ಕೊರೊನಾ ಸಂಕಷ್ಟದಲ್ಲಿ ಲಾಕ್‌ಡಾನ್ ಹಿನ್ನೆಲೆಯಲ್ಲಿ ಸ್ತಗಿತಗೊಂಡಿದ್ದ ಚಿತ್ರಗಳ ಚಿತ್ರೀಕರಣ ಮತ್ತೇ ಆರಂಭವಾಗಿವೆ; ಈಗ ಶ್ರೀ ಸಿದ್ಧಿವಿನಾಯಕ ಫಿಲಂಸ್ ಲಾಂಛನದಲ್ಲಿ ನಿರ್ದೇಶಕ ಮರಡಿಹಳ್ಳಿ ನಾಗಚಂದ್ರ (ವಿದ್ಯಾರ್ಥಿ, ಮುನಿಯ, ಜನ್‌ಧನ್) ನಿರ್ಮಿಸುತ್ತಿರುವ ಟಕೀಲಾಕ್ಕೆ ಇದೇ ೨೬ ರಿಂದ ೨ನೇ ಹಂತದ ಚಿತ್ರೀಕರಣ ಅಲ್ಲದೇ ನಂದಿನಿ ಬಡಾವಣೆಯ ಟಾಪ್ ಸ್ಟಾರ್ ರೇಣು ಸ್ಟುಡಿಯೋವಿನಲ್ಲಿ ನಿರ್ದೇಶಕ ಕೆ.ಪ್ರವೀಣ್ ನಾಯಕ್ ರಚಿಸಿರುವ ನಿನ್ನ ಕಣ್ಣಿನಲಿ ಕಣ್ಣ ಭಾಷೆಯಲಿ ಬರೆದೆ ಪ್ರಣಯ ಕವಿತೆ, ಮಾತು ಬಾರದೆ ಮೂಕನಾಗಿರಲು ಎದೆಯ ಒಳಗೆ ಅವಿಗೆ ಮತ್ತು ದಂ ಮಾರೋ ದಮ್ಮಲ್ಲಿ ಜುಮ್ಮೆನ್ನೋ ಕಿಕ್ಕಲ್ಲಿ ಓಲಾಡಿ ತೇಲಡಿದಾಗ ಗಾಂಜಾದ ಬಿಸಿಯಲ್ಲಿ ಚಿತ್ತಾಗಿ ನಶೆಯಲ್ಲಿ ಒಂದಾಗಿ ಮೈ ಮರೆಯುವಾಗ ಗೀತೆಗಳ ಧ್ವನಿಮುದ್ರಣ ಕಾರ್ಯ ನಡೆಯಿತು.
ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳು, ನಿರ್ದೇಶನ, ಕೆ.ಪ್ರವೀಣ್ ನಾಯಕ್ – ಇವರು ಹಿಂದೆ ಜಡ್ ಹೂಂ ಅಂತೀಯಾ ಉಹೂಂ ಅಂತೀಯಾ ಮೀಸೆ ಚಿಗುರಿದಾಗ ಚಿತ್ರಗಳನ್ನು ನಿರ್ದೇಶಿಸಿದ್ದರು. ಛಾಯಾಗ್ರಹಣ ಪಿ.ಕೆ.ಹೆಚ್. ದಾಸ್, ಸಂಗೀತ-ಟಾಪ್‌ಸ್ಟಾರ್ ರೆಣು, ಸಂಕಲನ-ಗಿರೀಶ್,ಕಲೆ-ಪ್ರಶಾಂತ್, ಸಹ ನಿರ್ಮಾಪಕರು-ಆರ್.ತ್ಯಾಗರಾಜ್, ಗಿರೀಶ್ ಕಂಪ್ಲಾಪುರ್, ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ಧರ್ಮ ಕೀರ್ತಿರಾಜ್, ನಿಖಿತಾ ಸ್ವಾಮಿ, ನಾಗೇಂದ್ರ ಅರಸ್, ಕೋಟೆ ಪ್ರಭಾಕರ್ ಸುಮನ್, ಜಯರಾಜ್, ಸುಷ್ಮಿತಾ, ಪ್ರವೀಣ್ ನಾಯಕ್, ಮುಂತಾದವರಿದ್ದಾರೆ. ಈ ಚಿತ್ರದ ಚಿತ್ರೀಕರಣ, ಬೆಂಗಳೂರು, ದೇವರಾಯನದುರ್ಗ, ಸಕಲೇಶಪುರದಲ್ಲಿ ನಡೆಯಲಿದೆ.