ಕ್ಯಾನ್ಸ್‌ರ್ ಗೆದ್ದು ಬಂದ ಶಿವಣ್ಣಗೆ ಅದ್ದೂರಿ ಸ್ವಾಗತ

Share

ಕ್ಯಾನ್ಸ್‌ರ್ ಗೆದ್ದು ಬಂದ ಶಿವಣ್ಣಗೆ ಅದ್ದೂರಿ ಸ್ವಾಗತ

byಕೆಂಧೂಳಿ

ಬೆಂಗಳೂರು,ಜ,೨೬-ಕ್ಯಾನ್ಸರ್ ಚಿಕಿತ್ಸೆ ಯಶಸ್ವಿಯಾದ ನಂತರ ಅಮೆರಿಕಾದಿಂದ ಬೆಂಗಲೂರಿಗೆ ಹಿಂತಿರುಗಿದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅವರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.
ಭಾನುವಾರ ಬೆಳಿಗ್ಗೆ ಕೆಂಪೇಗೌಡ ವಿಮಾನನಿಲ್ದಾಣದಲ್ಲಿ ಇಳಿದು ಬಂದ ಅವರನ್ನು ಅವರ ಸಾವಿರಾರು ಅಭಿಮಾನಿಗಳು ಹಾರ,ಹೂಗುಚ್ಚ ನೀಡಿ ಶುಭಕೋರಿ ಬರಮಾಡಿಕೊಂಡಿದ್ದು ಗಮನಸೆಳೆಯಿತು.
ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಹೀಗಾಗಿ ವಿಮಾನ ನಿಲ್ದಾಣದಲ್ಲಿ ಯಾವುದೇ ರೀತಿಯ ಸಂಭ್ರಮಾಚರಣೆಗೆ, ಸ್ವಾಗತಕ್ಕೆ ಅವಕಾಶವಿಲ್ಲ. ಈ ಕಾರಣದಿಂದ ಅಭಿಮಾನಿಗಳು ಸಾದಹಳ್ಳಿ ಟೋಲ್ ಬಳಿ ಅದ್ಧೂರಿ ಸ್ವಾಗತಿಸಿದರು.

ಇಂದು ಬೆಳಗ್ಗೆ ೮.೫೦ಕ್ಕೆ ಶಿವರಾಜ್ ಕುಮಾರ್ ಪ್ರಯಾಣಿಸಿದ ವಿಮಾನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಟರ್ಮಿನಲ್ ೨ ಮುಖಾಂತರ ಶಿವರಾಜ್ ಕುಮಾರ್ ನಿಲ್ದಾಣದಿಂದ ಹೊರಬಂದಿದ್ದಾರೆ. ಸಾದಹಳ್ಳಿ ಟೋಲ್‌ನಿಂದ ಶಿವರಾಜ್ ಕುಮಾರ್ ಮನೆಯವರೆಗೆ ಅದ್ಧೂರಿ ಸ್ವಾಗತವನ್ನು ಮಾಡಿದರು.
ತಮ್ಮ ನೆಚ್ಚಿನ ನಟ ಆರೋಗ್ಯವಂತರಾಗಿ ಮರಳಿ ಬಂದಿರುವುದು ಶಿವಣ್ಣ ಅಭಿಮಾನಿಗಳಿಗೆ ಇನ್ನಿಲ್ಲದ ಖುಷಿ ಕೊಟ್ಟಿದೆ. ಅಭಿಮಾನಿಗಳು ಕೇಕ್, ಹಾರ, ಹೂವುಗಳನ್ನು ತಂದಿದ್ದಾರೆ.ಶಿವರಾಜ್ ಕುಮಾರ್ ಅಭಿಮಾನಿಗಳು ಈಗಾಗಲೇ ಶಿವರಾಜ್ ಕುಮಾರ್‌ಗೆ ಜೈಕಾರ ಕೂಗಿದರು


ಮೂತ್ರ ಕೋಶದ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಶಿವರಾಜ್ ಕುಮಾರ್ ತಮ್ಮ ಪತ್ನಿ ಗೀತಾ ಮತ್ತು ಬಾಮೈದ ಸಚಿವ ಮಧು ಬಂಗಾರಪ್ಪ ಜೊತೆಗೆ ಡಿಸೆಂಬರ್ ೧೮ ರಂದು ಅಮೆರಿಕಕ್ಕೆ ಹೋಗಿದ್ದರು. ಡಿಸೆಂಬರ್ ೨೪ರಂದು ಶಿವರಾಜ್ ಕುಮಾರ್‌ಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆರೋಗ್ಯ ಸಂಬಂಧ ಶಿವರಾಜ್ ಕುಮಾರ್ ೬ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆ ಬಳಿಕ ಅವರ ಆರೋಗ್ಯದ ಬಗ್ಗೆ ವಿಡಿಯೊ ಮಾಡಿ ಅಪ್ ಡೇಟ್ ಕೊಟ್ಟಿದ್ದರು. ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ಸಹ ಮಾತನಾಡಿದ್ದರು.

Girl in a jacket
error: Content is protected !!