ಪ್ರೀತಿ ಮತ್ತು ಕ್ರೈ ಕಥೆಯ ಸಾಮರ್ಥ್ಯಾ

Share

ಕಾರ್ತಿಕ್ ಮೂವೀಸ್ ಲಾಂಛನದಲ್ಲಿ ರಾಜರಬಂಡಿ ಕಾರ್ತಿಕ್ ನಿರ್ಮಿಸುತ್ತಿರುವ ಸಾಮರ್ಥ್ಯಾ ಚಿತ್ರಕ್ಕೆ ಇತ್ತೀಚೆಗೆ ಕಂಠೀರವ ಸ್ಟುಡಿಯೋವಿನಲ್ಲಿ ಮುಹೂರ್ತ ಆಚರಿಸಿಕೊಂಡಿದ್ದು ಚಿತ್ರದ ಪ್ರಥಮ ದೃಶ್ಯಕ್ಕೆ ಸಾ.ರಾ.ಗೋವಿಂದು ಕ್ಲಾಪ್ ತೋರಿದಾಗ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ರವರು ಕ್ಯಾಮೆರಾ ಚಾಲನೆ ನೀಡಿದರು.ಚಿತ್ರರಂಗದ ಮೇರು ವ್ಯಕ್ತಿಗಳ ಸಮ್ಮುಖದಲ್ಲಿ ನಡೆದ – ಈ ಚಿತ್ರದ ನಿರ್ದೇಶನ ಹೆಚ್.ವಾಸು. ಇದು ಇವರ ೨೪ನೇ ಚಿತ್ರ. ಚಿತ್ರಕ್ಕೆ ಸಂಭಾಷಣೆ ಶಶಿ, ಛಾಯಾಗ್ರಹಣ-ಎ.ವಿ. ಕೃಷ್ಣಕುಮಾರ್ (ಕೆ.ಕೆ), ಸಂಗೀತ-ಅರುಣ್ ಆಂಡ್ರ್ಯು, ಸಾಹಿತ್ಯ-ಕೆ. ಕಲ್ಯಾಣ್, ವಿ ನಾಗೇಂದ್ರ ಪ್ರಸಾದ್, ವಿಶ್ವಾ.ಜಿ, ಸಾಹಸ-ಅರ್ಜುನ್, ಸಂಕಲನ-ವೆಂಕಟೇಶ್-ಯುಡಿವಿ, ಸಹನಿರ್ದೇಶನ-ಎನ್ ಬಸವರಾಜು ಚೋರನಹಳ್ಳಿ, ನಿರ್ವಹಣೆ- ರಂಗಸ್ವಾಮಿ, ತಾರಾಗಣದಲ್ಲಿ – ಬಾಲಾಜಿ ಶರ್ಮ, ಗಗನ ಮಧು, ಶೋಭರಾಜ್, ಅವಿನಾಶ್, ರವೀಂದ್ರನಾಥ್, ಪೆಟ್ರೋಲ್ ಪ್ರಸನ್ನ, ಕಾಮಿಡಿ ಕಿಲಾಡಿಗಳು ಸಂತು, ಸ್ವಾತಿ, ಶಶಿಕುಮಾರ್, ಮುಂತಾದವರಿದ್ದಾರೆ. ಚಿತ್ರಕ್ಕೆ ಬೆಂಗಳೂರು, ಚಿಕ್ಕಮಗಳೂರು, ಸಕಲೇಶಪುರ ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ಲವ್ & ಕ್ರೈಂ ಕಥಾ ವಸ್ತುವುಳ್ಳ    ಕಥೆಯನ್ನು ಈಗಿನ ಕಾಲದ ಸಮಾಜಕ್ಕೆ ಹೊಂದಿಕೊಳ್ಳುವಂತಹ ಹಲವು ತಿರುವುಗಳು ಈ ಲವ್ ಸ್ಟೋರಿಯಲ್ಲಿದೆ. ಇದು ನನ್ನ ೨೪ನೇ ಚಿತ್ರ, ನನ್ನ ಮೊದಲನೇ ಸಿನಿಮಾ ಯಾವ ರೀತಿ ಪ್ರೀತಿ ಶ್ರದ್ಧೆಯಿಂದ ಮಾಡಿದೆನೋ ಈ ಚಿತ್ರಕ್ಕೂ ಅದೇ ಮನೋಧೈರ್ಯದಲ್ಲೇ ಚಿತ್ರ ನಿರ್ದೇಶನ ಮಾಡುತ್ತಿದ್ದೇನೆ ಎಂದು ಹೆಚ್.ವಾಸು. ಚಿತ್ರದ ಟೈಟಲ್ಲೇ ಸಾಮರ್ಥ್ಯಾ ತನ್ನ ಲೈಫಲ್ಲಿ ಮೊದಲನೇ ಹೆಜ್ಜೆ ದೊಡ್ಡ ನಿರ್ದೇಶಕರ ಬಳಿ ಸಾಮರ್ಥ್ಯ ಹೊಂದಿರುವ ನಾಯಕ ನ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಆದಷ್ಟು ಈ ಪಾತ್ರಕ್ಕೆ ನ್ಯಾಯ ದೊರಕಿಸಿಕೊಡುವ ಭರವಸೆ ನನಗಿದೆ. ನಾಯಕಿ ಗಗನ ಈ ಹಿಂದೆ ಮಾಡೆಲಿಂಗ್‌ನಲ್ಲಿದ್ದು ಈ ಚಿತ್ರದ ಮೂಲಕ ನಾಯಕಿಯಾಗಿ ಪ್ರವೇಶ ಮಾಡುತ್ತಿದ್ದೇನೆ ಒಂದು ತುಂಟಾಟ, ಬಬ್ಲಿ ಅಂತ ಕ್ಯಾರೆಕ್ಟರ್ ಇದು, ನಿರ್ದೇಶಕರು ಹೇಳಿಕೊಟ್ಟ ರೀತಿ ಮಾಡಿ ಸೈ ಎನ್ನಿಸ್ಕೊಳ್ಬೇಕು ಎಂದರು,

 

 

 

Girl in a jacket
error: Content is protected !!