ಬೆಂಗಳೂರು, ಜು,26: ಕನ್ನಡ ಚಿತ್ರರಂಗದ ಖ್ಯಾತ ನಟಿ ಅಭಿನವ ಶಾರದೆ ಜಯಂತಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ನಿಧನರಾಗಿದ್ದಾರೆ.
ಅವರಿಗೆ 76 ವರ್ಷವಾಗಿತ್ತು. ಬಳ್ಳಾರಿ ಯಲ್ಲಿ ಜನಸಿದ್ದ ಅವರು ಜಗದೇಕ ವೀರ ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದ ಅವರು ಜೇನುಗೂಡು ಚಿತ್ರದಲ್ಲಿ ನಾಯಕಿ ಪಾತ್ರಮಾಡುವ ಮೂಲಕ ಅದ್ಬುತ ನಟನೆಗೆ ಹಲವಾರು ಜನ ಮನಸೋತಿದ್ದರು.500 ಚಿತ್ರಗಳಲ್ಲಿ ನಟಿಸಿದ ಅವರು ಬಹುಭಾಷೆ ನಟಿ ಕೂಡ.
ಜಯಂತಿ ಅವರು ಇಡೀ ದಕ್ಷಿಣ ಭಾರತದಲ್ಲೇ ಮೇರುನಟಿ ಎನಿಸಿಕೊಂಡಾಕೆ. ಜಯಂತಿ ಎಂದ ಕೂಡಲೇ ನೆನಪಾಗುವುದು ಎಡಕಲ್ಲು ಗುಡ್ಡದ ಮೇಲೆ ಮೇರು ಚಿತ್ರದ ವಿರಹಾ ನೂರು ನೂರು ತರಹ, ಹಾಗೆಯೇ ಓಬ್ಬವ್ವನ ಪಾತ್ರದಲ್ಲಿ ರಣಚಂಡಿ ಅವರಾತದಲ್ಲಿ ಕಣ್ಣನ್ನು ನಿಗಿ ನಿಗಿಯಾಗಿ ಕೆಂಪು ಮಾಡಿಕೊಂಡು ಸಾಕ್ಷಾತ್ ಒನಕೆ ಒಬ್ಬವ್ವನೇ ಮೈ ಮೇಲೆ ಬಂದಂತೆ ನಟಿಸಿ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿದೇ ಉಳಿದಿದ್ದಾರೆ. ಇಂದಿಗೂ ನಮ್ಮ ಯುವ ಜನರಿಗೆ ಒನಕೆ ಒಬ್ಬವ್ವ ಎಂದರೆ ನೆನಪಾಗುವುದು ಇದೇ ಜಯಂತಿ ಅವರು.
ಈ ಅಭಿನವ ಶಾರದೆ ಜಯಂತಿ ಅವರು ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಹಿಂದೆ ಭಾಷೆ ಸೇರಿದಂತೆ ೫೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಜನವರಿ ೬, ೧೯೪೫ರಲ್ಲಿ ಬಳ್ಳಾರಿಯಲ್ಲಿ ಜನಿಸಿದರು. ಜಯಂತಿ ಅವರ ಮೂಲ ಹೆಸರು ಕಮಲಾ ಕುಮಾರಿ.
ಅಭಿನಯ ಶಾರದೆ ಎಂಬ ಬಿರುದನ್ನು ಪಡೆದಿರುವ ನಟಿ ಜಯಂತಿ ಅವರ ಪತಿಯೂ ಕೂಡ ಒಬ್ಬ ಒಳ್ಳೆಯ ನಟ ಹಾಗೂ ನಿರ್ದೇಶಕರಾಗಿದ್ದರು. ಕನ್ನಡದಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿದ ಕೀರ್ತಿಯೂ ಅವರ ಪತಿಯ ಮುಡಿಗಿದೆ. ಅದಾಗಲೇ ಮದುವೆಯಾಗಿ ೪ ಮಕ್ಕಳ ತಂದೆ ಎನಿಸಿಕೊಂಡಿದ್ದ ಬಿ.ಕೆ.ಟಿ. ಶಿವರಾಂ ಅವರನ್ನು ಜಯಂತಿ ಅವರು ವಿವಾಹವಾದರು.
ಅವತ್ತಿನ ಕಾಲಕ್ಕೆ ಶಿವರಾಂ ಕೂಡ ಬಹು ಬೇಡಿಕೆಯ ನಟರಾಗಿದ್ದರು. ಕನ್ನಡ, ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸಿದ್ದರು. ಜಯಂತಿ ಅವರನ್ನು ಮದುವೆಯಾದ ಬಳಿಕ ನಿರ್ದೇಶನ ಕ್ಷೇತ್ರಕ್ಕೆ ಕಾಲಿರಿಸಿದರು. ಕುಲಗೌರವ, ದಾರಿ ತಪ್ಪಿದ ಮಗ, ಮಾತು ತಪ್ಪದ ಮಗನಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿದರು.
ಶಿವರಾಂ ಅವರ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರದಲ್ಲಿ ಕೂಡ ಜಯಂತಿ ಅವರು ನಟನೆ ಮಾಡಿದರು. ಜಯಂತಿ ಅವರನ್ನು ಮದುವೆಯಾದ ನಂತರ ಸಂಪೂರ್ಣವಾಗಿ ಕನ್ನಡ ಚಿತ್ರರಂಗಕ್ಕೆ ತಮ್ಮನ್ನು ಮೀಸಲಿರಿಸಿಕೊಂಡು ಸಾಕಷ್ಟು ಚಿತ್ರಗಳನ್ನು ನಿರ್ದೇಶನ ಮಾಡಿದರು. ಅಲಲ್ಲದೇ ನಿರ್ದೇಶನ ಮಾಡಿದ ಚಿತ್ರಗಳು ಕೂಡ ಸಾಕಷ್ಟು ಯಶಸ್ವಿಯನ್ನು ಗಳಿಸಿಕೊಂಡವು.ಆದರೆ ನಂತರ ದಾಂಪತ್ಯದಲ್ಲಿ ಬಿರುಕು ಬಿಟ್ಟಿತ್ತು ಹೀಗಾಗಿ ಜಯಂತಿ ಪತಿಯಿಂದ ದೂರವಾಗಿ ತಮ್ಮ ಪುತ್ರನ ಜೊತೆಗೆ ಬದುಕಿದ್ದರು.