ಕುರಿಗಾಹಿಗಳ ಜತೆ ಊಟಸವಿದ ಪುನಿತ್ ರಾಜ್ ಕುಮಾರ್

Share

ನಟ ಪುನಿತ್ ರಾಜ್ ಕುಮಾರ್ ಕುರಿಗಾಹಿಗಳ ಜೊತೆ ಕಾಲಕಳೆದು ಅವರೊಂದಿಗೆ ಬೋಜನ ಸ್ವೀಕರಿಸುವ ಮೂಲಕ ಎಲ್ಲರ ಗಮನ ಸೆಳದಿದ್ದಾರೆ

ಗಂಗಾವತಿಯ ಅಂಜನಾದ್ರಿ ಬೆಟ್ಟದಲ್ಲಿಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭಾನುವಾರ ಕೊಪ್ಪಳದ ಗಂಗಾವತಿ ಸನಿಹದಲ್ಲಿರುವ ಅಂಜನಾದ್ರಿ ಬೆಟ್ಟಕ್ಕೆ ದೇವರ ದರ್ಶನಕ್ಕೆ ತೆರಳಿದ್ದರು. ಕೊರೋನಾ ನಿಯಮಗಳ ಕಾರಣಕ್ಕೆ ಪುನೀತ್ ರಾಜಕುಮಾರ್ ಗೆ ಪ್ರವೇಶಾವಕಾಶ ಸಿಗಲಿಲ್ಲ.

ಇದರಿಂದ ಬೇಸರಗೊಳ್ಳದೇ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಓಡಾಟ ನಡೆಸಿದ ಪುನೀತ್ ರಾಜಕುಮಾರ್, ಗಂಗಾವತಿ ಸಮೀಪದ ಹಳ್ಳಿಗಳಿಗೆ ಭೇಟಿ ನೀಡಿದರು.

ಕುರಿಗಾಹಿಗಳ ಬಳಿ ತೆರಳಿದ ಪುನೀತ್ ಅವರ ಮಕ್ಕಳನ್ನು ಎತ್ತಿಮುದ್ದಾಡಿ ಅವರೊಂದಿಗೆ ಕಾಲ ಕಳೆದರು. ಮಾತ್ರವಲ್ಲ ಅವರೊಂದಿಗೆ ಕಂಬಳಿಯಲ್ಲಿ ಕೂತು ಸಂಗಟಿ ಹಾಲು ಸವಿದರು.

” alt=”” aria-hidden=”true” />ಪುನೀತ್ ರಾಜಕುಮಾರ್ ಕುರಿಗಾಹಿಗಳೊಂದಿಗೆ ತೆಗೆಸಿಕೊಂಡಿರೋ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಇತ್ತೀಚಿಗೆ ಸಕ್ರೆಬೈಲ್ ಆನೆ ಶಿಬಿರಕ್ಕೆ ತೆರಳಿದ್ದ ಪುನೀತ್ ರಾಜಕುಮಾರ್ ಮಾವುತರು ಹಾಗೂ ಅವರ ಕುಟುಂಬದೊಂದಿಗೆ ಕಾಲಕಳೆದಿದ್ದರು.

ಜೆಮ್ಸ್ ಚಿತ್ರೀಕರಣ ಮುಗಿಸಿರುವ ಪುನೀತ್ ರಾಜಕುಮಾರ್ ಹೊಂಬಾಳೆ ಫಿಲ್ಸ್ಮಂ ಜೊತೆ ದ್ವಿತ್ವ ಸಿನಿಮಾಕ್ಕೆ ಸಜ್ಜಾಗುತ್ತಿದ್ದಾರೆ.

Girl in a jacket
error: Content is protected !!