ಬಿಗ್ ಬಾಸ್ ನನಗೆ ಜೀವನ ಪಾಠಕಲಿಸಿತು ,ಒಂದು ಕುಟುಂಬದ ಅನುಭವ ನೀಡಿತು ಎಂದು ನಟಿ ಹಾಗೂ ಬಿಗ್ ಬಾಸ್ ನಿಂದ ಮನೆಗೆ ತೆರಳಿದ ಶುಭಾ ಪೂಂಜಾ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಕೋವಿಡ್ ಅಟ್ಟಹಾಸದ ಹಿನ್ನೆಲೆಯಲ್ಲಿ ಲಾಕ್ ಡೌನ್ ನಿಂದಾಗಿ ರಿಯಾಲಿಟಿ ಶೋ ಬಿಗ್ ಬಾಸ್ 8 ರ ಸೀಜನ್ ಅರ್ಧಕ್ಕೆ ನಿಲ್ಲಿಸಿದ ದಕಾರಣ ಮನೆಯಲ್ಲಿರುವ ಶುಭಾ ಪೂಂಜ್ ದೂರವಾಣಿ ಕರೆಮಾಡಿದಾಗ ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದಾರೆ.
ನನಗೆ ಜೀವನದ ಅನುಭವ ಮತ್ತು ಸಂಯಮವನ್ನು ಕಲಿಸಿಕೊಟ್ಟಿದೆ ಅಲ್ಲದೆ ಒಂದು ಕುಟುಂಬದ ಅನುಭವ ಕೂಡ ಆಗಿದೆ ಎಂದಿದ್ದಾರೆ.
ರಿಯಾಲಿಟಿ ಶೋನಲ್ಲಿ ನನ್ನನ್ನು ನೋಡಿದ ಅಭಿಮಾನಿಗಳು ನನ್ನ ವ್ಯಕ್ತಿತ್ವ ನೋಡಿದ್ದಾರೆ, ಇನ್ನು ತಾವು ನಾಯಕಿ ಕೇಂದ್ರಿತ ಚಿತ್ರವಾದ ತ್ರಿದೇವಿಯ ಬಿಡುಗಡೆಗಾಗಿ ಕಾಯುತ್ತಿರುವುದಾಗಿ ಹೇಳಿದ್ದು ನಂತರ ಥ್ರಿಲ್ಲರ್ ಚಿತ್ರ ಬಿಡುಗಡೆಗೆ ಸಿದ್ಧವಾಗಲಿದೆ ಎಂದರು.
ರಿಯಾಲಿಟಿ ಶೋನಲ್ಲಿ ಅವಕಾಶ ಸಿಕ್ಕಾಗ ನನಗೆ ಸಾಕಷ್ಟು ಆತಂಕಗಳು ಇದ್ದವು. ಏನಾದರೂ ಪರವಾಗಿಲ್ಲ ನೀನು ಭಾಗವಹಿಸು ಎಂದು ಅವರ ನಿಶ್ಚಿತ ವರ ಸುಮಂತ್ ಬಿಲಾವಾ ಹೇಳಿದರಂತೆ. “ಹೊಸದನ್ನು ಪ್ರಯೋಗ ಮಾಡಲು ಹಿಂಜರಿಯಬಾರದು ಎಂದು ಅವರು ನನಗೆ ಹೇಳಿದರು. ಕರ್ನಾಟಕದ ಜನರಿಗೆ ನಿನ್ನ ನಿಜರೂಪ ತೋರಿಸುವುದಕ್ಕೆ ಇದೊಂದು ಅವಕಾಶ. ಈಗ ಹಿಂತಿರುಗಿ ನೋಡಿದಾಗ, ಜನರು ನನ್ನನ್ನು ತಿಳಿದುಕೊಳ್ಳಲು ಇದು ಅತ್ಯುತ್ತಮ ವೇದಿಕೆಯಾಗಿದೆ. ಇದು ಅದ್ಭುತ ಅನುಭವ, ಮತ್ತು ಇದು ಜೀವನದ ಬಗ್ಗೆ ನನ್ನ ದೃಷ್ಟಿಕೋನವನ್ನು ಬದಲಿಸಿದೆ ಎಂದರು.
ಇನ್ನು ಬಿಗ್ ಬಾಸ್ ಕಾರ್ಯಕ್ರಮವನ್ನು ಅರ್ಧಕ್ಕೆ ನಿಂತಾಗ ನಾನು ಎದೆಗುಂದಿದೆ. ಆದರೆ ಹೊರಗಡೆಯ ನೈಜ ಪರಿಸ್ಥಿತಿಯ ಹರಿವು ನಮಗೆ ಇರಲಿಲ್ಲ. ತಮ್ಮ ಜೀವವನ್ನು ಉಳಿಸಿಕೊಳ್ಳಲು ಜನರು ಪರದಾಡುತ್ತಿರುವುದನ್ನು ನೋಡಿದರೆ ನಿಜಕ್ಕೂ ನೋವಾಗುತ್ತಿದೆ. ಇನ್ನು ಬಿಗ್ ಬಾಸ್ ಮನೆಯಲ್ಲಿದ್ದಾಗ ನಟ ಕಿಚ್ಚಾ ಸುದೀಪ್ ಅವರು ನಮ್ಮನ್ನು ಮಕ್ಕಳಂತೆ ನೋಡಿಕೊಂಡರು. ಏನು ಮಾಡಬೇಕು ಏನು ಮಾಡಬಾರದು ಎಂಬುದನ್ನು ತಿಳಿ ಹೇಳಿದರು ಎಂದರು. ಮುಖ್ಯವಾಗಿ ಫೋನ್ ಇಲ್ಲದೆ ಜೀವನವನ್ನು ಶಾಂತ ಮತ್ತು ಸಂತೋಷದಿಂದ ಆನಂದಿಸುವುದನ್ನು ಕಲಿಯುತ್ತಿರುವುದಾಗಿ ಹೇಳಿದರು.