿದರು. ಈ ಫಲಿತಾಂಶ ಎಲ್ಲರ ನಿರೀಕ್ಷೆಯ ಫಲಿತಾಂಶವಾಗಿದೆ. ಇನ್ನೂ ತ್ರಿವಿಕ್ರಮ್ ಅವರು ಬಿಗ್‌ಬಾಸ್‌ ಕನ್ನಡ ಸೀಸನ್ 11ರ ರನ್ನರ್ ಅಪ್ ಆಗಿದ್ದಾರೆ. ತ್ರಿವಿಕ್ರಮ್ ಹಾಗೂ ಹನುಮಂತನ ಕೈ ಹಿಡಿದ ಕಿಚ್ಚಾ ಸುದೀಪ್ ಅವರು ಕೊನೆಯ ಕ್ಷಣದಲ್ಲಿ ಹನುಮಂತನ ಕೈ ಮೇಲೆತ್ತುವ ಮೂಲಕ ಹನುಮಂತನಿಗೆ ಅಭಿನಂದನೆ ತಿಳಿಸಿದ್ದಾರೆ. ಹನುಮಂತನ ಕೈಗೆ ಟ್ರೋಫಿ ನೀಡಿದ್ದಾರೆ.
ಟಾಪ್ ಐವರ ಪೈಕಿ ಮೊದಲಿಗೆ ಉಗ್ರಂ ಮಂಜು ಹೊರಹೋಗಿದ್ದರು. ಬಿಗ್ ಬಾಸ್ ಆರಂಭದಲ್ಲಿ ಉಗ್ರಂ ಮಂಜು ಉತ್ತಮವಾಗಿ ಆಡುತ್ತಿದ್ದು ಟ್ರೋಫಿ ಗೆಲ್ಲುವ ಭರವಸೆ ಮೂಡಿಸಿದ್ದರು. ಆದರೆ ವೈಲ್ಡ್ ಕಾರ್ಡ್ ಮೂಲಕ ಹನುಮಂತ ಮತ್ತು ರಜತ್ ಎಂಟ್ರಿ ನಂತರ ಮಂಜು ಉತ್ಸಾಹ ಕಳೆದುಕೊಂಡಿದ್ದರು. ಬರಬರುತ್ತಾ ಅವರ ಆಟ ಮಂಕಾಯಿತು. ಇನ್ನು ಟಾಪ್ ನಾಲ್ಕರಲ್ಲಿ ಹನುಮಂತ, ರಜತ್, ವಿಕ್ರಮ್ ಮತ್ತು ಮೋಕ್ಷಿತ ಇದ್ದರು. ಈ ಪೈಕಿ ಮೋಕ್ಷಿತ ಹೊರಬಂದರು. ಈ ಮೂಲಕ ಈ ಬಾರಿಯೂ ಮಹಿಳೆಯೊಬ್ಬರು ಟ್ರೋಫಿ ಗೆಲ್ಲುವ ಭರವಸೆ ನಿರಾಸೆಯಾಯಿತು.
ಇನ್ನು ಟಾಪ್ ಮೂವರಲ್ಲಿ ಘಟಾನುಘಟಿಗಳೇ ಇದ್ದರು. ಆದರೆ ರಜತ್ 2ನೇ ರನ್ನರ್ ಅಪ್ ಆಗಿ ಹೊರಬಂದರು. ಅಂತಿಮವಾಗಿ ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ ಅವರು ಹನುಮಂತ ಮತ್ತು ವಿಕ್ರಮ್ ಅವರ ಕೈಗಳನ್ನು ಇಡಿದಿದ್ದರು. ಅಂತಿಮವಾಗಿ ಹನುಮಂತನ ಕೈ ಅನ್ನು ಎತ್ತುವ ಮೂಲಕ ಬಿಗ್ ಬಾಸ್ ಕನ್ನಡ ಸೀಸನ್ 11ರ ವಿಜೇತರನ್ನು ಘೋಷಿಸಿದರು. ಬಿಗ್ ಬಾಸ್ ವಿಜೇತರಿಗೆ 50 ಲಕ್ಷ ರೂ. ಬಹುಮಾನ ಮತ್ತು ಪಲಕ ಪಡೆದರು.

Girl in a jacket
error: Content is protected !!