ಬಾಲಿವುಡ್ ನಟಿ ಕಂಗನಾ ರಣಾವತ್ ಯಾವಾಗಲೂ ಸುದ್ದಿಯಲ್ಲಿರುತ್ತಾರೆ ಅಂತ ಸುದಿದಗಳನ್ನು ತಮ್ಮ ಇನ್ಸ್ಟ್ರಾಗ್ರಾಮ್ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಹೌದು ಈಗ ತಮ್ಮ ತಾಯಿಯ ಬಗ್ಗೆ ಹೇಳಿಕೊಂಡಿದ್ದಾರೆ ಕೊರೊನಾ ಸಂಕಷ್ಟದ ಈ ವೇಳೆ ಮನೆಯಲ್ಲೆ ಇರುವುದರಿಂದ ಅಮ್ಮನ ಮಡಿಲಿನಲ್ಲಿ ಹಾಯಾಗಿ ಕಾಲ ಕಳೆಯುತ್ತಿರುವೆ ಅಮ್ಮನ ಮಡಿಲಿಲ್ಲಿರುವುದು ಅದೆಷ್ಟು ಖುಷಿ ಎಂದು ಹೇಳಿಕೊಂಡಿದ್ದಾರೆ
ಇಡೀ ಜಗತ್ತಿನ ಖುಷಿ ಒಂದ್ಕಡೆಯಾದ್ರೆ, ಅಮ್ಮನ ಮಮತೆಯ ಮಡಿಲು ಇನ್ನೊಂದು ಕಡೆ ಎಂದು ಕ್ಯಾಪ್ಶನ್ ಕೊಟ್ಟು ಅಮ್ಮ ಕೈಯಿಂದ ತಲೆಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿಕೊಳ್ಳುತ್ತಿರುವ ಫೋಟೋವನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಕೊರೊನಾ ಸೋಂಕಿನಿಂದ ವಾಸಿಯಾದ ಕಂಗನಾ ಮುಂಬೈ ಬಿಟ್ಟು ತಮ್ಮ ತವರೂರು ಸೇರಿದ್ದಾರೆ. ಹಿಮಾಚಲದಲ್ಲಿ ತಮ್ಮ ಕುಟುಂಬದ ಜೊತೆಗೆ ಕಾಲಕಳೆಯುತ್ತಿದ್ದಾರೆ. ಅಮ್ಮನ ಪಕ್ಕದಲ್ಲಿ ಕುಳಿತು ಕೋಟಿ ಸುಖಕ್ಕಿಂತ ಅಮ್ಮನ ಮಡಿಲೇ ಮೇಲು ಅಂತಿದ್ದಾರೆ.
ಸಣ್ಣ ಪುಟ್ಟ ವಿಚಾರಗಳಿಗೆ ತಗಾದೆ ಎತ್ತುವ ಮೂಲಕವಾಗಿ ಸದಾ ಸುದ್ದಿಯಲ್ಲಿರುವ ಕಂಗನಾ ಅವರ ಈ ಪೋಸ್ಟ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕಂಗನಾ ಟ್ವಿಟ್ಟರ್ ಖಾತೆ ನಿಷ್ಕ್ರಿಯಗೊಂಡ ಮೇಲೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ.