ನಂದಿನಿ ಪ್ರಸಾದ್
ನಂದಿನಿ ಪ್ರಸಾದ್ ಅವರು ಕಳೆದ 15 ವರ್ಷಗಳಿಂದ ಯೋಗ ತರಬೇತಿ ನೀಡುತ್ತಿದ್ದಾರೆ,ಹಲವಾರು ಯೋಗ ಸಮಾವೇಶ,ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ.ಹಾಗೆಯೇ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.ಇವರು ಇನ್ನೂ ಮುಂದೆ ಪ್ರತಿ ದಿನ ನಿತ್ಯಯೋಗ ದಲ್ಲಿ ಯೋಗ ಕುರಿತು ಬರೆಯುತ್ತಾರೆ
ಯೋಗ ಮತ್ತು ಅದರ ತಿಳುವಳಿಕೆ
ಕೋವಿಡ್-19 ಸಂದರ್ಭದಲ್ಲಿ ಮನೆಯಲ್ಲಿಯೇ ಕುಟುಂಬದ ಜೊತೆಗೆ 7 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸೋಣ. ಯೋಗದಿಂದ ಜನರಿಗೆ ತಮ್ಮ ರೋಗ ನಿರೋಧಕ ಶಕ್ತಿಯ ಅರಿವು, ಬಲವಾದ ಮನಸ್ಸು ಮತ್ತು ಆರೋಗ್ಯಕರ ದೇಹವನ್ನು ಶಕ್ತಗೊಳಿಸುವ ಅವಕಾಶ ನೀಡುತ್ತದೆ. ಮಾನಸಿಕ, ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ಪೂರೈಸುವ ಸಾಮರ್ಥ್ಯ ಯೋಗಕ್ಕೆ ಇದೆ.
ನರೇಂದ್ರ ಮೋದಿ
ಸೆಪ್ಟೆಂಬರ್ 27, 2014 ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್ಜಿಎ) ತಮ್ಮ ಭಾಷಣದಲ್ಲಿ ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಡೆಸುವ ಪ್ರಸ್ತಾಪವನ್ನು ಮಾಡಿದರು. ಯೋಗದ ಏಕತೆಯನ್ನು ಸಾಕಾರಗೊಳಿಸುವಂತೆ ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಮನಸ್ಸು ಮತ್ತು ದೇಹ; ಚಿಂತನೆ ಮತ್ತು ಕ್ರಿಯೆ; ಸಂಯಮ ಮತ್ತು ನೆರವೇರಿಕೆ; ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಾಮರಸ್ಯ; ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಮಗ್ರ ವಿಧಾನ. ಪ್ರಸ್ತಾವನೆಯ ನಂತರ ಯುಎನ್ಜಿಎ ಕರಡು ನಿರ್ಣಯದ ಬಗ್ಗೆ ಅನೌಪಚಾರಿಕ ಸಮಾಲೋಚನೆ ನಡೆಸಿ ಒಪ್ಪಂದಕ್ಕೆ ಬಂದಿತು.
2014 ರ ಡಿಸೆಂಬರ್ 11 ರಂದು ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜೂನ್ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನ ಅಥವಾ ವಿಶ್ವ ಯೋಗ ದಿನವಾಗಿ ಘೋಷಿಸಲಾಯಿತು. ವಿಶ್ವ ಸಂಸ್ಥೆಯ 193 ರಾಷ್ಟ್ರಗಳ ಪೈಕಿ 177 ದೇಶಗಳು ಅನುಮೋದನೆಯನ್ನು ನೀಡಿದ್ದವು. 2015ರ ಜೂನ್ 21ನೇ ತಾರೀಖಿನಂದು ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ವಿಶ್ವದಾದ್ಯಂತ ಆಚರಿಸಲಾಯಿತು.
ಪ್ರತಿ ವರ್ಷ ಅಂತರರಾಷ್ಟ್ರೀಯ ಯೋಗ ದಿನವನ್ನು ಜೂನ್ 21 ರಂದು ಆಚರಿಸಲಾಗುವುದು. ವಿಶ್ವವು ಈ ವರ್ಷ ಏಳನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಿದೆ.
ಇಂದು ಅಂತರರಾಷ್ಟ್ರೀಯ ಯೋಗ ದಿನ. ನಮ್ಮ ಹಿಂದೂ ಧರ್ಮದ ಪ್ರತೀಕವಾಗಿ, ವಿಶ್ವಕ್ಕೆ ಭಾರತದ ಹೆಮ್ಮೆಯ ಕೊಡುಗೆಯಾದ ಯೋಗ , ತನ್ನ ಅನೇಕ ವಿಶಿಷ್ಠವಾದ ಗುಣಗಳಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮುನ್ನೆಲೆಗೆ ಬಂದು ಅದಕ್ಕೆಂದೇ ಒಂದು ದಿನವನ್ನು ವಿಶ್ವ ಮಟ್ಟದಲ್ಲಿ ಆಚರಿಸುತ್ತಿರುವುದು ನಮಗೆಲ್ಲಾ ಗರ್ವದ ಸಂಗತಿ. ಅನೇಕ ಖಾಯಿಲೆಗಳಿಗೆ, ನೋವು ಶಮನಕ್ಕೆ, ಒತ್ತಡ ನಿವಾರಣೆಗೆ, ದೈಹಿಕ ಕ್ಷಮತೆಗೆ, ಸದಾ ಲವಲವಿಕೆಯಿಂದ ಇರಲು ಯೋಗ ಸಹಕಾರಿ ಎಂಬುದು ನಮ್ಮ ದೇಶದಲ್ಲೇ ಅಲ್ಲ, ಅದು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ನಿರೂಪಿತವಾಗಿದೆ.
ಎಲ್ಲರಿಗೂ ಅಂತರರಾಷ್ಟ್ರೀಯ ಯೋಗದಿನದ ಶುಭಾಶಯಗಳು.
“ಯೋಗದೊಂದಿಗೆ ಇರಿ, ಮನೆಯಲ್ಲೇ ಇರಿ”