ವಿಷಾದ ಗಾಥೆ 1
ಬೇಯುತಿದೆ ಕಾಲ
ಜೀವಾತ್ಮಗಳಲಿ ಹರಿದಿದೆ ಹಾಲಾಹಲ
ಬೇಗುದಿಯಲಿ ಭವದ ಬವಣೆ ನರಳುತ್ತಿದೆ
ದಾರಿ ಸವೆಯುತ್ತಿಲ್ಲ
ಬಹುದೂರ ಇದೆ ಪಯಣ
ಕೈದೀವಿಗೆಗೆ ಹಾದಿಯ ಅರಿವಿಲ್ಲ
ವಿಷಾದ ಗಾಥೆ 2
ಕಡಲ ದೇವಿಯೆ
ನೀನೇಕೆ ಹೀಗೆ ಮೊರೆಯುತ್ತೀಯ
ಇಷ್ಟೇಕೆ ನೀನು ಉಪ್ಪಾಗಿದ್ದೀಯಾ
ಕೇಳು ಮಗು
ನಿನ್ನಪ್ಪ ಕಿನಾರೆಯಲಿ ಮುಳುಗಿಹೋದ
ನಿನ್ನಮ್ಮನ ಕಣ್ಣೀರು ನನ್ನೊಡಲಸೇರುತಲೇಯಿದೆ
ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ
9448970731