ಖೇಲಾ” ಚಿತ್ರದ “ಪುಣ್ಯಾತ್ ಗಿತ್ತೀ” ಹಾಡಿಗೆ ಎಲ್ಲೆಡೆ ಪ್ರಶಂಸೆ

Share

ಭರತ್ ಫಿಲಂಸ್ ಲಾಂಛನದಲ್ಲಿ ವಿ.ಜೆ.ಭರತ್ ಅವರು ನಿರ್ಮಿಸಿ, ನಿರ್ದೇಶಿಸುತ್ತಿರುವ ವಿಭಿನ್ನ ಕಥಾಹಂದರ ಹೊಂದಿರುವ “ಖೇಲಾ” ಚಿತ್ರಕ್ಕಾಗಿ ಪ್ರಮೋದ್ ಜೋಯಿಸ್ ಬರೆದಿರುವ, ಖ್ಯಾತ ಗಾಯಕ ವೇಲ್ ಮುರುಗನ್ ಹಾಡಿರುವ “ಪುಣ್ಯಾತ್ ಗಿತ್ತೀ” ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಎಂ.ಎಸ್ ತ್ಯಾಗರಾಜ್ ಸಂಗೀತ ನೀಡಿರುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಇದೊಂದು ಪ್ರೇಮ ಕಥಾನಕವಾಗಿದ್ದರೂ, ತಾಯಿ – ಮಗನ ಬಾಂಧವ್ಯ, ಸಸ್ಪೆನ್ಸ್, ಥ್ರಿಲ್ಲರ್ ಹೀಗೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ತಾಯಂದಿರ ದಿನದಂದು ಮೊದಲ ಹಾಡು ಬಿಡುಗಡೆಯಾಗಿತ್ತು. ಇಂದು “ಪುಣ್ಯಾತ್ ಗಿತ್ತೀ” ಹಾಡನ್ನು ಬಿಡುಗಡೆ ಮಾಡಿದ್ದೇವೆ. ಎಂ.ಎಸ್ ತ್ಯಾಗರಾಜ್ ಸಂಗೀತ ನಿರ್ದೇಶನದಲ್ಲಿ ಎಲ್ಲಾ ಹಾಡುಗಳು ಉತ್ತಮವಾಗಿ ಮೂಡಿ ಬಂದಿದೆ. ವಿಹಾನ್ ಪ್ರಭಂಜನ್, ಆಶಿಕ ರಾವ್ ನಾಯಕ, ನಾಯಕಿಯಾಗಿ ನಟಿಸಿರುವ ಈ ಚಿತ್ರದ ವಿಶೇಷ ಪಾತ್ರದಲ್ಲಿ ಸಂಗೀತ ಭಟ್ ಸಹ ಅಭಿನಯಿಸಿದ್ದಾರೆ  ಎಂದು ನಿರ್ಮಾಪಕ ಹಾಗೂ ನಿರ್ದೇಶಕ‌ ಭರತ್ ವಿ.ಜೆ ತಿಳಿಸಿದರು.

ತಾಯಂದಿರ ದಿನದಂದು ಬಿಡುಗಡೆಯಾದ ತಾಯಿ – ಮಗನ ಬಾಂಧವ್ಯದ ಹಾಡು ಈಗಾಗಲೇ ಜನಪ್ರಿಯವಾಗಿದೆ. ಇಂದು ಬಿಡುಗಡೆಯಾಗಿರುವ “ಪುಣ್ಯಾತ್ ಗಿತ್ತೀ” ಹಾಡು ಕೂಡ ಎಲ್ಲರ ಮೆಚ್ಚುಗೆ ಪಡೆಯುತ್ತಿದೆ.‌ ನಾನು ಈ ಚಿತ್ರದ ನಾಯಕ .‌ಚಿತ್ರದಲ್ಲಿ ಕಾಲೇಜು ಹುಡುಗ ಎಂದು ನಾಯಕ ವಿಹಾನ್ ಪ್ರಭಂಜನ್ ತಿಳಿಸಿದರು.

ನಾಯಕಿ ಆಶಿಕಾ ರಾವ್, ಪ್ರಮುಖ ಪಾತ್ರಧಾರಿ ಯುವರಾಜ್ ಗೌಡ, ಹಾಡು ಬರೆದಿರುವ ಪ್ರಮೋದ್ ಜೋಯಿಸ್ ಹಾಗೂ ಛಾಯಾಗ್ರಾಹಕ ಸ್ವಾಮಿ ಮೈಸೂರು ಮುಂತಾದ ಚಿತ್ರತಂಡದ ಸದಸ್ಯರು “ಖೇಲಾ” ಇದ್ದರು.

Girl in a jacket
error: Content is protected !!