ನಟ ಬಾಲಕೃಷ್ಣ ಹಾಸ್ಯ ಸಂಭಾಷಣೆ ಬರೆದಚಿತ್ರದೈವಸಂಕಲ್ಪ

Share

ನಟ ಬಾಲಕೃಷ್ಣ ಹಾಸ್ಯ ಸಂಭಾಷಣೆ ಬರೆದಚಿತ್ರದೈವಸಂಕಲ್ಪ

ಎಂ.ಬಿ.ಗಣೇಶ್ ನಿರ್ದೇಶನದ, ಮಹಾತ್ಮ ಪಿಕ್ಚರ್ ಲಾಂಛನದಡಿ ಡಿ.ಶಂಕರಸಿಂಗ್ ನಿರ‍್ಮಾಣ ಮಾಡಿದದೈವಸಂಕಲ್ಪಕಪ್ಪು-ಬಿಳುಪು ಸಾಮಾಜಿಕಚಿತ್ರ ೧೯೫೬ರಲ್ಲಿ ತೆರೆಕಂಡಿತು. ಉದಯಕುಮಾರ್, ಸೂರ್ಯಕಲಾ, ರಾಜಕುಮಾರಿ, ಹೆಚ್.ಪಿ.ಸರೋಜಾ, ಸರೋಜಮ್ಮ, ಲಕ್ಷ್ಮೀದೇವಿ, ಎಂ.ಎಸ್.ಸುಬ್ಬಣ್ಣ, ಟಿ.ಎನ್. ಬಾಲಕೃಷ್ಣ, ಹನುಮಂತಾಚಾರ್, ಮಾ. ಹಿರಣ್ಣಯ್ಯ ಅಭಿನಯಿಸಿದರು.ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತೆಗಳನ್ನು ಎಂ.ನರೇಂದ್ರಬಾಬು ರಚಿಸಿದರು. ಸಂಭಾಷಣೆಯಲ್ಲಿ ಹಾಸ್ಯಜೋಡಣೆಯನ್ನು ನಟ ಟಿ.ಎನ್.ಬಾಲಕೃಷ್ಣ ಬರೆದುಕೊಟ್ಟರು. ಪಿ.ಶಾಮಣ್ಣ ಸಂಗೀತ ನಿರ್ದೇಶನ ಮಾಡಿದಚಿತ್ರದಲ್ಲಿ ೧೦ ಹಾಡುಗಳನ್ನು ಆಳವಡಿಸಲಾಗಿತ್ತು.ಚಿತ್ರ ಮೈಸೂರಿನ ಪ್ರೀಮಿಯರ್ ಸ್ಟುಡಿಯೊದಲ್ಲಿಚಿತ್ರೀಕರಣಗೊಂಡಿತು. ತಾನೊಂದು ಬಗೆದರೇದೈವತಾ ಬೇರೊಂದ ಬಗೆವುದು ಎಂಬ ವಿಧಿ ನಿಯಮವನ್ನು ಸಾರುವಕಥಾವಸ್ತು ಈ ಚಿತ್ರದ್ದಾಗಿತ್ತು.

ಅಶ್ವತ್ಥ್ ಸರೋಜಾದೇವಿ ಅಭಿನಯದಕಚದೇವಯಾನಿ
ಕೆ.ಎಸ್.ಅಶ್ವತ್ಥ್ ಹಾಗೂ ಬಿ.ಸರೋಜಾದೇವಿ ನಾಯಕ ನಾಯಕಿ ಪಾತ್ರಗಳಲ್ಲಿ ಅಭಿನಯಿಸಿದ, ಮೊರಾಕ್ ಪಿಕ್ಚರ್ ಲಾಂಛನದಲ್ಲಿ ನಿರ್ಮಿಸಲಾದಕಪ್ಪು-ಬಿಳುಪು ಜಾನಪದಕಥಾ ಹಂದರದಚಿತ್ರಕಚದೇವಯಾನಿ ೧೯೫೬ರಲ್ಲಿ ಬಿಡುಗಡೆಗೊಂಡಿತು.ಬಾಲು ಹಾಗೂ ಎಂ.ಆರ್.ಎಸ್.ಮಣಿ ನಿರ್ದೇಶಿಸಿದ ಚಿತ್ರದಲ್ಲಿ ಸಂಪತ್, ನಿರಂಜನ್, ಶ್ರೀಕಾಂತ್, ಸಿದ್ದಯ್ಯಸ್ವಾಮಿ, ಮಾ| ಹಿರಣ್ಣಯ್ಯ, ರೇವತಿ, ವಿದ್ಯಾ, ಶಶಿಕಲಾ ಅಭಿನಯಿಸಿದ್ದರು.ಕೆ. ಸುಬ್ರಹ್ಮಣ್ಯಂಕಥೆ, ಚಿತ್ರಕಥೆ ಬರೆದಿದ್ದು, ಎಂ.ನರೇಂದ್ರಬಾಬು ಸಂಭಾಷಣೆ ಹಾಗೂ ಹಾಡುಗಳನ್ನು ರಚಿಸಿದರು. ಪಾಂಡು ಮತ್ತು ಮೀನಾಕ್ಷಿ ಸುಬ್ರಹ್ಮಣ್ಯಂ ಸಂಗೀತ ನೀಡಿದಚಿತ್ರದಲ್ಲಿ ೧೦ ಹಾಡುಗಳಿದ್ದವು.ರಾಧಾಜಯಲಕ್ಷ್ಮಿ, ಸಿ.ಎಸ್. ಸರೋಜಿನಿ, ಪಾರ್ವತಿ, ಶೀರ್ಕಾಳಿ ಗೋವಿಂದರಾಜನ್, ಎ.ಎಂ.ರಾಜಾ ಹಾಗೂ ಎಂ.ಬಿ. ಶ್ರೀನಿವಾಸನ್ ಗೀತೆಗಳಿಗೆ ಹಿನ್ನೆಲೆದನಿಯಾದರು.ಮದರಾಸಿನ ರೇವತಿ, ನ್ಯೂಟೋನ್ ಮತ್ತು ನೆಪ್ಚೂನ್ ಸ್ಟುಡಿಯೊಗಳಲ್ಲಿ ಚಿತ್ರೀಕರಣ ನಡೆಯಿತು.ತನ್ನತಂದೆ ಶುಕ್ರಾಚಾರ್ಯರ ಬಳಿ ಮೃತಸಂಜೀವಿನಿ ವಿದ್ಯೆಕಲಿಯಲು ಬಂದದೇವಗುರು ಬೃಹಸ್ಪತ್ಯಾಚಾರರ ಮಗ ಕಚನನ್ನು ಶುಕ್ರಾಚಾರ್ಯರ ಪುತ್ರಿದೇವಯಾನಿ ಪ್ರೇಮಿಸುತ್ತಾಳೆ. ಆದರೆ, ಗುರುಪುತ್ರಿಯನ್ನು ವರಿಸಲು ಕಚ ನಿರಾಕರಿಸುತ್ತಾನೆ. ದೇವಯಾನಿ ಕಚನ ಅವನತಿಗೆ ಯತಿಸುತ್ತಾಳೆ.ಇದುಚಿತ್ರದಕಥೆ.

ವಾದಿರಾಜ್‌ಚಿತ್ರರಂಗ ಪ್ರವೇಶಿಸಿದ ಕೋಕಿಲವಾಣಿ
ವಾದಿರಾಜ್‌ಚಿಕ್ಕ ಪಾತ್ರದ ಮೂಲಕ ಚಿತ್ರರಂಗಕ್ಕೆ ಬರಲುಕಾರಣವಾದ ಕೋಕಿಲವಾಣಿಕಪ್ಪು ಬಿಳುಪು ಸಾಮಾಜಿಕಕಥಾ ಹಂದರದಚಿತ್ರ ನಾಯಕಿಆರ್ಟ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ೧೯೫೬ರಲ್ಲಿ ತೆರೆಕಂಡಿತು.ಎಸ್.ಎ. ನಟರಾಜನ್ ನಿರ್ದೇಶನದಚಿತ್ರದಲ್ಲಿಕೆ.ಎಸ್.ಅಶ್ವತ್ ಹಾಗೂ ಬಿ.ಸರೋಜಾದೇವಿ ನಾಯಕ ನಾಯಕಿ ಪಾತ್ರಗಳನ್ನು ನಿರ್ವಹಿಸಿದರು. ಉಳಿದಂತೆ ಮುಸುರಿಕೃಷ್ಣಮೂರ್ತಿ, ವಾದಿರಾಜ್, ಚಿತ್ರದ ನಿರ್ದೇಶಕಎಸ್.ಎ. ನಟರಾಜನ್ ಅಭಿನಯಿಸಿದರು.ಪಿ.ಶ್ರೀನಿವಾಸ ಅಯ್ಯಂಗಾರ್ ಸಂಗೀತ ನಿರ್ದೇಶನ ಮಾಡಿದರು.

ಹುಣಸೂರುಕೃಷ್ಣಮೂರ್ತಿಸಾಹಿತ್ಯ ರಚಿಸಿದ ಮುತ್ತೈದೆ ಭಾಗ್ಯ
ಗೌತಮ ಹೆಸರಿನಿಂದ ಹುಣಸೂರುಕೃಷ್ಣಮೂರ್ತಿಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತೆಗಳನ್ನು ರಚಿಸಿ, ಅಭಿನಯಿಸದಕಪ್ಪು-ಬಿಳುಪು ಸಾಮಾಜಿಕಚಿತ್ರ ಮುತ್ತೈದೆ ಭಾಗ್ಯ ವಿಠಲ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ೧೯೫೬ರಲ್ಲಿ ತೆರೆಕಂಡಿತು. ವಿಠಲಾಚಾರ್ಯರು ಶಂಕರಸಿಂಗ್ ಅವರೊಂದಿಗೆ ಪಾಲುದಾರಿಕೆ ಬಿಟ್ಟ ನಂತರ ನಿರ್ಮಿಸಿದ ಮೊದಲ ಚಿತ್ರಇದು.ಕಲ್ಯಾಣಕುಮಾರ್, ಹುಣಸೂರುಕೃಷ್ಣಮೂರ್ತಿ, ಮೈನಾವತಿ, ಜಯಶ್ರೀ, ರೇವತಿ, ರಮಾದೇವಿ, ಬಾಲಕೃಷ್ಣ, ಹೆಚ್.ರಾಮಚಂದ್ರಶಾಸ್ತ್ರಿ, ವಾಸುದೇವಗಿರಿಮಾಜಿ, ಮಾ.ಹಿರಣ್ಣಯ್ಯ, ಕಮೆಡಿಯನ್ ಗುಗ್ಗು ಅಭಿನಯಿಸಿದರು. ರಾಜನ್-ನಾಗೇಂದ್ರ ಸಂಗೀತ ನೀಡಿದಚಿತ್ರದಲ್ಲಿ ೭ ಹಾಡುಗಳನ್ನು ಅಳವಡಿಸಲಾಗಿತ್ತು. ಪಿ.ಲೀಲಾ, ಗಾನ ಸರಸ್ವತಿ, ರಾಣಿ, ಗೀತೆಗಳನ್ನು ಹಾಡಿದರು. ಈ ಚಿತ್ರದಲ್ಲಿ ಅಳವಡಿಸಿದ್ದ

’ನಮ್ಮೂರೆಚೆಂದನಮ್ಮವರೆಅಂದಕನ್ನಡಭಾಷೆಕರ್ಣಾನಂದ….’ ಎಂಬಕನ್ನಡನಾಡಿನಹಿರಿಮೆ ಸಾರುವಗೀತೆಯನ್ನುಸಂಗೀತ ನಿರ್ದೇಶಕರಲ್ಲೊಬ್ಬರಾದ ನಾಗೇಂದ್ರ ಹಾಡಿದ್ದರು. ಚಿತ್ರ ಮದರಾಸಿನ ವಾಹಿನಿ ಸ್ಟುಡಿಯೊದಲ್ಲಿಚಿತ್ರೀಕರಣಗೊಂಡಿತು. ಅಹಂಕಾರದಿಂದಕೂಡಿದ್ದ ವಿದ್ಯಾವತಿ ಪುರುಷೋತ್ತಮರಾಯರಏಕಮಾತ್ರಪುತ್ರಿ.ಸುರೇಶ ಅವಳದೊಡ್ಡಪ್ಪನಮಗ, ಅವನಹೆಂಡತಿಗೌರಿ.ಸದ್ಗುಣಸಂಪನ್ನೆ.ವಿದ್ಯಾವತಿಯಸ್ಟೇಚ್ಛಾಚಾರವನ್ನು ಖಂಡಿಸಿದಸುರೇಶಚಿಕ್ಕಮ್ಮ, ವಿದ್ಯಾವತಿ, ಪುರುಷೋತ್ತಮರಾಯರ ಅವಕೃಪೆಗೆಪಾತ್ರನಾಗುತ್ತಾನೆ. ಗೌರಿಯ ಸಹನೆಯಿಂದ ಸಂಸಾರರಥ ನಡೆಯುತ್ತದೆ.ಕಡೆಗೆಗೌರಿಯ ತಾಳ್ಮೆಯೇ ಗೆಲ್ಲುತ್ತದೆ.

Girl in a jacket
error: Content is protected !!