ಆರ್.ಎನ್.ಸುದರ್ಶನ್‌ಚಿತ್ರರಂಗ ಪ್ರವೇಶಿಸಿದ ‘ವಿಜಯನಗರದ ವೀರಪುತ್ರ‘

Share


ಆರ್.ಎನ್.ಸುದರ್ಶನ್‌ಚಿತ್ರರಂಗ ಪ್ರವೇಶಿಸಿದ ‘ವಿಜಯನಗರದ ವೀರಪುತ್ರ‘

ಆರ್.ನಾಗೇಂದ್ರರಾಯರು ತಮ್ಮ ಸ್ವಂತ ನಿರ್ಮಾಣ ಸಂಸ್ಥೆ ‘ಆರ್.ಎನ್.ಆರ್.ಪಿಕ್ಚರ‍್ಸ್‘ ಲಾಂಛನದಲ್ಲಿ ತೆರೆಗೆ ತಂದ ಕಪ್ಪು ಬಿಳುಪು ಚಿತ್ರ ‘ವಿಜಯನಗರದ ವೀರಪುತ್ರ‘ ೧೯೬೧ರಲ್ಲಿ ತೆರೆಕಂಡಿತು. ನಾಗೇಂದ್ರರಾಯರ ಪುತ್ರ ಆರ್.ಎನ್.ಸುದರ್ಶನ್ ಚಿತ್ರರಂಗಕ್ಕೆ ಪದರ್ಪಿಸಿದ ಚಿತ್ರವೆಂಬ ಹೆಗ್ಗಳಿಕೆಗೆ ಚಿತ್ರ ಪಾತ್ರವಾಗಿದೆ. ಸ್ವತಃಆರ್.ನಾಗೇಂದ್ರರಾಯರೇ ನಿರ್ದೇಶಿಸಿದ ಈ ಚಿತ್ರಕೆ ಅವರ ಮತ್ತೊಬ್ಬ ಪುತ್ರ ಆರ್.ಎನ್.ಕೃಷ್ಣಪ್ರಸಾದರು ವಿ.ಮನೋಹರ್‌ಅವರೊಂದಿಗೆ ಸೇರಿ ಛಾಯಾಗ್ರಹಣ ನೀಡಿದ್ದಾರೆ. ಎನ್.ಲಕ್ಷ್ಮಿನಾರಾಯಣ್ ಹಾಗೂ ವಿ.ಸೋಮಶೇಖರ್ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜಗುರುವರಾಯನ ಪಾತ್ರದಲ್ಲಿ ಆರ್.ನಾಗೇಂದ್ರರಾವ್, ಆತನ ಪುತ್ರ ವಿಕ್ರಮನ ಪಾತ್ರದಲ್ಲಿ ಆರ್.ಎನ್.ಸುದರ್ಶನ್, ಕೃಷ್ಣದೇವರಾಯನ ಪಾತ್ರದಲ್ಲಿ ಉದಯ್‌ಕುಮಾರ್, ಸಾಮಂತರಾಜ ಅಂಬರಸುವಿನ ಪಾತ್ರದಲ್ಲಿ ಚಿ.ಉದಯಶಂಕರ್ ಅಭಿನಯಿಸಿದ್ದರು. ಕಲ್ಯಾಣಕುಮಾರ್, ಬಿ.ಸರೋಜಾದೇವಿ, ಸಂಧ್ಯಾ, ರಮಾದೇವಿ, ಬಾಲಕೃಷ್ಣ, ಹೆಚ್.ಆರ್.ಶಾಸ್ತ್ರಿ, ಗಣಪತಿ ಭಟ್, ನರಸಿಂಹರಾಜು, ಎಂ.ಜಿ.ಮರಿರಾವ್ ಮುಂತಾದವರು ಅಭಿನಯಿಸಿದರು.

ಎಂ.ಎಸ್.ವಿಶ್ವನಾಥನ್ ಹಾಗೂ ಬಿ.ಕೆ.ರಾಮಮೂರ್ತಿಜೋಡಿಯಾಗಿ ಈ ಚಿತ್ರಕ್ಕೆ ಸಂಗೀತ ನಿರ್ದೇಶಿಸಿದ್ದರು. ನಾಗೇಂದ್ರರಾಯರ ಪುತ್ರ ಸಾಹಿತಿಆರ್.ಎನ್.ಜಯಗೋಪಾಲ್ ಸಾಹಿತ್ಯ ನೀಡಿದರಲ್ಲದೆ ಗೀತೆಗಳನ್ನು ರಚಿಸಿದರು.ಚಿತ್ರದಲ್ಲಿ ಎಂಟು ಹಾಡುಗಳನ್ನು ಅಳವಡಿಸಲಾಗಿದ್ದು, ಪಿ.ಬಿ.ಶ್ರೀನಿವಾಸ್ ಹಾಡಿರುವ ‘ಅಪಾರ ಕೀರ್ತಿಗಳಿಸಿ ಮೆರೆವ ಭವ್ಯ ನಾಡಿದು..ಗೀತೆ ಜನಪ್ರಿಯಗೊಂಡಿತು.ಪಿ.ಬಿ.ಶ್ರೀನಿವಾಸ್, ಪಿ.ಸುಶೀಲ, ಎಲ್.ಆರ್.ಈಶ್ವರಿ, ಪಿ.ನಾಗೇಶ್ವರರಾವ್, ಜಮುನಾರಾಣಿ, ಪಿ. ಲೀಲ,ಎಸ್. ಜಾನಕಿ, ಮನಮೋಹನ ಠಾಕೂರ್ ಗೀತೆಗಳನ್ನು ಹಾಡಿದ್ದಾರೆ. ಚಿತ್ರದಲ್ಲಿ ಅಳವಡಿಸಲಾಗಿರುವ ’ಮಧುರಾ ಮೋಹನ ವೀಣಾವಾದನ…’ ಗೀತೆಯನ್ನು ಬಿ.ಸರೋಜಾದೇವಿಯವರ ನೃತ್ಯ ಸನ್ನಿವೇಶದಲ್ಲಿ ಬಳಸಿಕೊಳ್ಳಲಾಗಿದೆ.ಈ ಗೀತೆಯ ಧ್ವನಿಮುದ್ರಣದಲ್ಲಿ ಸಂಪೂರ್ಣವಾಗಿ ಸ್ತ್ರೀಯರ ವಾದ್ಯಗೋಷ್ಠಿಯನ್ನೇ ಬಳಸಿಕೊಳ್ಳಲಾಗಿತ್ತು.ನಟಕೆ.ಎಸ್.ಅಶ್ವತ್‌ಚಿತ್ರಕ್ಕೆ ಹಿನ್ನೆಲೆಯಲ್ಲಿ ಕಾಮೆಂಟರಿಕೊಟ್ಟಿರುವುದು ಈ ಚಿತ್ರದ ವಿಶೇಷತೆಗಳಲ್ಲಿ ಒಂದಾಗಿದೆ.

ದಕ್ಷಿಣ ಭಾರತದ ಅತ್ಯಂತ ದಕ್ಷ ಹಾಗೂ ವೈಭವದ ಸಾಮ್ರಾಜ್ಯ ರೂಪಿಸಿದ ವಿಜಯನಗರ ಚಕ್ರವರ್ತಿ ಕೃಷ್ಣದೇವರಾಯನ ಕಾಲದಲ್ಲಿ ನಡೆಯಲಾದ ಘಟನೆಯೊಂದನ್ನು ಆಧರಿಸಿದ ಘಟನೆಯನ್ನು ಕಲ್ಪನೆಯ ಮೂಸೆಯಲ್ಲಿ ಸಂಮಿಶ್ರಣ ಮಾಡಿದ ಕಥೆಯನ್ನು ಹೆಣೆಯಲಾಗಿದೆ. ಈ ವಿಷಯವನ್ನು ಚಿತ್ರದ ಆರಂಭದಲ್ಲಿ ಸ್ಪಷ್ಟಪಡಿಸಲಾಗಿದೆ. ಚಿತ್ರದಲ್ಲಿ ಆರ್.ನಾಗೇಂದ್ರರಾವ್ ಹಾಗೂ ಸುದರ್ಶನ್‌ತಂದೆ-ಮಗನ ಪಾತ್ರಗಳಲ್ಲಿಯೇ ಕಾಣಿಸಿಕೊಂಡಿದ್ದಾರೆ. ಶ್ರೀಕೃಷ್ಣದೇವರಾಯನ ಸಿಂಹಾಸನವನ್ನು ನಿರ್ಮಿಸಲೆಂದೇ ಆ ಕಾಲದಲ್ಲಿ ಒಂದೂವರೆ ಲಕ್ಷ ರೂ.ವೆಚ್ಚ ಮಾಡಲಾಗಿತ್ತು.ಚಿತ್ರದಅಂತ್ಯದಲ್ಲಿ ನಾಗೇಂದ್ರರಾವ್ ಹಾಗೂ ಸುದರ್ಶನ್ ನಡುವೆ ನಡೆಯುವ ಕತ್ತಿಕಾಳಗವನ್ನು ಸಹಜ ಹಾಗೂ ಆಕರ್ಷಣೀಯವಾಗಿಚಿತ್ರಿಸಲಾಗಿತ್ತು.

ಚಿತ್ರಕ್ಕೆ ೭ರಿಂದ ೮ ಲಕ್ಷರೂ. ವೆಚ್ಚ ಮಾಡಲಾಗಿತ್ತು.ಮದರಾಸಿನ ಮೆಜೆಸ್ಟಿಕ್ ಸ್ಟುಡಿಯೋದಲ್ಲಿ ಚಿತ್ರದ ಚಿತ್ರೀಕರಣ ನಡೆಯಿತು.ಚಿತ್ರೀಕರಣದ ಸಮಯದಲ್ಲಿ ವಿಶಾಲ ಹಾಗೂ ಭವ್ಯವಾದ ಸೆಟ್ಟಿನಲ್ಲ್ಲಿ ನರ್ತಕಿಯರು, ಸಿಪಾಯಿಗಳು, ಕತ್ತಿವರಸೆಯಲ್ಲಿ ನಿಷ್ಣಾತರಾದವರು ತುಂಬಿತುಳುಕುತ್ತಿದ್ದರು. ಅದ್ದೂರಿ ಹಿಂದಿ ಚಿತ್ರವನ್ನುತಯಾರಿಸಲಾಗುತ್ತಿದೆಯೇ ಎಂಬ ಭ್ರಮೆ ಮೂಡುವಂತಿತ್ತು.ಐತಿಹಾಸಿಕವಾದ ಹಂಪೆಯಲ್ಲಿಯೇಚಿತ್ರ ಬಹುಪಾಲು ಚಿತ್ರಣವಾಗಿದೆ.ಚಿತ್ರ ಪೂರ್ಣಗೊಂಡ ನಂತರ ಚಿತ್ರವನ್ನು ತೆಲುಗು ಹಾಗೂ ತಮಿಳು ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಯಿತು.

ಕೃಷ್ಣದೇವರಾಯನ ಸಾಮ್ರಾಜ್ಯದಲ್ಲಿ ಗುರುವರಾಯ ಎಂಬ ಸಾಮಂತರಾಜನೊಬ್ಬನಿರುತ್ತಾನೆ.ಕೃಷ್ಣದೇವರಾಯನನ್ನು ಕೊಂದು ವಿಜಯನಗರ ಸಾಮ್ರಾಜ್ಯವನ್ನು ತನ್ನದಾಗಿಸಿಕೊಳ್ಳುವ ದುರಾಲೋಚನೆ ಮಾಡಿದ ಗುರುವರಾಯ ಕೃಷ್ಣದೇವರಾಯನನ್ನು ಹತ್ಯೆ ಮಾಡುವ ಸಂಚು ಮಾಡುತ್ತಾನೆ. ಶಿಶುವಾಗಿದ್ದಾಗಲೇ ತಂದೆಯಿಂದ ಬೇರ್ಪಟ್ಟು ಬೆಳೆಯುತ್ತಿದ್ದ ಹಾಗೂ ಪರಸ್ಪರತಂದೆ ಮಗನೆಂಬ ಅರಿವಿಲ್ಲದ ಗುರುವರಾಯನ ಮಗ ವಿಕ್ರಮ ಈ ಕೃತ್ಯಗಳ ವಿರುದ್ಧತಿರುಗಿ ಬೀಳುತ್ತಾನೆ. ಬಹಮನಿ ಸುಲ್ತಾನನ ಜೊತೆ ಸೇರಿಕೊಂಡು ಕೃಷ್ಣದೇವರಾಯನನ್ನು ಕೊಲ್ಲಲು ಹೂಡಿದ್ದ ಗುರುವರಾಯನಕುತಂತ್ರವನ್ನು ವಿಕ್ರಮ ಬಯಲಿಗೆಳೆಯುತ್ತಾನೆ. ವಿಕ್ರಮ ಕೃಷ್ಣದೇವರಾಯನ ಪ್ರೀತಿಗೆ ಪಾತ್ರನಾಗುತ್ತಾನೆ. ಇದು ಚಿತ್ರದಕಥೆ.

ವಿಶ್ವನಾಥನ್-ರಾಮಮೂರ್ತಿ: ಕನ್ನಡದಲ್ಲಿ ಭಕ್ತ ಮಾಕಂಡೇಯ ಹಾಗೂ ವಿಜಯನಗರದ ವೀರಪುತ್ರ ಚಿತ್ರಗಳಿಗೆ ಸಂಗೀತ ನೀಡಿದಎಂ.ಎಸ್. ವಿಶ್ವನಾಥನ್ ಮತ್ತು ಟಿ. ಕೆ. ರಾಮಮೂರ್ತಿಜೋಡಿ ೧೯೫೨ರಲ್ಲಿ ಬಿಡುಗಡೆಯಾದ ಪನಂ ತಮಿಳು ಚಿತ್ರದಿಂದ ಆರಂಭಿಸಿ ೧೦೦ಕ್ಕೂ ಹೆಚ್ಚು ತಮಿಳು, ತೆಲುಗು ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ರಾಮಮೂರ್ತಿ ೯೧ನೆಯ ವಯಸ್ಸಿನಲ್ಲಿ ೨೦೧೩ರಲ್ಲಿ ಹಾಗೂ ವಿಶ್ವನಾಥನ್‌ಅವರು ೨೦೧೫ರಲ್ಲಿ ನಿಧನರಾದರು.

 

 

 

Girl in a jacket
error: Content is protected !!