ಡಿಸೆಂಬರ್ 18 ರಂದು ಗಂಡುಲಿ ಚಿತ್ರದ ಟ್ರೈಲರ್ ಬಿಡುಗಡೆ

Share

‌‌‌‌‌ ವಿನಯ್ ರತ್ನಸಿದ್ದಿ ಅವರ ನಿರ್ದೇಶನವಿರುವ ಗಂಡುಲಿ ಚಿತ್ರವೀಗ ಬಿಡುಗಡೆಯ ಹಂತ ತಲುಪಿದ್ದು ಚಿತ್ರದ ಟ್ರೈಲರ್‌ ಇದೆ ಶನಿವಾರ ಬಿಡುಗಡೆಯಾಗಲಿದೆ.
ಗಂಡುಲಿ ಚಲನಚಿತ್ರವು ಕುಟುಂಬ ಸಮೇತ ಕೂತು ನೋಡುವಂತ ಚಲನಚಿತ್ರವಾಗಿದ್ದು, ಇದು ಆಕ್ಶನ್, ಸಸ್ಪೆನ್ಸ್, ಕಾಮಿಡಿ ಮತ್ತು ಫ್ಯಾಮಿಲಿ ಸೆಂಟಿಮೆಂಟ್ ಇಂದ ಕೂಡಿದೆ.
ಇದರಲ್ಲಿ 5 ಆಕ್ಶನ್ಗಳಿದ್ದು, 3 ಹಾಡುಗಳಿದ್ದು.
ನಾಯಕನ ಪಾತ್ರವನ್ನೂ ಕೂಡ ನಿರ್ದೇಶಕ ವಿನಯ್ ಅವರೇ ನಿರ್ವಹಿಸಿದ್ದಾರೆ.

ಟೈಟಲ್ ಸಾಂಗ್ ಅನ್ನು “ಅನಿರುದ್ ಶಾಸ್ತ್ರಿ” ರವರು ಹಾಡಿದ್ದು, ಡುಯೆಟ್ ಸಾಂಗ್ ಅನ್ನು “ವಿಜಯ್ ಪ್ರಕಾಶ್” ರವರು ಹಾಡಿದ್ದಾರೆ.
ಕೆ. ಆರ್. ಪೇಟೆ, ಹೇಮಗಿರಿ, ಮೈಸೂರು, ಏರ್‌ಪೋರ್ಟ್ ರೋಡ್, ಕನಕಪುರ, ಇನ್ನು ಮುಂತಾದ ಸುಂದರವಾದ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.
ನಾಯಕನ ತಾಯಿಯ ಪಾತ್ರದಲ್ಲಿ ಸುಧಾ ನರಸಿಂಹರಾಜು ಕಾಣಿಸಿಕೊಂಡಿದ್ದು, ಧರ್ಮೇಂದ್ರ ಅರಸ್ ರವರು ಬಹು ಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಾಯಕ ನಟನಾಗಿ “ವಿನಯ್ ರತ್ನಸಿದ್ದಿ” ರವರು ಕಾಣಿಸಿಕೊಂಡಿದ್ದು, ನಾಯಕಿ ಪಾತ್ರದಲ್ಲಿ ಛಾಯಾದೇವಿ ಬಣ್ಣ ಹಚ್ಚಿದ್ದಾರೆ.


ಇನ್ನು ಉಳಿದ ತಾರಾಗಣದಲ್ಲಿ ಶಿವಮೊಗ್ಗ ರಾಮಣ್ಣ, ಸುಬ್ಬೆಗೌಡ್ರು, ಶಿವು, ವಿಜಯ್, ಮುಂತಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ.

Girl in a jacket
error: Content is protected !!