ಸಿದ್ದಲಿಂಗಯ್ಯನವರ ‘ಊರುಕೇರಿ’

Share
ಡಾ.ಶಿವಕುಮಾರ್ ಕಂಪ್ಲಿ
ಸಹಾಯಕ ಪ್ರಾಧ್ಯಾಪಕರು,
ದಾವಣಗೆರೆ ಪ್ರಥಮ ದರ್ಜೆ ಕಾಲೇಜು
ಸಿದ್ದಲಿಂಗಯ್ಯನವರ ‘ಊರುಕೇರಿ’
ಅನ್ನ ಮತ್ತುಅರಿವಿನ ವಿಕಾಸದ ಭಿನ್ನದಾರಿಯ  ಆತ್ಮಕಥನ  ಮಾನವರಚರಿತ್ರೆಅನ್ನದಅನ್ವೇಷಣೆಯಿಂದಆರಂಭಗೊಂಡುಅರಿವಿನ   ವಿಕಾಸದೊಂದಿಗೆಪೂರ್ಣಗೊಳ್ಳುತ್ತದೆ.ಇಲ್ಲಿ ನಾವು ಅರಿವೆಂದರೆ ಲೋಕಜ್ಞಾನವೋ ಅಲೌಕಿಕ ಜ್ಞಾನವೋ ಎಂಬ ಪ್ರಶ್ನೆಗಳನ್ನ ಕೇಳಿಕೊಳ್ಳದೆ ಪ್ರಾಣಿಬದುಕಿಗಿಂತಲೂ ಭಿನ್ನವಾದುದುಮಾನವನಜೀವನಎಂಬ ಸರಳ      ಸಂಗತಿಯನ್ನಉದಾಹರಣೆಯಾನ್ನಾಗಿನೀಡಬಹುದೇನೋ.ಚರಿತ್ರೆಯ ಈ ಆವರಣದೊಳಗೆ ಎಷ್ಪೋ ಸಲ ‘ಮಾನವಜನ್ಮದೊಡ್ಡದು’ಎನ್ನುವಾಗಲೇಮಾನವರುಪ್ರಾಣಿಗಳಿಗಿಂತಲೂ ಕೀಳಾಗಿ ನಡೆದುಕೊಂಡ ವಿವರಗಳನ್ನ ಕಾಣಬಹುದು. ‘ನೀನಾರಿಗಾದೆಯೋ ಎಲೆಮಾನವ?’ಎಂದು ಪ್ರಶ್ನಿಸುವ ಗೋವಿನ ಪ್ರಶ್ನೆಯೇ ಈ ನೆಲೆಯದು.ಮನುಷ್ಯರೊಳಗೆ ಎಷ್ಟೋ ಸಲ ನಾಲಿಗೆ ಮೇಲೆಯೇನೆಲೆಗಾಣದ ಮಾತು,ಸತ್ಯವಂತಿಕೆ, ಕರುಣೆ ಮತ್ತು ಸಹಕಾರ ಮನೋಭಾವಮನುಷ್ಯನಿಗಿಂತಲೂಕೀಳಾದ ಪ್ರಾಣಿಲೋಕದಲ್ಲಿದೆ.
ಅಕ್ಷರವು ಮಾನವ ಲೋಕದ ಬಹುಬಗೆಯ ಬದುಕನ್ನಪ್ರಾಚೀನವೇದಕಾಲೀನಜಗತ್ತಿನಿಂದಹಿಡಿದುಅತ್ಯಾಧುನಿಕವಾದಜಾಗತಿಕಜಗತ್ತಿನತನಕದಾಖಲಿಸುತ್ತಾ ಬಂದಿದೆ.ಕಾಡಿನ,ನಾಡಿನ,ಮಹಾನಗರದ ಸಂಸ್ಕøತಿಗಳು ಹೇಗೆ ಉದ್ದಕ್ಕೂ ಭಿನ್ನಭಿನ್ನ ಹೆಜ್ಜೆಗಳನ್ನ ಇಟ್ಟಿವೆಎಂಬುದನ್ನ ಇವುತೋರುತ್ತವೆ.ಮಾನವರಮುಖ್ಯವಾದಬೇರುಅನ್ನದಲ್ಲಿದ್ದರೂಅವರಗುರಿಅರಿವಿನಲ್ಲಿದೆ. ಅಕ್ಷರ ಲೋಕವು ಅನ್ನದೇವರ ಮುಂದೆಇನ್ನುದೇವರುಉಂಟೆ?ಎಂದು ಪ್ರಶ್ನಿಸಿದರೆ ಮಾತಿನಜಾನಪದ ಲೋಕ ಅನ್ನ ಬೇಡುವವನನ್ನೇದೇವರೆನ್ನುತ್ತದೆ.ಸಾಕ್ಷಾತ್ ಶಿವ,ಶ್ರೀಮನ್ ನಾರಾಯಣಎಂದೇ ಭಾವಿಸುತ್ತಾರೆ.
ಇಂದಿಗೂ ನಮ್ಮ ಕಥೆಗಳಲ್ಲಿ ಬಿಕ್ಷೆಗೆ ಬರುವವರುದೇವ ಸಮಾನರು.ಕೆಲ ಕಥೆಗಳಲ್ಲಿ ದೇವರೇ ಬಿಕ್ಷೆಗೆ ಬರುತ್ತಾನೆ.ಇಲ್ಲಿದೇವರುನಮ್ಮ ನಿಜದಅರಿವಿನ ಪರೀಕ್ಷೆಗೆ ಬರುವರೆಂಬ ನಿಲುವಿದೆ.ಭಾರತವು ವಿಕಾಸಗೊಂಡಿರುವಇಂಡಿಯಾವಾದರೂಇದರೊಳಗಿನ್ನೂ ಈ ಬೇಡುವ ವೃತ್ತಿಯ ಅನೇಕ ಸ್ಥರಗಳು ಜೀವ ಸಂಸ್ಸøತಿಗಳು ಹಳ್ಳಿಗಳ ಒಡಲೊಳಗೆ ಜೀವಂತವಾಗಿವೆ.ಶರಣರು, ದಾಸರು,ಸ್ವಾಮಿಗಳು,ಬ್ರಾಹ್ಮಣ ಕಂತೆ ಬಿಕ್ಷೆಯವರು ಸೂಕ್ಷ್ಮವಾಗಿ ನೋಡಿದಾಗದೇವರಾಗುವರೇ ವಿನಃ ತಳವರ್ಗಗಳ ಬಿಕ್ಷುಕರು ಆ ಗೌರವ ಪಡೆದವರಲ್ಲ ಎಂಬ ಸತ್ಯವನ್ನೂ ನಾವು ಗಮನಿಸಬೇಕಾಗಿದೆ.
 ಬೇಡುವ ನೆಲೆಯ ಮೂಲಕ ಸಮಾಜವನ್ನನೋಡುವುದಾದರೆಅನ್ನ,ವಸತಿ,ಉದ್ಯೋಗ ಎಂಬ ಪ್ರಾಥಮಿಕ ಸೌಲಭ್ಯಗಳಲ್ಲಿ ಮೊದಲ ಸೌಲಭ್ಯವೇಇನ್ನೂಅಧೋ ಲೋಕದ ವರ್ಗಗಳಿಗೆ ಸಿಕ್ಕಿಲ್ಲ.’ಅನ್ನ ಭಾಗ್ಯ’ ಎಂಬ ಜನಪ್ರಿಯವಾದ ಸರ್ಕಾರದಯೋಜನೆ ಈ ನೆಲೆಯಲ್ಲಿ ನಮ್ಮ ವಿಕಾಸ ಭಾರತದ ಕರಾಳ ಮುಖದ ವ್ಯಂಗ್ಯದಂತೆಯೇಕಾಣಬಲ್ಲದು.ಒಳಗಿನ ಒಳಗಿನ ಒಳ ಕೇರಿಗಳ ಭಾರತದಲ್ಲಿಇನ್ನೂ ವಿಕಾಸವೆಂಬುದು ಬಹುದೂರದಲ್ಲಿದೆ.ವ್ಯಕ್ತಿವಿಕಾಸ ಹೊಂದಿದದಲಿತ ಆತ್ಮಕಥೆಗಳ ಕಾಲುದಾರಿಗಳು ಅಂತಹಅಗಣಿತಅರ್ಥ ಭಾರತಗಳ ಎದುರು ಸಾಂಸ್ಕøತಿಕ ಭಾರತಗಳ ಒಳಗಿನ ತಾಣಗಳನ್ನ ಮೊಗೆ ಮೊಗೆದು ನೀಡುತ್ತಿವೆ.
ದಲಿತ ಬರಹಗಳಲ್ಲಿ ನಗರಕಾಣದ ಬಡತನಗಳನ್ನ ನೋಡಬಹುದಾಗಿದೆ.ಈ ಆತ್ಮಕಥನಗಳು ಅನ್ನದ ಕಥೆಗಳೂ ಹೌದು, ಅರಿವಿನ ವಿಸ್ತಾರದ ಕಥೆಗಳೂ ಹೌದು.ಧಾರ್ಮಿಕ ಹಾಗೂ ಸಾಮಾಜಿಕ ಬಂಡುಕೋರುತನದ ಕಥೆಗಳೂ ಹೌದು.ಅನ್ನಕ್ಕಾಗ್ಕಿಅಂಡಲೆವ ಚಲನಶೀಲ ಕುಟುಂಬದಬದುಕು ಹೇಗೆಅನ್ನದಸ್ಥಾಯೀ ನೆಲೆಯೊಂದಿಗೆ‘ಊರುಕೇರಿ ಭಾಗ-1’ ಮುಕ್ತಾಯಗೊಂಡಿದೆ.
ಇದು ವರ್ಗಗಳಕಥೆಯಲ್ಲಕೆಳವರ್ಗದ ಕಥೆಯೆಂಬುದುಗಮನೀಯ.ದಮನಿತ ಲೋಕದ ನಾನಾ ನೋವಿನ, ಬವಣೆಗಳ ಜಾತಿಕೇಂದ್ರಿತಬಾಳು ಹೇಗೆ ಬೆಂಕಿಯ ಬಾವಿಯ ಮೇಲೆ ನಗುವಿನ ಕೂದಲ ಸೇತುವೆಯಂತೆ ನಡೆಯುತ್ತಿರುತ್ತದೆಎಂಬುದನ್ನ ಲೇಖಕರಿಲ್ಲಿತೋರುತ್ತಾ ಹೋಗಿದ್ದಾರೆ.ಇಲ್ಲಿ ಮಾನವರೇ ಕೀಳು ಪ್ರಾಣಿಗಳಂತೆ ನೋವು,ಹಿಂಸೆ,ಅವಮಾನಗಳನ್ನ ಅನುಭವಿಸುತ್ತಲೇಅನ್ನಕಾಣುತ್ತಾರೆ ಎಂಬ ಚಿತ್ರಗಳಿವೆ.ಹಾಗಾಗಿ ಇದು ಮಾನವತ್ವವನ್ನೇ ಮರೆತವರಎದುರು ನಿಂತಕನ್ನಡಿಯಂತೆಕಾಣುತ್ತದೆ.“ ಎಂದಿನಂತೆಹುಡುಗರೆಲ್ಲನಮ್ಮಮನೆಯಪಕ್ಕದಮೋಟುಗೋಡೆಯಮೆಲೆನಿಂತುಅಪ್ಪಅಮ್ಮಂದಿರನ್ನುಕೂಗುತ್ತಿದ್ದಾಗನಮಗೆಒಂದುನೋಟ ಕಾಣಿಸಿತು. ಐನೋರಹೊಲದಲ್ಲಿಇಬ್ಬರುಮನುಷ್ಯರಹೆಗಲಮೇಲೆನೊಗಹೂಡಿಇನ್ನಿಬ್ಬರು ಹೊಲ ಊಳುತ್ತಿದ್ದರು.ನೊಗ ಹೊತ್ತ ಆ ಇಬ್ಬರು ಮನುಷ್ಯರು ಎತ್ತುಗಳಂತೆ ಮುಂದೆ ಹೋಗುತ್ತಿದ್ದರೆಇನ್ನೊಬ್ಬ ಹಿಂದಿನಿಂದಚಾಟಿತಿರುಗಿಸುತ್ತ ಉಳುಮೆ ಮಾಡುತ್ತಿದ್ದದೃಶ್ಯ ಮೋಜಿನಂತೆಕಂಡರೂ ನೊಗ ಹೊತ್ತಿದ್ದಇಬ್ಬರು ವ್ಯಕ್ತಿಗಳಲ್ಲಿ ಒಬ್ಬ ನನ್ನಅಪ್ಪಎಂದುಗೊತ್ತಿದ್ದಕ್ಷಣದಿಂದ ನನ್ನಲ್ಲಿ ವಿಚಿತ್ರವಾದ ಸಂಕಟ ಶುರುವಾಯಿತು. ಹುಡುಗರಿದ್ದಜಾಗಕ್ಕೆ ಬಂದ ಕೆಲವು ಹೆಂಗಸರು‘ಪಾಪದ್ಯಾವಣ್ಣನಿಗೆಎಂಥ ಕಷ್ಟಬಂತು’ಎಂದದ್ದುನನ್ನ ಕಿವಿಗೆಬಿದ್ದುಮನಸ್ಸಿನನೋವುಇಮ್ಮಡಿಯಾಯಿತು.ಗದ್ದೆಯಲ್ಲಿಎತ್ತಾಗಿದುಡಿದನನ್ನಪ್ಪಸಂಜೆಮನೆಗೆಬಂದಾಗಅವ್ವ ಅವನಭುಜಕ್ಕೆಎಣ್ಣೆ ಕಾಯಿಸಿ ಹಚ್ಚುತ್ತಿದ್ದಳು.”ತಳವರ್ಗಕ್ಕೆ ಅನ್ನ ಎಂಬ ಶಬ್ದವೇ ಕನಸು. ಕುಂ.ವೀ.ಯವರುತಮ್ಮದೇವರ ಹೆಣಕಥೆಯಲ್ಲಿಠೋಣ್ಣಿಯನ್ನತೋರುತ್ತಾಆತಅನ್ನ ಎಂಬ ಶಬ್ದ ಕೇಳಿದೊಡನೇ ಅಹ್ಹಹ್ಹಾಎಂದು ನಗುತ್ತಿದ್ದಎಂದುಆತನ ಮನೆಯ ಹಸಿವಿನ ಸವಿಸ್ತಾರವನ್ನ ಬೆಂಕಿ ಕಾಣದಒಲೆಯಿಂದ ಹಿಡಿದು ನಾಯಿ ಬೆಕ್ಕು ಮತ್ತುಕುಟುಂಬದವರೆಲ್ಲರ ಹಸಿವನ್ನ ವಿವರಿಸುತ್ತಾರೆ.ಸಿದ್ಧಲಿಂಗಯ್ಯನವರೂ“ಬಾಲ್ಯದಲ್ಲಿಅನ್ನಕಾಣುವುದೇಅಪರೂಪ.ಕೆಲವು ದಿನ ಗೆಣಸನ್ನ ಬೇಯಿಸಿ ತಿನ್ನುತ್ತಿದ್ದೆವು.ಕೆಲವುದಿನ ಕಡಲೆ ಪುರಿತಿಂದು ನೀರುಕುಡಿದು ಮಲಗುತ್ತಿದ್ದೆವು.ಚೂರು ಹೊಲದಲ್ಲಿ ಬೆಳೆದದ್ದು ತಂದೆಯ ಮೇಲಿದ್ದ ಸಾಲದ ಬಡ್ಡಿಗೆ ಸಾಕಾಗುತಿತ್ತು.ಕೂಲಿಯ ಹಣಕುಟುಂಬದ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ.”ಎನ್ನುತ್ತಾ… ಬಾಲ್ಯದಲ್ಲಿ ಸಿಗುತ್ತಿದ್ದ ಚೂರುಅನ್ನದ ಮುಂದೆಅಸ್ಪøಷ್ಯತೆಯತಾರತಮ್ಯ ಮುಖ್ಯವೇ ಅನಿಸುವುದಿಲ್ಲ.ಈ ನಿಲುವು ಅವರು ಸರ್ಕಾರಿಕಾಲೇಜು ಸೇರುವತನಕವೂಅವರಲ್ಲಿ ಉಳಿದು ಕೊಂಡದ್ದನ್ನಇಲ್ಲಿಗುರ್ತಿಸಬಹುದು.“ಆಗಎಲ್ಲೆಲ್ಲೂಬರಗಾಲಬಂದುಅನ್ನಕ್ಕಾಗಿಜನಕಣ್ಣುಬಾಯಿಬಿಡುವಂತಾಯಿತು.ಮಳೆ ಬರಲೆಂದುಜನಅಲ್ಲಲ್ಲಿ ಪರ ಮಾಡತೊಗಿದರು.ಪರಕ್ಕೆ ಹೋದರೆ ಹೊಲೆಯರನ್ನುಒಂದು ಮೂಲೆಯಲ್ಲಿಕೂರಿಸುತ್ತಿದ್ದರು.ಮೇಲು ಜಾತಿಯ ಪಂಕ್ತಿಗಳ ಊಟ ಆದ ಮೇಲೆ ನಮ್ಮಕಡೆ ಗಮನ ಹರಿಯುತ್ತಿತ್ತು.ಅನ್ನ ಸಿಕ್ಕಿದರೆ ಸಾಕೆಂಬ ಭಾವನೆಇದ್ದುದರಿಂದ ಈ ತಾರತಮ್ಯವನ್ನ ನಾನು ಆಗ ತಲೆಗೆ ಹಚ್ಚಿಕೊಳ್ಳುವುದು ಸಾಧ್ಯವಿರಲಿಲ್ಲ.”ಹೋಟೇಲಿನವರುಇತರರಿಗಿಂತದೂರದಲ್ಲಿನಮ್ಮಿಬ್ಬರನ್ನು (ಅಪ್ಪ-ಮಗ) ಕೂರಿಸುತ್ತಿದ್ದರು.ಅವರುಕೊಡುತ್ತಿದ್ದಇಡ್ಲಿಯನ್ನುತಿನ್ನಲು ಪರಮಾನಂದವಾಗುತ್ತಿತ್ತು.ಇಡ್ಲಿಯರೂಪ ಮೃದುತ್ವದರುಚಿಯಲ್ಲಿ ಮುಳುಗಿ ಹೋಗಿರುತ್ತಿದ್ದ ನಮಗೆ ಬೇರೆ ವಿಚಾರಗಳು ಅನಾವಶ್ಯಕವಾಗಿದ್ದವು.ಎಂದೂಕಾಣದ ಪೂರಿ ಚಿತ್ರನ್ನಗಳ ಮುಂದೆ ಹೊಲದಐನೋರು ಉದಾರಿಗಳಂತೆ ಕಾಣುತ್ತಿದ್ದರು.ಎಂದು ಬೇರೆ ಬೇರೆ ಚಿತ್ರಗಳನ್ನ ನೀಡಿರುವ ಲೇಖಕರು‘ಬೇಡುವವನು ನೀಡುವವನನ್ನಕಾಣುವ ಭಾರತೀಯ ಪಾರಂಪರಿಕ ಹಾದಿಯತ್ತ ಹೊಸ ನೋಟ ಬೀರುತ್ತಾರೆ.
ಅಕ್ಷರ ಅವರೊಳಗೆ ವಿಕಾಸಗೊಂಡಂತೆಲ್ಲಾಅವರ ಭಿನ್ನಕಾಲುದಾರಿಯ ಪಯಣಆಧುನಿಕ ರಸ್ತೆಗಳ ನಗರಗಳಲ್ಲಿಯೇ  ಗಟ್ಟಿಗೊಂಡಿತು.ಹಾಗೆ ನೋಡಿದರೆಲೇಖಕರಬೇಡುವ ಸ್ಥಿತಿಗೆ ಬೆಂಕಿ ಹೊತ್ತಿದ್ದೇಅವರುಅಕ್ಷರದ ಬೆನ್ನಿಗೆ ಬಿದ್ದಾಗ,ಕಾಲೇಜು ನಗರಗಳ ಮಡಿಲಿಗೆ ಬಂದಾಗ.ಇಲ್ಲಿಅನ್ನ ಪಡೆವುದುಕರುಣೆಯ,ದೀನತೆಯಸಂಗತಿಯಾಗಿ ನಿಲ್ಲದೆಅರಿವಿನ ಎಳೆಯಾಗಿಬೆಳೆದಿದೆ.ಅಕ್ಷರವು ಬೆಳೆದಂತೆಅವರಲ್ಲಿ ಪ್ರಖರವಿಚಾರವೂ  ಸ್ಫೋಟಗೊಂಡಿದೆ.ಇಲ್ಲಿ ಲೇಖಕರುಮೊದಲಿನಂತೆಅನ್ನದೆದುರು ಮುಗ್ದವಾಗಿ ವರ್ತಿಸದೇಅನ್ನ ಪಡೆಯಲು ಕಿಲಾಡಿತನ,ಕೀಟಲೆಗಳೆಲ್ಲಾ ಇಣುಕುತ್ತವೆ.
‘ಸಹನಾಭವತು..’ಎಂದಪರಂಪರಾಗತಸಮಾಜದಲಿತರಿಗೆಒಟ್ಟಿಗೆಕೂಡಿಸಿ ಅನ್ನಹಂಚುತ್ತಿರಲಿಲ್ಲ. ‘ಕಾಗೆಯೊಂದಗುಳಕಂಡರೆಕರೆಯದೆತನ್ನಬಳಗವನು?’ಎಂದಅರಿವಿನ ಸಮಾಜವೂ ಇವರೊಳಗಿನ ಭಕ್ತರಲ್ಲದವರನ್ನ ಹೊರಗಿಟ್ಟಿತ್ತು. ಆ ಕಾರಣಕ್ಕೋ ಏನೋ ಕೇರಿಗಳಲ್ಲಿಅನ್ನಕ್ಕಾಗಿಚೌಕಟ್ಟು ಮೀರುವ ಅನೇಕ ಬಗೆಯ ಕಥನಗಳಿರುವುದನ್ನ ನಾವು ನೋಡಬಹುದು.ಹಳ್ಳಿ ಒಡಲೆಂದರೆ ಕೆಲವರಿಗೆ ಪವಿತ್ರ ಸ್ಥಳವಾದರೆ ದಲಿತರಿಗೆಅದು ಪ್ರಾಣಿಗಿಂತಲೂ ಕೀಳಾಗಿ ನೋಡಿದ ನೋವಿನ ಸೆಲೆ.ಅಂತಹಒಂದುಉದಾಹರಣೆಇಲ್ಲಿದೆ“ಒಂದುದಿನನಾನುಜೋರಾಗಿಓಡುತ್ತಿದ್ದೆ. ಎದುರಿಗೆಬರುತ್ತಿದ್ದವರಬಟ್ಟೆಗೆನನ್ನ ಕೈಸೋಂಕಿತು ಆ ವ್ಯಕ್ತಿನಿಂತುಬಿಟ್ಟ.ನಾನೂಗಾಬರಿಗೊಂಡುನಿಂತುಬಿಟ್ಟೆ.ಅಜ್ಜಿ ಆ ವ್ಯಕ್ತಿಯನ್ನಪರಿಪರಿಯಾಗಿಬೇಡಿಕೊಂಡಮೇಲೆಆತಹೊರಟುಹೋದ.ಆತಕೋಪಗೊಂಡಿದ್ದು ಸವರ್ಣೀಯನಾದಆತನನ್ನ ನಾನು ಮುಟ್ಟಿದೆ ಎಂಬ ಕಾರಣಕ್ಕೆ.ನನ್ನಅಚಾತುರ್ಯದಿಂದ ಮೇಲುಜಾತಿಯವರ ಕೋಪಕ್ಕೆ ತುತ್ತಾಗಿ ಬಿಡಬಹುದೆಂದುಅಜ್ಜಿ ಹೆದರಿದಳು.ಅಂದಿನಿಂದ ನನಗೆ ಓಡಬಾರದೆಂದೂತಾಕೀತು ಮಾಡಿದಳು.
ಪ್ರಾರ್ಥಿಸಿಊಟವನ್ನ ಮಾಡಬೇಕೆಂಬುದುಪರಂಪರೆಯಚೌಕಟ್ಟು ಬಯಸುವಆಚರಣೆ.ಅದನ್ನ ಮೀರಿದವರಿಗೆ ಹಾಸ್ಟಲಿನಲ್ಲಿ ಊಟ ನೀಡದ ಶಿಕ್ಷೆ ಇದ್ದುದರಿಂದಲೇ ಊಟ ಮುಖ್ಯವೆಂದವರುರೇಜಿಗೆಯಾದರೂ ಬಂದು ಪ್ರಾರ್ಥಿಸುತ್ತಿದ್ದರು. ಹೀಗೆ ಪ್ರಾರ್ಥಿಸದವನೊಬ್ಬ ಬೀದಿ ನೀರನ್ನೇಯಥೇಚ್ಚವಾಗಿಕುಡಿಯುತ್ತಒಂದು ದಿನ ಇದ್ದಕ್ಕಿದ್ದಂತೆ ಸಾಯುವ ಪ್ರಸಂಗವಿಲ್ಲಿದೆ.ರೂಢಿಯವಿರುದ್ಧ ಬಂಡೇಳುವುದು ಕೆಲವರರಕ್ತಗುಣ.ಅದು ಸಂಪ್ರದಾಯದ ವೇಷತೊಟ್ಟರೂ ವೇಷ ಬಯಲಾದಾಗತನ್ನ ಮೂಲ ಗುಣಕ್ಕೇಅದು ಮರಳಿಬಿಡುತ್ತದೆ.ಇಂತಹ ಬಂಡುಕೋರುತನದ ಚಿತ್ರಗಳೂ ಇಲ್ಲಿವೆ. “ಗಾಂಧಿ ವಿದ್ಯಾರ್ಥಿನಿಲಯದ ದಲಿತವಿದ್ಯಾರ್ಥಿಗಳು ಉಚಿತ ಊಟ,ವಸತಿ ಸೌಲಭ್ಯ ಪಡೆದಿದ್ದರು.ಅಲ್ಲಿ ಪ್ರತಿವರ್ಷಉಪಾಕರ್ಮದ ದಿನ ಯಜ್ಞ ಮಾಡುತ್ತಿದ್ದರು. ಸಂಸ್ಕøತ ಶ್ಲೋಕ ಪಠಿಸುತ್ತಿದ್ದರು.ಜನಿವಾರಧರಿಸುತ್ತಿದ್ದರು. ಇವರು ಮಾಂಸದಿಂದದೂರವಿಬೇಕಿತ್ತು.ಆದರೆಒಬ್ಬ ಹುಡುಗ ಮಿಲಿಟರಿ ಹೋಟೇಲಿನಲ್ಲಿ ಮಾಂಸಾಹಾರವನ್ನು ಸೇವಿಸುತ್ತಿದ್ದ.ಕೆಲವರುಇದನ್ನ ಆಕ್ಷೇಪಿಸಿದರು.ಅವನು ಜನಿವಾರದಿಂದಲೇಇದೆಲ್ಲಾಆದದ್ದುಎಂದುಕೋಪದಿಂದ ಜನಿವಾರವನ್ನುತೆಗೆದುಅದರಿಂದತನ್ನ ಹರಿದ ಬಟ್ಟೆಯನ್ನ ಹೊಲೆದುಕೊಂಡ.”
 ಬಾಲ್ಯದಲ್ಲಿ ಶಾಲೆಯ ಚೀಲದೊಳಗೆ ಉಪ್ಪು ಮತ್ತು ಮುದ್ದೆ ಹಾಕಿಕೊಂಡು ಹೋಗುವ ಪ್ರಸಂಗಉಳ್ಳವರಿಗೆ ನಗೆ ಪಾಟಲಿನ ಎಳೆಯಂತೆ ಕಂಡರೆ ಆಳದ ಕೇರಿಜನಕ್ಕೆಅದು ಮರೆಯಲಾಗದ ನೋವಿನ ಎಳೆಯಂತೆ ಕಲಕುತ್ತದೆ.ಊಟಕೊಡಲಾಗದಅಪ್ಪಂದಿರ ವಿರುದ್ಧ ಮಕ್ಕಳು ಬಂಡೇಳುವ ಕ್ರಿಯೆದಲಿತ ಮಕ್ಕಳು ರೂಢಿಯಚೌಕಟ್ಟನ್ನೇ ಮೀರುವಉದಾಹರಣೆಯಂತಿವೆ. “ನನ್ನನ್ನಸಾಕಲುಆಗದಿದ್ದರೆಯಾಕೆ ಹುಟ್ಟಿಸಬೇಕಾಗಿತ್ತು”ಎನ್ನುವಒರಟು ಪ್ರಶ್ನೆಯಮಕ್ಕಳು,ಹೆಚಿಡತಿಯ ಹೊಡೆತತಡೆಯಲಾಗದೆ ಮನೆಯಮಾಳಿಗೆ ಏರಿ ಕುಳಿತು ಕೊಳ್ಳುವ ಗಂಡ,“ಮನೆಗೆಸರಿಯಾಗಿತಂದುಹಾಕಲುಆಗದಿದ್ದರೆನನ್ನನ್ನಯಾಕೆ ಕಟ್ಟಿಕೊಳ್ಳಬೇಕಾಗಿತ್ತುಎಂದು ಕೇಳುವಗಟ್ಟಿಗಿತ್ತಿಪತ್ನಿ,ಕುಡಿವವರು, ನಿತ್ಯ ಬಡಿವವರು,ರೌಡಿಗಳನ್ನೇ ಬೆದರಿಸುವವರು,ಕುಡಿದು ಬೀದಿಯಲ್ಲೇ ಮಲಗುವ ಗಟ್ಟಿಗಿತ್ತಿಇವರೆಲ್ಲರನ್ನ ಒಳಗೊಂಡ ‘ಊರುಕೇರಿ’ಬಗೆ ಬಗೆಯ ಹಸಿವಿನ ಕತೆಯಂತೆಕಾಣುತ್ತದೆ.ಇವು  ಕೇಳಲು ಆಸಕ್ತಿದಾಯಕವಾಗಿಕಂಡರೂ, ಸುಂದರ ರಸ್ತೆಗಳ ಚಂದನೆಯ ಮನೆಗಳ ಮೃದುವಾದ ಮಾತುಗಳ ನಾಜೂಕಿನ ನಗರದಮನೆಯ ಬದುಕೆಂಬಚೌಕಟ್ಟಿನಎದುರುಆತಂಕಕಾರಿಯಂತೆಕಾಣಬಲ್ಲವು.
ಹಳ್ಳಿಯ ಮುಗ್ದ ಹುಡುಗ ನಗರದಅರಿವಿಗೆತೆರೆಕೊಂಡಮೇಲೆಹಳ್ಳಿಯ ಧಾರ್ಮಿಕಕ್ರೌರ್ಯದದಾರಿಯರೂಪವನ್ನತೋರುತ್ತಾಹೋಗುತ್ತಾನೆ.ಧಾರ್ಮಿಕ ನಂಬಿಕೆಯ ಈ ಛೇದನವೂ ವಕ್ರಮಾರ್ಗದ್ದೇ.“ನಾನು ಪೋಲಿ ಹುಡುಗರಜೊತೆ ಸೇರಿ ಹಾಳಾದೆನೆಂದು ತಂದೆತಾಯಿ ಭಾವಿಸಿದರು.ಇದಕ್ಕಾಗಿ ನನ್ನನ್ನದೂರದಲ್ಲಿದ್ದ ಶನಿ ಮಹಾತ್ಮನದೇವಸ್ಥಾನಕ್ಕೆಕರೆದುಕೊಂಡು ಹೋದರು.ಪೂಜಾರಿಗೆ ನನ್ನ ಮೇಲೆ ದೂರನ್ನೂ ಹೇಳಿದರು.ಪೂಜಾರಿಯು ಈ ಹುಡುಗನನ್ನ ಒಳ್ಳೆಯ ದಾರಿಗೆತರುತ್ತೇನೆಎಂದು ಹೇಳಿದ.ನನ್ನ ತಲೆಗೆ ನವಿಲುಗರಿಯಗುಚ್ಚದಿಂದ ಹೊಡೆದುತಲೆಯ ಮೇಲೆ ಕಿರೀಟಇಟ್ಟ. ನನಗೆ ಇದುತಮಾಷೆಯಂತೆಕಂಡುಕಿರೀಟದೊಂದಿಗೆ ಓಡಲಾರಂಭಿಸಿದೆ.ಪೂಜಾರಿ ತಂದೆತಾಯಿಎಲ್ಲರೂಗಾಬರಿಯಿಂದ ನನ್ನ ಹಿಂದೆಯೇಓಡಿಬಂದರು. ಪೂಜಾರಿಗೆ ಈ ಹುಡುಗ ಹಾಳಾದರೆ ಆಗಲಿ, ಕಿರೀಟ ಸಿಕ್ಕಿದರೆ ಸಾಕು ಎನ್ನಿಸಿತು.”
ಅಪ್ಪಟ ಹಳ್ಳಿಯ ಮತ್ತು ನಗರದ ಸ್ಲಂಜಗತ್ತಿನಸಾಮಾಜಿಕಒರಟುತನದಲ್ಲಿ ಅರಳುವ ಇಲ್ಲಿನ ಕಥನಗಳಲ್ಲಿ ಹಸಿವಿನೊಂದಿಗೆ ದೇಹದ ಹಸಿವಿನ ಬೆಸುಗೆಯಬಂಡುಕೋರತನವೂಕಾಣುತ್ತವೆ.ಲೋಕದಮನೆಯಜಗತ್ತು ಸ್ಮಶಾನದಲ್ಲಿಕೊನೆಗೊಂಡರೆಇಲ್ಲಿ ಸ್ಮಶಾನದಜಗತ್ತಿನೊಂದಿಗೆಕವಿಯಜೀವನದವಿಕಾಸ ಶುರುವಾಗುತ್ತದೆ.
ಹಸಿವಿನಂತೆಯೇ ದಲಿತರಧಾರ್ಮಿಕ ಹಸಿವಿನ ನಾನಾ ರೂಪಗಳೂ ಇಲ್ಲಿವೆ .ಗಂಡ ಬಿಟ್ಟ ಹೆಣ್ಣಿನೊಳಗೆ ಕಾಣುವಜಲ್ದಗೆರೆಅಮ್ಮ, ಊರೂರು ಸುತ್ತಿ ಬಂದು ಕಷ್ಟ ಸುಖದ ಪ್ರಶ್ನೆಗಳಿಗೆ ಉತ್ತರಿಸುವದೇವರು.ಮಡಿ ಮೈಲಿಗೆ ಸಾರುವದೇವರು ಹೀಗೆ ನಾನಾ ದೇವರುಗಳಿರುವಂತೆಯೇ ದೇವರ ಮತ್ತುಧರ್ಮದ ನಾನಾ ವಿಮರ್ಶೆಗಳೂ ಇಲ್ಲಿವೆ. ಧಾರ್ಮಿಕ ಬಂಡುಕೋರುತನಮೆಲ್ಲಗೆಬೆಳೆಯುತ್ತಾ ಹೋಗುವ ಇಲ್ಲಿನ ಕಾಲು ಹಾದಿಗೆ ಬುನಾದಿಯಂತೆ ವಿಚಾರವಾದಿಗಳೂ, ಪ್ರಗತಿಪರರೂ,ಮಾಕ್ರ್ಸವಾದಿಗಳೂ, ಅಂಬೇಡ್ಕರ್,ಪುಲೆ,ಪೆರಿಯಾರ್,ಕೇವೂರ್ ಮೊದಲಾದಚಿಂತಕರೂಇಲ್ಲಿ ಸುಳಿದಿದ್ದಾರೆ.ಆರಂಭದಲ್ಲಿ ಸಂಕಟದ ನೋವಿನ ಎಳೆಯಲ್ಲಿ ಬಿಚ್ಚಿಕೊಂಡ ಈ ಕಥನವು ನಗುವಿನ ಮತ್ತು ವಿಚಾರ ಶೀಲ ಬೆಳಕಿನಲ್ಲಿ ಅರಳುತ್ತಾ ಹೊರಟುಅನ್ನವೆಂಬ ನೆಮ್ಮದಿಯ ಕೆಲಸದ ಖಾಲಿ ಕುರ್ಚಿಯಲ್ಲಿ ವಿರಮಿಸುವತನಕ ಚಲಿಸುತ್ತಾ ಹೋಗಿದೆ.
Girl in a jacket
error: Content is protected !!