ಐತಿಹಾಸಿಕ ವಿಭಿನ್ನ ಚಿತ್ರ ‘ಅಲ್ಲಮ ಪ್ರಭು’

Share

12ನೇ ಶತಮಾನದ ಇತಿಹಾಸವುಳ್ಳ ಶ್ರೀ ಅಲ್ಲಮಪ್ರಭು ಚಿತ್ರದ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯಗೊಂಡಿತು. ಡಾ.ಸಂಜಯ್ ಮತ್ತು ಅಂಕಿತಾ ಶಿವ-ಪಾರ್ವತಿಯಾಗಿ‌ ಅಭಿನಯಿಸಿದ ವಿಭಿನ್ನವಾದ ಹಾಡನ್ನು ಚಿತ್ರೀಕರಣದ ಕೊನೆಯ ಭಾಗವಾಗಿ ಬೆಂಗಳೂರಿನಲ್ಲಿ ಚಿತ್ರಿಸಲಾಯಿತು. ಚಿತ್ರವು ಕನ್ನಡ ಮಾತ್ರವಲ್ಲದೆ‌ ತೆಲುಗು, ಹಿಂದಿ, ಮರಾಠಿ, ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿರುವುದಾಗಿ ನಿರ್ಮಾಪಕರಲ್ಲೊಬ್ಬರಾದ‌ ಮಾಧವಾನಂದ‌.ವೈ ತಿಳಿಸಿದ್ದಾರೆ. ಇವರಿಗೆ ಮಹಾವೀರಪ್ರಭು‌ ನಿರ್ಮಾಣದಲ್ಲಿ ಜೊತೆಗೂಡಿದ್ದಾರೆ.

ಈ ಚಿತ್ರವನ್ನು ಶರಣ್ ಗದ್ವಾಲ್ ನಿರ್ದೇಶನ ಮಾಡುತ್ತಿದ್ದು, ಆರ್.ಗಿರಿ ಛಾಯಾಗ್ರಾಹಕರಾಗಿದ್ದಾರೆ. ಕುಮಾರ್ ಈಶ್ವರ್‌ ಸಂಗೀತ, ಬಿ.ಎಸ್.ಕೆಂಪರಾಜ್ ಸಂಕಲನ, ರಮೇಶ್ ಬಾಬು ವರ್ಣಾಲಂಕಾರ, ಬೆಳ್ಳಿ ಚುಕ್ಕಿ ವೀರೇಂದ್ರ ವಸ್ತ್ರಾಲಂಕಾರ‌ ಚಿತ್ರಕ್ಕಿದ್ದು, ಕಥೆ-ಚಿತ್ರಕಥೆಯನ್ನು ಮಾಧವಾನಂದ.ವೈ ರಚಿಸಿದ್ದಾರೆ. ಸಚಿನ್ ಸುವರ್ಣ, ನೀನಾಸಂ ಅಶ್ವತ್ಥ್, ರಮೇಶ್ ಪಂಡಿತ್, ಗಣೇಶ್‌ರಾವ್ ಕೇಸರ್‌ಕರ್, ನಾರಾಯಣಸ್ವಾಮಿ, ವಿಕ್ರಂ ಸೂರಿ, ರಘು ಭಟ್, ಯತಿರಾಜ್, ಶೃಂಗೇರಿ ರಾಮಣ್ಣ, ಶಿವಮೊಗ್ಗ ಭಾಸ್ಕರ್, ಕಾವೇರಿ ಶ್ರೀಧರ್, ಶಿವಕುಮಾರ್ ಆರಾಧ್ಯ, ಡಾ.ಚಿಕ್ಕಹೆಜ್ಜಾಜಿ ಮಹದೇವ್, ಸುರೇಶ್‌ರಾಜ್, ಸಂದೀಪ್ ಮಲಾನಿ, ಗುಬ್ಬಿ ನಟರಾಜ್, ಅವಿನಾಶ್ ಪಾಟೀಲ್, ರಮಣಾಚಾರ್ಯ, ರಾಧಾಕೃಷ್ಣ ರಾವ್, ರಾಜ್ ಉದಯ್, ಸಂಭ್ರಮಶ್ರೀ, ಅಮೃತಾ, ವರ್ಷಿಣಿ ಹೀಗೆ ಬಹುತಾರಾಗಣ ಚಿತ್ರದಲ್ಲಿದೆ.

 

 

Girl in a jacket
error: Content is protected !!