ಚಡ್ಡಿ ದೋಸ್ತ್ ಸಿನಿಮಾ ನೋಡಿ ಗೋಲ್ಡ್ ಕಾಯಿನ್ ಗೆಲ್ಲಿ

Share

ಹಾಸ್ಯದ ಜೊತೆ ಸ್ನೇಹ, ಪ್ರೀತಿಯ ಕಥಾನಕ ಹೊಂದಿದ, ರೆಡ್ ಅಂಡ್ ವೈಟ್ ಸೆವೆನ್ ರಾಜ್ ನಿರ್ಮಾಣದ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ ಚಿತ್ರವು ಕಳೆದ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಿ, ಎಲ್ಲಾ ಕಡೆಯಿಂದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
ದಿನದಿಂದ ದಿನಕ್ಕೆ ಚಿತ್ರದ ಕಲೆಕ್ಷನ್ ಕೂಡ ಇಂಪ್ರೂವ್ ಆಗ್ತಿದೆ. ಕಾಮಿಡಿಯೊಂದಿಗೆ ಆರಂಭವಾಗುವ ಚಿತ್ರದ ಕ್ಲೈಮ್ಯಾಕ್ಸ್ ಸೀನ್ ಪ್ರೇಕ್ಷಕರ ಕಣ್ಣನ್ನು ಒದ್ದೆಯಾಗಿಸುತ್ತದೆ. ಆಸ್ಕರ್ ಕೃಷ್ಣ ನಿರ್ದೇಶನದ ಈ ಚಿತ್ರಕ್ಕೆ ಲೋಕೇಂದ್ರಸೂರ್ಯ. ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿದ್ದಾರೆ. ನಿರ್ಮಾಪಕ ಸೆವೆನ್ ರಾಜ್ ಒಬ್ಬ ನಯವಂಚಕ ಎಂ.ಎಲ್.ಏ. ಆಗಿ ಕಾಣಿಸಿಕೊಂಡಿದ್ದಾರೆ.
ಸೋಮವಾರ ನಡೆದ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಕಮ್ ನಾಯಕ ಆಸ್ಕರ್ ಮಾತನಾಡಿ, ನನ್ನ ನಿರ್ದೇಶನದ ೫ನೇ ಚಿತ್ರ, ನಿರೀಕ್ಷೆ ಮೂಡಿಸಿದ ಸಿನಿಮಾ ಗಳಲ್ಲಿ ಇದೂ ಒಂದು. ರಿಸ್ಕ್ ತೆಗೆದುಕೊಂಡು ರಿಲೀಸ್ ಮಾಡಿದ್ದಕ್ಕೂ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಪ್ರೇಕ್ಷಕರು ತುಂಬಾ ಎಂಜಾಯ್ ಮಾಡುತ್ತಿದ್ದಾರೆ. ರಿಲೀಸ್ ಹಿಂದಿನ ವಾರ ಗಾಂಧಿನಗರಕ್ಕೆ ಹೋದಾಗ ಜನ ಕಡಿಮೆ ಇತ್ತು. ಶ್ರಮದ ಪ್ರತಿಫಲವಾಗಿ ರಿಲೀಸ್ ದಿನ ಕಿಕ್ಕಿರಿದು ತುಂಬಿತ್ತು. ಜನರಿಗೆ ಧನ್ಯವಾದ. ಒಳ್ಳೆಯ ಸ್ನೇಹಕ್ಕೆ ಬಲೆ ಇದೆ ಎಂಬುದಕ್ಕೆ ಕ್ಲೈಮ್ಯಾಕ್ಸ್ ನಲ್ಲಿ ಉತ್ತರವಿದೆ. ಕಥೆ, ಸಬ್ಜೆಕ್ಟ್ ಮುಖೇನ ಜನರಿಗೆ ಮೆಸೇಜ್ ತಲುಪಿಸಿದ್ದೇನೆ. ಖುಷಿ ಆಗಿದೆ. ಸರ್ಕಾರ ೧೦೦ ಪರ್ಸೆಂಟ್ ಅವಕಾಶ ಕೊಟ್ಟರೆ ಚನ್ನಾಗಿರುತ್ತದೆ ಎಂದು ಹೇಳಿದರು.

ಸೆವೆನ್ ರಾಜ್ ಮಾತನಾಡಿ ನನ್ನ ಕನಸಿನ ಚಿತ್ರವಿದು ಇಂದು ನನಸಾಗಿದೆ. ರಿಲೀಸಾದ ಎಲ್ಲಾ ಥೇಟರಿಗಿಂತ ವೀರೇಶ ಚಿತ್ರಮಂದಿರದಲ್ಲಿ ಉತ್ತಮ ಕಲೆಕ್ಷನ್ ಬರ್ತಿದೆ. ಹಾಗಾಗಿ ನಾಳೆಯಿಂದ ನಮ್ಮ ಸಿನಿಮಾ ನೋಡಲು ಬರುವ ಕನ್ನಡ ಅಭಿಮಾನಿಗಳಿಗೆ ವೀರೇಶ್ ಚಿತ್ರಮಂದಿರದಲ್ಲಿ ಅರ್ದ ಗ್ರಾಮ್ ಗೋಲ್ಡ್ ಕಾಯಿನ್ ಕೊಡಲಿದ್ದೇವೆ. ಪ್ರತಿ ಷೋ ನೋಡಲು ಬರುವ, ಡ್ರಾ ಮೂಲಕ ಆಯ್ಕೆಯಾದ ಒಬ್ಬ ವಿಜೇತ ಪ್ರೇಕ್ಷಕನಿಗೆ ಬಂಗಾರದ ನಾಣ್ಯದ ಬಹುಮಾನವಿರುತ್ತದೆ. ನಮ್ಮ ಚಿತ್ರಕ್ಕೆ ಸರಿಯಾದ ಸಮಯ ಕೊಡದೆ ಮಾಲ್ ನವರು ನಿರ್ಲಕ್ಷೆ ಮಾಡುತ್ತಿದ್ದಾರೆ ಎಂದು ಹೇಳಿದರು.

 

 

 

Girl in a jacket
error: Content is protected !!