ಅರಸು ಅಂತಾರೆ ನಿರ್ದೇಶನದ ನೂತನ ಚಿತ್ರಕ್ಕೆ ಅಮೃತ ಅಯ್ಯರ್ ನಾಯಕಿ

Share

ಅರಸು ಅಂತಾರೆ ನಿರ್ದೇಶನದ ನೂತನ ಚಿತ್ರಕ್ಕೆ ಅಮೃತ ಅಯ್ಯರ್ ನಾಯಕಿ

 by-ಕೆಂಧೂಳಿ

ತಮ್ಮ ಹಾಡುಗಳ ಮೂಲಕ ಜನಪ್ರಿಯರಾಗಿರುವ ಗೀತರಚನೆಕಾರ ಹಾಗೂ “ಲವ್ ಇನ್ ಮಂಡ್ಯ” ಚಿತ್ರದ ನಿರ್ದೇಶಕ ಅರಸು ಅಂತಾರೆ ನಿರ್ದೇಶನದ ನೂತನ ಚಿತ್ರದ ನಾಯಕರಾಗಿ ತಮ್ಮ ಅಮೋಘ ನಟನೆಯಿಂದ ಅಭಿಮಾನಿಗಳ ಮನ ಗೆದ್ದಿರುವ ಗೋಲ್ಡನ್ ಸ್ಟಾರ್ ಗಣೇಶ್ ನಟಿಸುತ್ತಿದ್ದಾರೆ. ತೆಲುಗಿನ “ಹನುಮಾನ್” ಚಿತ್ರದ ಖ್ಯಾತಿಯ ಅಮೃತ ಅಯ್ಯರ್ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಅಮೃತ ಅಯ್ಯರ್ ಸ್ಯಾಂಡಲ್ ವುಡ್ ಪ್ರವೇಶಿಸುತ್ತಿದ್ದಾರೆ.

SNT ಎಂಟರ್ಪ್ರೈಸಸ್ ಲಾಂಛನದಲ್ಲಿ ರವಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರ ಕೌಟುಂಬಿಕ ಕಥಾಹಂದರ ಹೊಂದಿದೆ. ಅರಸು ಅಂತಾರೆ ಯವರ ಚಿತ್ರಕಥೆಗೆ ಮಹೇಶ್ ದೇವ್ ಡಿ ಎನ್ ಪುರ ಹಾಗೂ ಸಂಭಾಷಣೆಗೆ ಕ್ರಾಂತಿ ಕುಮಾರ್ ಹಾಗೂ ಶೈಲೇಶ್ ಕುಮಾರ್ ಸಾಥ್ ನೀಡಿದ್ದಾರೆ. ಸುಜ್ಞಾನ್ ಛಾಯಾಗ್ರಹಣ, ಅಕ್ಷಯ್ ಪಿ ರಾವ್ ಸಂಕಲನ, ವಿಜಯ್ ರಾಕೇಶ್ ಕಶ್ಯಪ್ ಮತ್ತು ಕೀರ್ತಿ ಕೃಷ್ಣಪ್ಪ ಅವರ ಸಹ ನಿರ್ದೇಶನವಿರುವ ಈ ನೂತನ ಚಿತ್ರಕ್ಕೆ ರಮೇಶ್ ಅವರ ನಿರ್ಮಾಣ ನಿರ್ವಹಣೆ ಇದೆ. ಇನ್ನೂ ನಿರ್ದೇಶಕರು ಮೂಲತಃ ಗೀತರಚನೆಕಾರರಾಗುವುದರಿಂದ ಚಿತ್ರದ ಹಾಡುಗಳು ಸಂಗೀತ ಪ್ರಿಯರಿಗೆ ರಸದೌತಣ ನೀಡುವುದಂತು ಖಚಿತ.

ಏಪ್ರಿಲ್ 6 ರಂದು ನಮ್ಮ ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ‌. ಏಪ್ರಿಲ್ 7 ರಿಂದ ಮೊದಲ ಹಂತದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಮೈಸೂರು ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ ಎಂದು ತಿಳಿಸಿರುವ ನಿರ್ದೇಶಕ ಅರಸು ಅಂತಾರೆ ಅವರು ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.

Girl in a jacket
error: Content is protected !!